ನಾಲ್ಕು ದಿನವಾದ್ರೂ ಗಂಡನ ಅಂತ್ಯಕ್ರಿಯೆ ಮಾಡದ ಹೆಂಡತಿ, ಏನ್ ಕಾರಣ ?

ಮಹಿಳೆಯೊಬ್ಬಳು ತನ್ನ ಗಂಡನ ಅಂತ್ಯಕ್ರಿಯೆಯನ್ನು ನಾಲ್ಕು ದಿನಗಳ ಕಾಲ ತಡೆಯಲು ಕಾರಣವೇನು ? ಈ ಸುದ್ದಿ ಓದಿ

ನಾಲ್ಕು ದಿನವಾದ್ರೂ ಗಂಡನ ಅಂತ್ಯಕ್ರಿಯೆ ಮಾಡದ ಹೆಂಡತಿ, ಏನ್ ಕಾರಣ ?

( Kannada News Today ) : ಸಿದ್ದಾರ್ಥನಗರ : ಉತ್ತರ ಪ್ರದೇಶದ ಸಿದ್ದಾರ್ಥನಗರ ಜಿಲ್ಲೆಯ ಉಸ್ಕಾ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ರೆಹ್ರಾ ಬಜಾರ್ ಪ್ರದೇಶದ ಮಹಿಳೆಯೊಬ್ಬಳು ತನ್ನ ಗಂಡನ ಅಂತ್ಯಕ್ರಿಯೆಯನ್ನು ನಾಲ್ಕು ದಿನಗಳ ಕಾಲ ತಡೆದಳು.

ಅವರು ವಾಸಿಸುತ್ತಿದ್ದ ಮನೆ ತನ್ನ ಹೆಸರಿನಲ್ಲಿ ಬರೆದ ನಂತರವೇ ಗಂಡನ ಅಂತ್ಯಕ್ರಿಯೆಯನ್ನು ನಡೆಸಬೇಕೆಂದು ಆಕೆ  ಹಠಕ್ಕೆ ಬಿದ್ದಳು.

ತನ್ನ ಪತಿ ನಾಲ್ಕು ವರ್ಷಗಳ ಹಿಂದೆ ಮನೆಯನ್ನು ಮಾರಿದ್ದಾರೆ ಎನ್ನಲಾಗುತ್ತಿದ್ದು, ಮನೆಯನ್ನು ಯಾರೋ ಆಕ್ರಮಿಸಿಕೊಂಡಿದ್ದಾರೆ ಎಂಬ ಬಗ್ಗೆ ನ್ಯಾಯಾಲಯದಲ್ಲಿ ವಿವಾದವಿದೆ ಎಂದು ಆಕೆ ಆರೋಪಿಸಿದ್ದಾರೆ.

ಈ ನಡುವೆ ದೇಹವನ್ನು ನಾಲ್ಕು ದಿನಗಳವರೆಗೆ ಬಿಟ್ಟಿದ್ದರಿಂದ ರೋಗ ಹರಡಬಹುದು ಎಂಬ ಆತಂಕ ಅಕ್ಕಪಕ್ಕದ ಜನರಿಗೆ ಸೃಷ್ಟಿಯಾಗಿತ್ತು.

ವಿಷಯ ತಿಳಿದ ಪೊಲೀಸರು, ಆಡಳಿತ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದರು. ಈ ವಿಷಯದ ಬಗ್ಗೆ ಅವರು ಮೃತನ ಪತ್ನಿ ಅಂಜು ಜೈಶ್ವಾಲ್ ಅವರಿಗೆ ಎಷ್ಟೇ ಹೇಳಿದರೂ ಆಕೆ ಕೇಳಲಿಲ್ಲ.

ಈ ಹಿನ್ನೆಲೆಯಲ್ಲಿ ಸ್ವಲ್ಪ ಸಮಯದ ವಿವಾದದ ನಂತರ, ಬಲವಂತವಾಗಿ ಮೃತನ ಸಹೋದರ ತನ್ನ ಸಹೋದರನ ಶವವನ್ನು ಅಂತ್ಯಸಂಸ್ಕಾರ ಮಾಡಿದರು.

ಕುಟುಂಬ ಸದಸ್ಯರ ಪ್ರಕಾರ, ರೆಹ್ರಾ ಬಜಾರ್ ನಿವಾಸಿ ಗಜೇಂದ್ರ ಪ್ರಸಾದ್ ಮೃತಪಟ್ಟವರು. ಅವರು ತಮ್ಮ ಮನೆಯನ್ನು 2016 ರಲ್ಲಿ ರಾಜು ಚಪಾಡಿಯಾಗೆ ಮಾರಿದ್ದಾರೆ.

ಆದರೆ, ಗಜೆಂದ್ರ ಅವರ ಪತ್ನಿ “ತನ್ನ ಗಂಡ ಉತ್ತಮ ಮನಸ್ಥಿತಿಯಲ್ಲಿಲ್ಲದಿದ್ದಾಗ ಮನೆಯನ್ನು ಮಾರಿದ್ದಾರೆ” ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದಳು. ಪ್ರಸ್ತುತ ಪ್ರಕರಣ ಬಾಕಿ ಇದೆ.

ಅಷ್ಟರಲ್ಲಿ ಗಜೇಂದ್ರ ನಿಧನರಾದರು. ಇದರೊಂದಿಗೆ ಮನೆ ತನ್ನ ಹೆಸರಿನಲ್ಲಿ ಬರೆಯುವವರೆಗೂ ಪತಿ ಅಂತ್ಯಕ್ರಿಯೆ ಮಾಡಬಾರದು ಎಂದು ಆಕೆ ಒತ್ತಾಯಿಸಿದಳು.

Web Title : wife prevented her husband’s funeral for four days

Scroll Down To More News Today