ಅಪರೂಪದ ಫೋಟೋ ಶೇರ್ ಮಾಡಿದ ಯುಪಿ ಮುಖ್ಯಮಂತ್ರಿ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಮೋದಿಯವರೊಂದಿಗೆ ಇರುವ ಎರಡು ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಮೋದಿಯವರೊಂದಿಗೆ ಇರುವ ಎರಡು ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಎರಡು ಫೋಟೋಗಳನ್ನು ಯೋಗಿ ಜೀ ಅವರು ಹಂಚಿಕೊಂಡ ಕೆಲವೇ ದಿನಗಳಲ್ಲಿ ವೈರಲ್ ಆಗುತ್ತಿದೆ.

ಫೋಟೋದಲ್ಲಿ… ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಒಟ್ಟಿಗೆ ನಡೆಯುತ್ತಿರುವುದು ಕಾಣಬಹುದು, ಅವರು ಯಾವುದೋ ವಿಷಯದ ಬಗ್ಗೆ ಸುದೀರ್ಘ ಚರ್ಚೆ ನಡೆಸುತ್ತಿರುವ ಫೋಟೋ ರೀತಿ ಕಾಣುತ್ತಿದೆ. ಈ ಅಪರೂಪದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಎರಡು ಫೋಟೋಗಳನ್ನು ಪೋಸ್ಟ್ ಮಾಡಿರುವ ಯೋಗಿ ಆದಿತ್ಯನಾಥ್ .. ನವಭಾರತ ನಿರ್ಮಾಣಕ್ಕೆ ಬದ್ಧ ಎಂದು ಟ್ಯಾಗ್ ಮಾಡಿದ್ದಾರೆ. ಚಿಕ್ಕ ಕವಿತೆಯನ್ನೂ ಬರೆದಿದ್ದಾರೆ. “ನಾವು ನಮ್ಮ ಬದ್ಧತೆಯೊಂದಿಗೆ ಮುನ್ನಡೆಯುತ್ತಿದ್ದೇವೆ. ನಾವು ನಮ್ಮ ಮನಸ್ಸು ಮತ್ತು ಹೃದಯಗಳನ್ನು ದೇಶಕ್ಕೆ ಅರ್ಪಿಸಲು ಮತ್ತು ಹೊಸ ಭಾರತವನ್ನು ನಿರ್ಮಿಸಲು ಪ್ರತಿಜ್ಞೆ ಮಾಡಿದ್ದೇವೆ. ” ಎಂಬುವಂತೆ ಉಲ್ಲೇಖಿಸಿದ್ದಾರೆ. ಅಪರೂಪದ ಫೋಟೋ ಎಂದು ಹಲವರು ಈ ಫೋಟೋವನ್ನು ಶೇರ್ ಮಾಡುತ್ತಿದ್ದಾರೆ.