Two Terrorists Killed: ಜಮ್ಮು-ಕಾಶ್ಮೀರದಲ್ಲಿ ಎನ್ಕೌಂಟರ್.. ಇಬ್ಬರು ಉಗ್ರರು ಹತರಾಗಿದ್ದಾರೆ
Two Terrorists Killed: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಬೇಟೆ ಮುಂದುವರಿದಿದೆ. ಕುಲ್ಗಾಮ್ನ ಅನಂತನಾಗ್ನಲ್ಲಿ ಶನಿವಾರ ಬೆಳಗ್ಗೆ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಬೇಟೆ ಮುಂದುವರಿದಿದೆ. ಕುಲ್ಗಾಮ್ನ ಅನಂತನಾಗ್ನಲ್ಲಿ ಶನಿವಾರ ಬೆಳಗ್ಗೆ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.
ಅನಂತನಾಗ್ನ ಸಿರ್ಮಾ ಪ್ರದೇಶ, ಕುಲ್ಗಾಮ್ನ ಚುಕ್ಕಿ ಸಮದ್ ಮತ್ತು ಡಿಎಚ್ ಪೋರಾ ಪ್ರದೇಶಗಳಲ್ಲಿ ಬಂದೂಕುಧಾರಿಗಳು ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರು ಮತ್ತು ಸಿಆರ್ಪಿಎಫ್ ಪಡೆಗಳು ದಾಳಿ ನಡೆಸಿವೆ. ಈ ವೇಳೆ ಗುಂಡಿನ ಚಕಮಕಿ ನಡೆದಿದೆ ಎಂದು ಕಾಶ್ಮೀರ ಐಜಿ ವಿಜಯ್ ಕುಮಾರ್ ಹೇಳಿದ್ದಾರೆ.
#AnantnagEncounterUpdate: 01 local #terrorist of proscribed #terror outfit LeT killed. Search in progress. Further details shall follow.
However, in the #encounter at #Kulgam, no terrorist has been neutralised yet. #Operation going on.@JmuKmrPolice https://t.co/iLPxZKm7rA— Kashmir Zone Police (@KashmirPolice) April 9, 2022
ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಭದ್ರತಾ ಪಡೆಗಳು ತಿಳಿಸಿವೆ. ಅನಂತನಾಗ್ನಲ್ಲಿ ಹತನಾದ ಉಗ್ರನನ್ನು ಲಷ್ಕರ್-ಎ-ತೊಯ್ಬಾ ಎಂದು ಗುರುತಿಸಲಾಗಿದ್ದು, ಜೈಶ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಗೆ ಸೇರಿದ ಉಗ್ರನನ್ನು ಕುಲ್ಗಾಮ್ನಲ್ಲಿ ಹತ್ಯೆ ಮಾಡಲಾಗಿದೆ. ಎರಡೂ ಪ್ರದೇಶಗಳಲ್ಲಿ ಭಯೋತ್ಪಾದಕರಿಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
Two Terrorists Killed In Two Separate Encounters In Jammu And Kashmir
Follow Us on : Google News | Facebook | Twitter | YouTube