ದೆಹಲಿ-ಬೆಂಗಳೂರು ಇಂಡಿಗೊ ವಿಮಾನದಲ್ಲಿ ಮಗುವಿಗೆ ಜನ್ಮಕೊಟ್ಟ ತಾಯಿ

( Kannada News ) : ದೆಹಲಿ-ಬೆಂಗಳೂರು ಇಂಡಿಗೊ ವಿಮಾನದಲ್ಲಿ ಗರ್ಭಿಣಿ ಮಹಿಳಾ ಪ್ರಯಾಣಿಕರೊಬ್ಬರು ಬುಧವಾರ ಗಂಡು ಮಗುವಿಗೆ ಜನ್ಮಕೊಟ್ಟಿದ್ದಾರೆ. ಗಂಡು ಮಗು ಅಕಾಲಿಕವಾಗಿ ಜನಿಸಿದ್ದು, ಇಂಡಿಗೊ ಸಿಬ್ಬಂದಿ ಹೆರಿಗೆಗೆ ಸಹಾಯ ಮಾಡಲು ಯಶಸ್ವಿಯಾದರು.

ಸದ್ಯ, ಇಂಡಿಗೊ ವಿಮಾನದ ಹಲವಾರು ಫೋಟೋಗಳು ಮತ್ತು ವೀಡಿಯೊಗಳು, ಸಿಬ್ಬಂದಿ ಮತ್ತು ಪ್ರಯಾಣಿಕರು ಮಹಿಳೆ ಮತ್ತು ಆಕೆಯ ಮಗುವಿನ ಜೊತೆ ಇರುವ ಸಂದರ್ಭಗಳು ವೈರಲ್ ಆಗಿವೆ.

ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋಗಳು ಹರಿದಾಡುತ್ತಿವೆ. ಆ ವೀಡಿಯೊದಲ್ಲಿ, ಇಂಡಿಗೊ ಸಿಬ್ಬಂದಿ ಮತ್ತು ಇತರ ಸಿಬ್ಬಂದಿ ಸದಸ್ಯರು ಮಗುವಿನ ಜೊತೆಗಿದ್ದಾರೆ, ಇತರರು ಮಹಿಳೆ ಮತ್ತು ಅವಳ ನವಜಾತ ಶಿಶುವನ್ನು ಸ್ಥಳಾಂತರಿಸಲು ಸಹಾಯ ಮಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಸಹಾಯ ಮಾಡಿದ ಸಿಬ್ಬಂದಿ ಮತ್ತು ಪೈಲಟ್ ಜೊತೆಗೆ ಮಹಿಳೆ ಮತ್ತು ಆಕೆಯ ಮಗುವಿನ ಫೋಟೋಗಳು ಮತ್ತು ವೀಡಿಯೊಗಳ ಸಕತ್ ವೈರಲ್ ಆಗಿವೆ. ಮಹಿಳೆ ವಿಮಾನದಿಂದ ಇಳಿಯುತ್ತಿದ್ದಂತೆ, ಇಂಡಿಗೊ ಅಧಿಕಾರಿಗಳು ಮಗುವನ್ನು ಮತ್ತು ತಾಯಿಯನ್ನು ಬೆಂಗಳೂರಿಗೆ ಸ್ವಾಗತಿಸಿದರು.

Scroll Down To More News Today