Welcome To Kannada News Today

ಅತ್ಯಾಚಾರಿಗಳನ್ನು ಕ್ಷಮಿಸಿಬಿಡಿ ಎನ್ನಲು ಇಂದಿರಾ ಜೈ ಸಿಂಗ್ ಯಾರು

who is Indira Jai ​Singh to Says Forgive the Rapists

🌐 Kannada News :

ಕನ್ನಡ ನ್ಯೂಸ್ ಟುಡೇ – India News

ನವದೆಹಲಿ : ಅತ್ಯಾಚಾರ ಆರೋಪಿಗಳನ್ನು ಕ್ಷಮಿಸಿಬಿಡಿ ಎಂದು ತನಗೆ ಸಲಹೆ ನೀಡಿರುವ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಿರುದ್ಧ ೨೦೧೨ರ ದಿಲ್ಲಿ ಗ್ಯಾಂಗ್‌ರೇಪ್ ಸಂತ್ರಸ್ತೆಯ ತಾಯಿ ಆಶಾದೇವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಎಎನ್‌ಐಯೊಂದಿಗೆ ಮಾತನಾಡಿದ ಆಶಾದೇವಿ,’’ಇಂತಹ ಸಲಹೆ ನೀಡಲು ಇಂದಿರಾ ಜೈಸಿಂಗ್ ಯಾರು? ಅತ್ಯಾಚಾರ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಇಡೀ ದೇಶ ಬಯಸುತ್ತಿದೆ. ಇಂತಹ ಸಲಹೆ ನೀಡಲು ಇಂದಿರಾ ಜೈಸಿಂಗ್‌ಗೆ ಹೇಗೆ ಧೈರ್ಯ ಬಂತೊ ಗೊತ್ತಿಲ್ಲ. ನಾನು ಸುಪ್ರೀಂಕೋರ್ಟ್ನಲ್ಲಿ ಕಳೆದ ಕೆಲವು ವರ್ಷಗಳಿಂದ ಅವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ಅವರು ಒಂದು ಬಾರಿಯೂ ನನ್ನ ಯೋಗಕ್ಷೇಮ ವಿಚಾರಿಸಿಲ್ಲ. ಇಂದು ಅವರು ಅಪರಾಧಿಗಳ ಪರ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳು ಅತ್ಯಾಚಾರಿಗಳಿಗೆ ಬೆಂಬಲ ನೀಡುತ್ತಾ ಜೀವನ ಸಾಗಿಸಿದರೆ, ಅತ್ಯಾಚಾರ ಘಟನೆಗಳು ನಿಲ್ಲುವುದಿಲ್ಲ’’ ಎಂದರು.

ಶುಕ್ರವಾರ ಟ್ವೀಟ್ ಮಾಡಿದ ಇಂದಿರಾ ಜೈಸಿಂಗ್, ‘’ಆಶಾದೇವಿ ಅವರ ನೋವನ್ನು ನಾನು ಸಂಪೂರ್ಣ ಅರ್ಥಮಾಡಿಕೊಳ್ಳಬಲ್ಲೆ. ಅತ್ಯಾಚಾರದ ಅಪರಾಧಿಗಳನ್ನು ಕ್ಷಮಿಸುವ ಮೂಲಕ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯ ಮಾದರಿಯನ್ನು ಅನುಸರಿಸುವಂತೆ ನಾನು ಆಶಾದೇವಿ ಬಳಿ ವಿನಂತಿಸಿಕೊಳ್ಳುವೆ’’ಎAದು ಬರೆದಿದ್ದರು. ಸೋನಿಯಾ ಗಾಂಧಿ ಅವರು ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹಂತಕರ ಪೈಕಿ ಒಬ್ಬಳಾಗಿರುವ ನಳಿನಿಗೆ ಕ್ಷಮಾದಾನ ನೀಡಿದ್ದರು. ನಳಿನಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು.////

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.