Welcome To Kannada News Today

ಚಾಲಕನ ನಿಯಂತ್ರಣ ತಪ್ಪಿದ ಟ್ರಕ್, ಇಬ್ಬರ ಧುರ್ಮರಣ

truck runs over autos, pedestrians, 2 dead, 2 injured 

🌐 Kannada News :

ಕನ್ನಡ ನ್ಯೂಸ್ ಟುಡೇ, ನವದೆಹಲಿ :

ಟ್ರಕ್‌, ಚಾಲಕನ ನಿಯಂತ್ರಣ ತಪ್ಪಿ ಮನ್ ಸಿಂಗ್ ರಸ್ತೆಯ ಇಂಡಿಯಾ ಗೇಟ್ ಬಳಿ ಆಟೋಗಳು ಮತ್ತು ಪಾದಚಾರಿಗಳ ಮೇಲೆ ಎರಗಿದೆ, ಘಟನೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ನಿಯಂತ್ರಣ ಕಳೆದುಕೊಂಡ ಟ್ರಕ್ ಮೊದಲು ಡಿವೈಡರ್ ಗೆ ಡಿಕ್ಕಿ ಹೊಡೆದು, ನಂತರ ಫುಟ್ಪಾತ್ ಮೇಲೆ ಇದ್ದ ಆಟೋಗಳು ಮತ್ತು ಪಾದಚಾರಿಗಳಿಗೆ ಅಪ್ಪಳಿಸಿದೆ.

ಈ ಘಟನೆಯಲ್ಲಿ ಸುಮಾರು 42 ವರ್ಷ ವಯಸ್ಸಿನ ಒಬ್ಬ ವ್ಯಕ್ತಿ ಸೇರಿದಂತೆ ಒಂದು ಮಗು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಸಧ್ಯ ಪ್ರಕರಣ ದಾಖಲಿಸಿರುವ ಪೊಲೀಸರು ವಾಹನದ ಚಾಲಕನನ್ನು ಬಂಧಿಸಿದ್ದಾರೆ.

ಚಾಲಕನ ವಿಚಾರಣೆ ನಡೆದಿದ್ದು, ಘಟನೆಯ ವೇಳೆ ಚಾಲಕ ಮಧ್ಯ ಸೇವಿಸಿದ್ದಾನೆ ಎಂದು ಪರೀಕ್ಷಿಸಲಾಗುತ್ತಿದೆ. ಮೇಲ್ನೋಟಕ್ಕೆ ಘಟನೆಯ ಮುಖ್ಯ ಕಾರಣ ವಾಹನದ ವೇಗ ಎಂದು ತಿಳಿದು ಬಂದಿದೆ… ////


Web Title : truck runs over autos, pedestrians, 2 dead, 2 injured 
(Kannada News : Get Live News Alerts Online Today @ kannadanews.today – Read Latest India News / National News Headlines, Breaking News in Kannada )

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.