ದೆಹಲಿಯ ರೈಲ್ವೇ ಗೋಡೌನ್ನಲ್ಲಿ ಅಗ್ನಿ ಅವಘಡ
ಉತ್ತರ ದೆಹಲಿಯಲ್ಲಿ ಭಾನುವಾರ ಸಂಜೆ ಈ ದುರಂತ ನಡೆದಿದೆ. ಪ್ರತಾಪನಗರ ಮೆಟ್ರೋ ನಿಲ್ದಾಣದ ಬಳಿಯ ಸಬ್ಜಿ ಮಂಡಿಯಲ್ಲಿರುವ ಗಾಲಾ ರೈಲ್ವೆ ಗೋಡೌನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಉತ್ತರ ದೆಹಲಿಯಲ್ಲಿ ಭಾನುವಾರ ಸಂಜೆ ಈ ದುರಂತ ನಡೆದಿದೆ. ಪ್ರತಾಪನಗರ ಮೆಟ್ರೋ ನಿಲ್ದಾಣದ ಬಳಿಯ ಸಬ್ಜಿ ಮಂಡಿಯಲ್ಲಿರುವ ಗಾಲಾ ರೈಲ್ವೆ ಗೋಡೌನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಆದರೆ, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದರು. ಭಾನುವಾರ ಸಂಜೆ 4.25ರ ಸುಮಾರಿಗೆ ಸಬ್ಜಿ ಮಂಡಿಯಲ್ಲಿರುವ ರೈಲ್ವೆ ಗೋಡೌನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ನಿರ್ದೇಶಕ ಅತುಲ್ ಗರ್ಗ್ ಹೇಳಿದ್ದಾರೆ.
ಮಾಹಿತಿ ತಿಳಿದ ತಕ್ಷಣ 14 ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಅತುಲ್ ಗರ್ಗ್ ಹೇಳಿದ್ದಾರೆ. ಅಪಘಾತದ ಕಾರಣ ತಕ್ಷಣವೇ ತಿಳಿದುಬಂದಿಲ್ಲ. ಮೊದಲ ಎರಡು ಅಗ್ನಿಶಾಮಕ ವಾಹನಗಳನ್ನು ರವಾನಿಸಲಾಯಿತು. ನಂತರ ಏಳು.. ನಂತರ ಮತ್ತೊಂದು ಏಳು ಅಗ್ನಿಶಾಮಕ ದಳಗಳನ್ನು ಕಳುಹಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 16 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿದವು.
ಭಾರೀ ಬೆಂಕಿಯ ನಂತರ ಕಪ್ಪು ಹೋಗೆ ಪ್ರದೇಶವನ್ನು ಆವರಿಸಿದೆ. ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲವಾದರೂ ಅಪಾರ ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Video Fire Breaks Out At Railway Godown In North Delhi
Follow Us on : Google News | Facebook | Twitter | YouTube