ಸಲಿಂಗ ಕಾಮಿ ಯುವತಿಯರು ನೇಣಿಗೆ ಶರಣು

Two Girls in same sex relationship ends life, Found Hanging

ಸಲಿಂಗ ಕಾಮಿ ಮಹಿಳೆಯರಿಬ್ಬರು ನೇಣಿಗೆ ಶರಣು

Two Girls in same sex relationship ends life, Found Hanging

ರಾಷ್ಟ್ರೀಯ – ಒರಿಸ್ಸಾ : ಒರಿಸ್ಸಾದ ಮಯೂರ್ಭಂಜ್ ಜಿಲ್ಲೆಯ ಇಬ್ಬರು ಯುವತಿಯರು, ಜಾರ್ಖಂಡ್ನ ಸರೀಕೆಲಾ ಖರ್ಸವನ್ ಜಿಲ್ಲೆಯ ಗಮಹರಿಯಾ ಪೋಲಿಸ್ ಸರಹದ್ದಿನ ಒಂದು ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಒರಿಸ್ಸಾದ ಮಯೂರ್ಭಂಜ್ ಜಿಲ್ಲೆಯ ಕುಲಿಯಾನಾ ಪ್ರದೇಶದಿಂದ ಇಬ್ಬರು ಯುವತಿಯರು ಕಾಣೆಯಾಗಿರುವ ಬಗ್ಗೆ ವರದಿಯಾಗಿತ್ತು.

ಮೂಲಗಳ ಪ್ರಕಾರ, ಇಬ್ಬರು ಯುವತಿಯರು ಇತ್ತೀಚೆಗೆ ವಾಸಗೊಂಡಿದ್ದ ಕೋಣೆಯ ಒಳಗೆ ತಮ್ಮನ್ನು ತಾವು ನೇಣು ಹಾಕಿ ಕೊಂಡಿದ್ದಾರೆ. ಮಯೂರ್ಭಂಜ್ನ ಸಮೀಪದ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಂಬಂಧಿಗಳು ತಮ್ಮ ಮಕ್ಕಳು ಕಾಣೆಯಾಗಿರುವ ಬಗ್ಗೆ ದೂರನ್ನು ಸಲ್ಲಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಸಾವಿಗೆ ನಿಖರ ಕಾರಣವು ಇನ್ನೂ ತಿಳಿದು ಬಂದಿಲ್ಲ , ಹಾಗೂ ಯಾವುದೇ ಡೆತ್ ನೋಟ್ ಕೂಡ ಪತ್ತೆಯಾಗಿಲ್ಲ. ಸ್ಥಳಕ್ಕೆ ಬಂಡ ಪೊಲೀಸರು ಪರಿಶೀಲಿಸಿ , ಪ್ರಾಥಮಿಕ ತನಿಖೆ ನಡೆಸಿದ್ದಾರೆ.

ಪೊಲೀಸ್ ಮೂಲಗಳ ಶಂಕೆಯಂತೆ  ಮೃತ ಮಹಿಳೆಯರು ಪರಸ್ಪರ ವಿವಾಹವಾಗಿದ್ದರು ಮತ್ತು ಸುಮಾರು ಒಂದು ವಾರದ ಹಿಂದಷ್ಟೇ ಆ ಮನೆಯಲ್ಲಿ ವಾಸಿಸುತ್ತಿದ್ದರು.

ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು ಮತ್ತಷ್ಟು ತನಿಖೆ ನಡೆಸಿದ್ದಾರೆ. ಜಾರ್ಖಂಡ್ನ ಗಮಹರಿಯಾ ಪೊಲೀಸ್ ಠಾಣೆ ಸಿಐ ಎಸ್ಕೆ ಮಿಶ್ರಾ ಈ ಬಗ್ಗೆ ಮಾತನಾಡಿ , ” ಇಬ್ಬರೂ ಯುವತಿಯರು ಪರಸ್ಪರ ಮದುವೆಯಾಗಿದ್ದಾರೆ, ಕುಟುಂಬಕ್ಕೆ ಹೆದರಿ ಮನೆ ಬಿತ್ತು ಬಂದು ಇಲ್ಲಿ ನೆಲೆಸಿರುವ ಬಗ್ಗೆ ತಿಳ್ದು ಬಂದಿದೆ , ಇನ್ನು ಈ ಬಗ್ಗೆ ತನಿಖೆ ಮುಗಿಯುವ ತನಕ ನಾವು ಖಚಿತವಾಗಿ ಏನನ್ನೂ ಹೇಳಲಾರೆವು.” ಏನು ತಿಳಿಸಿದ್ದಾರೆ.////

WebTitle : ಸಲಿಂಗ ಕಾಮಿ ಯುವತಿಯರು ನೇಣಿಗೆ ಶರಣು-Two Girls in same sex relationship ends life, Found Hanging

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : National News LatestNational News KannadaKannada Crime NewsKarnataka Crime News