Welcome To Kannada News Today

ಕೊರೋನಾವೈರಸ್ : ಕಾರಲ್ಲೇ ವೈದ್ಯರ ಊಟ, ನಿದ್ದೆ, ವಾಸ,

two doctors serving corona patients are Living in a car

🌐 Kannada News :

ಭೋಪಾಲ್ : ಕೊರೋನಾ ರೋಗಿಗಳಿಗಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರುಗಳು, ಆಸ್ಪತ್ರೆಯ ಸ್ಟೋರ್ ರೂಮ್ ಗಳಲ್ಲಿ, ಆಸ್ಪತ್ರೆಯ ಹೊರಾಂಡಲ್ಲಿ ಇಲ್ಲವೇ ತಮ್ಮದೇ ಕಾರಿನಲ್ಲಿ ಇದ್ದುಬಿಟ್ಟಿದ್ದಾರೆ. ರೋಗಿಗಳಿಗೆ ಶೂಶ್ರುಷೆ ನೀಡಿ, ನಂತರ ಕಾರಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರ ಈ ಸುದ್ದಿ ತಿಳಿಯುತ್ತಿದ್ದಂತೆ ನೆಟಿಜನ್‌ಗಳು ವೈದ್ಯರಿಗೆ ಹ್ಯಾಟ್‌ಸಾಫ್ ಸಲ್ಲಿಸಿದ್ದಾರೆ.

ವೈದ್ಯರ ಕಾರ್ಯವೈಖರಿಗೆ, ಶ್ಲಾಘಿಸಿದ್ದಾರೆ. ಹೌದು ಮಧ್ಯಪ್ರದೇಶದ ರಾಜಧಾನಿಯಾದ ಭೋಪಾಲ್‌ನ ಜೆಪಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ಸಚಿನ್ ನಾಯಕ್ ಮತ್ತು ಸಚಿನ್ ಪಾಟಿದಾರ್. ಕರೋನಾ ಪೀಡಿತರಿಗೆ ಸೇವೆ ಸಲ್ಲಿಸುತ್ತಿರುವುದರಿಂದ, ಮನೆಗೆ ಹೋಗಲು ಆಗುತ್ತಿಲ್ಲ. ಅವರು ಮನೆಗೆ ಹೋಗಿ ಕುಟುಂಬಗಳಿಗೆ ಅಪಾಯವನ್ನುಂಟುಮಾಡಲು ಇಷ್ಟವಿಲ್ಲದೆ, ಕಳೆದ ಕೆಲವು ದಿನಗಳನ್ನು ಕಾರುಗಳಲ್ಲಿ ವಾಸವಿದ್ದಾರೆ.

ಚಿಕಿತ್ಸೆಯ ಬಳಿಕ, ಕಾರಿನಲ್ಲಿ ವಿಶ್ರಾಂತಿ, ಅಗತ್ಯ ವಸ್ತುಗಳು ಮತ್ತು ಅಗತ್ಯ ಪುಸ್ತಕಗಳನ್ನು ಕಾರಿನಲ್ಲಿ ಇರಿಸಿಕೊಂಡಿದ್ದು, ಪುಸ್ತಕಗಳನ್ನು ಓದುವುದರಲ್ಲಿ ಸಮಯ ಕಳೆಯುವುದು, ಕುಟುಂಬ ಸದಸ್ಯರೊಂದಿಗೆ ದೂರವಾಣಿಯಲ್ಲಿ ಮಾತನಾಡುವುದು, ದಿನ ನಿತ್ಯದ ಕಾಯಕ. 

ಸಚಿನ್ ನಾಯಕ್ ಕಾರಿನಲ್ಲಿ ಕುಳಿತು ಪುಸ್ತಕ ಓದುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೋವಿಡ್ ಸೋಂಕಿನ ವಿರುದ್ಧ ಹೋರಾಡುತ್ತಿದ್ದರುವ ಈ ವೈದ್ಯರಿಗೆ ಅಲ್ಲಿನ ಸಿಎಂ ಸಹ ಧನ್ಯವಾದ ಅರ್ಪಿಸಿದ್ದಾರೆ. 

ಮೂವರು ಮಕ್ಕಳ ತಂದೆ ಸಚಿನ್ ನಾಯಕ್ ಪ್ರತ್ಯೇಕ ವಾರ್ಡ್‌ಗಳಲ್ಲಿ ಕೆಲಸ ಮಾಡುತ್ತಾರೆ. ನಾವು ಪ್ರತಿದಿನ ನೂರಕ್ಕೂ ಹೆಚ್ಚು ರೋಗಿಗಳನ್ನು ನೋಡುತ್ತೇವೆ. ವೈರಸ್ ಪರೀಕ್ಷೆಗೆ ಮಾದರಿಗಳನ್ನು ಸಂಗ್ರಹಿಸುತ್ತಾರೆ. ಇನ್ನು ಸಚಿನ್ ಪಾಟಿದಾರ್ ಅರಿವಳಿಕೆ ತಜ್ಞ. ಮಾರ್ಚ್ 31 ರಿಂದ ಅವರು ಕಾರಿನಲ್ಲಿಯೇ ಇದ್ದಾರೆ

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile