Welcome To Kannada News Today

ಕಾಣೆಯಾದ ತಾಯಿ-ಮಗುವನ್ನು ಒಂದುಗೂಡಿಸಿದ ವಾಟ್ಸಪ್ ಮೆಸೇಜ್, ಈ ಸ್ಟೋರಿ ನೋಡಿ

Whatsapp post help police trace family of missing boy

🌐 Kannada News :

ಕಾಣೆಯಾದ ನಾಲ್ಕು ವರ್ಷದ ಬಾಲಕನನ್ನು ವಾಟ್ಸಾಪ್ ಸಂದೇಶ ಮತ್ತೆ ತಾಯಿಯ ಮಡಿಲಿಗೆ ಸೇರಿಸಿದೆ. ಆಂಧ್ರದ ವಿಜಯನಗರಂ ಜಿಲ್ಲೆಯ ಬಾಬ್ಬಿಲಿ ಟೌನ್‌ನ ಚಿನ್ನಾ ಬಜಾರ್ (ಸಣ್ಣ ಮಾರುಕಟ್ಟೆ) ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಬಾಲಕ ಏಕಾಂಗಿಯಾಗಿ ಅಲೆದಾಡುತ್ತಿದ್ದದ್ದನ್ನು ಪೊಲೀಸರು ಗಮನಿಸಿದ್ದಾರೆ. 

ಬಾಲಕನನ್ನು ವಿಚಾರಿಸಲಾಗಿ ಆತ ತನ್ನ ಹೆತ್ತವರ ಹೆಸರು ಮತ್ತು ಅವನ ಪ್ರದೇಶವನ್ನು ಹೇಳಲು ಸಾಧ್ಯವಾಗಲಿಲ್ಲ… ಚಿಕ್ಕ ಬಾಲಕನಾದರಿಂದ ಪೋಷಕರ ಮಾಹಿತಿ ತಿಳಿಯಲಾಗಲಿಲ್ಲ.

ಪೊಲೀಸ್ ಇನ್ಸ್‌ಪೆಕ್ಟರ್ ಇ ಕೇಶವ ರಾವ್ ನೇತೃತ್ವದ ಪೊಲೀಸರು ಬಾಲಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ಬಾಲಕನ ಹೆತ್ತವರ ವಿವರಗಳನ್ನು ಸಂಗ್ರಹಿಸಲು ಬಿಸ್ಕತ್ತು ಮತ್ತು ಚಾಕಲೇಟ್‌ಗಳನ್ನು ನೀಡಿದರು. ಆದರೆ, ಹುಡುಗ ತನ್ನ ಕುಟುಂಬ ಮತ್ತು ಅವನ ಪ್ರದೇಶದ ವಿವರಗಳನ್ನು ಹೇಳಲು ವಿಫಲನಾದನು. ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತು.

ಕೊನೆಗೆ ಪೊಲೀಸ್ ಅಧಿಕಾರಿ ಕೇಶವ ರಾವ್ ತನ್ನ ಮೊಬೈಲ್ ಫೋನ್‌ನಲ್ಲಿ ಬಾಲಕನ ಫೋಟೋ ಕ್ಲಿಕ್ ಮಾಡಿ ಬಾಲಕನ ಹೆತ್ತವರನ್ನು ಪತ್ತೆ ಹಚ್ಚಲು ಇನ್ಸ್ಟೇಟ್ ಮೆಸೇಜಿಂಗ್ ಸೇವೆಯನ್ನು ಬಳಸಿಕೊಂಡರು. ವಿವಿಧ ಗುಂಪುಗಳಿಗೆ ಇದನ್ನು ಶೇರ್ ಮಾಡಿದರು.

ವಾಟ್ಸಾಪ್ ಗ್ರೂಪ್ ಒಂದರಲ್ಲಿ ಹುಡುಗನ ಫೋಟೋವನ್ನು ಗಮನಿಸಿದ ಯುವಕನೊಬ್ಬ ಬಾಲಕನ ತಾಯಿಗೆ ಮಾಹಿತಿ ನೀಡಿದ್ದಾನೆ. ಮಹಿಳೆ ತಕ್ಷಣ ಪೊಲೀಸ್ ಠಾಣೆಗೆ ದೌಡಾಯಿಸಿ, “ತಾನು ಆಹಾರ ತಯಾರಿಸುವಾಗ ಮಗ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದನು ಮತ್ತು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ” ಎಂದು ಪೊಲೀಸರಿಗೆ ಮಾಹಿತಿ ನೀಡಿದರು.

ಪೊಲೀಸ್ ಠಾಣೆಯಲ್ಲಿ ತನ್ನ ತಾಯಿಯನ್ನು ನೋಡಿದ ಬಾಲಕ ತಕ್ಷಣ ಅವಳನ್ನು ತಬ್ಬಿಕೊಂಡು ಅಳಲಾರಂಭಿಸಿದನು. ಪೊಲೀಸರು ಬಾಲಕನನ್ನು ತನ್ನ ತಾಯಿಯೊಂದಿಗೆ ಮತ್ತೆ ಒಂದುಗೂಡಿಸಿದ್ದಕ್ಕಾಗಿ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕೋವಿಡ್ -19 ಲಾಕ್ ಡೌನ್ ಸಮಯದಲ್ಲಿ ಮಕ್ಕಳನ್ನು ಜಾಗ್ರತೆಯಿಂದ ನೋಡಿಕೊಳ್ಳಬೇಕೆಂದು ಆ ತಾಯಿಗೆ ಪೊಲೀಸರು ಮನವಿ ಮಾಡಿದರು.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.