ಯೂಟ್ಯೂಬ್ ನೋಡಿ ಹೆರಿಗೆ ಮಾಡಿಕೊಳ್ಳಲು ಮುಂದಾದ ಗರ್ಭಿಣಿ ! ಆಮೇಲೆ ಆಗಿದ್ದೇನು ಗೊತ್ತಾ ?

woman attempts to deliver baby watching YouTube, both die

ಯೂಟ್ಯೂಬ್ ನೋಡಿ ಹೆರಿಗೆ ಮಾಡಿಕೊಳ್ಳಲು ಮುಂದಾದ ಗರ್ಭಿಣಿ ! ಆಮೇಲೆ ಆಗಿದ್ದೇನು ಗೊತ್ತಾ ? – woman attempts to deliver baby watching YouTube, both die

ಯೂಟ್ಯೂಬ್ ನೋಡಿ ಹೆರಿಗೆ ಮಾಡಿಕೊಳ್ಳಲು ಮುಂದಾದ ಗರ್ಭಿಣಿ ! ಆಮೇಲೆ ಆಗಿದ್ದೇನು ಗೊತ್ತಾ ?

ಯೂಟ್ಯೂಬ್ ನೋಡಿ ನಾವೆಲ್ಲಾ ಅದೆಷ್ಟೋ ಹೊಸ ವಿಚಾರಗಳನ್ನುಕಲಿತಿದ್ದೇವೆ, ಹೊಸ ಹೊಸ ವಿಧಾನಗಳು , ಅಡುಗೆ, ತಂತ್ರಜ್ಞಾನ ಮುಂತಾದ ಮಾಹಿತಿ ಕ್ಷಣಾರ್ಧದಲ್ಲಿ ಯೂಟ್ಯೂಬ್ ಮುಖಾಂತರ ನಾವು ಕಲಿತಿದ್ದೇವೆ. ಆದರೆ ಇಲ್ಲೊಬ್ಬ ಗರ್ಭಿಣಿ ಹೆಂಗಸು ಯೂಟ್ಯೂಬ್ ನೋಡಿ ತನ್ನ ಹೆರಿಗೆಯನ್ನು ತಾನೇ ಮಾಡಿಕೊಳ್ಳಲು ಮುಂದಾಗಿ ತನ್ನ ಪ್ರಾಣ ಕಳೆದು ಕೊಂಡಿದ್ದಾಳೆ.

೨೮ ವರ್ಷದ ಮಹಿಳೆ ತನಗೆ ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭ ತನ್ನ ಮೊಬೈಲ್ ನಲ್ಲಿಯೇ ಯೂಟ್ಯೂಬ್ ವೀಡಿಯೊ ನೋಡಿ ಹೆರಿಗೆ ಮಾಡಿಕೊಳ್ಳಲು ಮುಂದಾಗಿ ಅತಿಯಾದ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ. ಜೊತೆಗೆ ಮಗುವೂ ಸಹ ಬದುಕುಳಿಯಲಿಲ್ಲ.

ಯು.ಪಿ ಯಾ ಬಿಲಾಸ್ಪುರ್ ಗೆ ಸೇರಿದ ತುಂಬು ಗರ್ಭಿಣಿಯೇ ಮೃತಪಟ್ಟ ದುರ್ದೈವಿ. ಯಾರ ಸಹಾಯವೂ ಇಲ್ಲದೆ ತನ್ನ ಪ್ರಸವವನ್ನು ತಾನೇ ಮಾಡಿಕೊಳ್ಳಲು ವೀಡಿಯೊ ಮೊರೆ ಹೋಗಿದ್ದಾಳೆ.

ಪೊಲೀಸ್ ಮೂಲಗಳ ಪ್ರಕಾರ ಯುವತಿಯು ಅವಿವಾಹಿತೆಯಾಗಿದ್ದು , ಗುಟ್ಟಾಗಿ ಹೆರಿಗೆ ಮಾಡಿಕೊಳ್ಳಲು ಮುಂದಾಗಿ ಈ ದುರ್ಗತಿ ತಂದು ಕೊಂಡಿದ್ದಾಳೆ ಎನ್ನಲಾಗಿದೆ.

ತಾನಿದ್ದ ಮನೆಯ ಬಾಗಿಲು ಮುಚ್ಚಿ , ಹೆರಿಗೆ ಪ್ರಯತ್ನದಲ್ಲಿ ಯುವತಿ ಮೃತ ಪಟ್ಟಿದ್ದಾಳೆ . ಬಾಗಿಲಿನಿಂದ ಹರಿದು ಬರುತ್ತಿದ್ದ ರಕ್ತ ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಪೊಲೀಸರು ಬಾಗಿಲು ಹೊಡೆದು ನೋಡಿದಾಗ , ತಾಯಿ ಮತ್ತು ಮಗು ಇಬ್ಬರೂ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.////


News Title : woman attempts to deliver baby watching YouTube, both die
(ಕನ್ನಡ ಸುದ್ದಿಗಳು from kannadanews.today , No. 1 News Portal for Kannadigas)
Kannada News : Stay Updated with itsKannada to Know National News & India News more Latest Kannada News Today.