Welcome To Kannada News Today

ಪಾದರಾಯನಪುರ ಗಲಾಟೆಗೆ ಲೇಡಿ ಡಾನ್ ಕುಮ್ಮಕ್ಕು, ಯುವಕರಿಗೆ ಗಾಂಜಾ ಕೊಟ್ಟು ಮಾಡಿಸಿದ್ಲಾ ಕೃತ್ಯ ?

ಬೆಂಗಳೂರು ಪಾದರಾಯನಪುರದಲ್ಲಿ ನಡೆದಿದ್ದ ಗಲಾಟೆ, ಪಾದರಾಯನಪುರ ಗಲಾಟೆಗೆ ಲೇಡಿ ಕುಮ್ಮಕ್ಕು, ಸಿಸಿಟಿವಿ ವಿಡಿಯೋ ಆಧರಿಸಿ 54 ಜನರ ಬಂಧನ. - ಪಾದರಾಯನಪುರ

🌐 Kannada News :

ಬೆಂಗಳೂರು ಪಾದರಾಯನಪುರ ಗಲಾಟೆ ಪ್ರಕರಣ

ಬೆಂಗಳೂರು : ನಿನ್ನೆ ಪಾದರಾಯನಪುರದಲ್ಲಿ ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲೆಂದು ಕರೆದೊಯ್ಯಲು ಅಧಿಕಾರಿಗಳು ಬಂದಾಗ ಎಕಾ ಏಕಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ವಿಡಿಯೋ ಆಧರಿಸಿ 54 ಜನರನ್ನ ಬಂಧಿಸಲಾಗಿದೆ.

ಇನ್ನು ಹೆಚ್ಚಿನವರು ಗಲಾಟೆಯಲ್ಲಿ ಭಾಗಿಯಾಗಿದ್ದು, ಅವರ ತನಿಖೆ ನಡೆಯುತ್ತಿದೆ, ಸದ್ಯ ಪ್ರಕರಣಕ್ಕೆ ಸಂಬಂಧಿಸಿ 54 ಜನರನ್ನ ಬಂಧಿಸಲಾಗಿದ್ದು, ಗಲಾಟೆ ಸಂಬಂಧ ಒಟ್ಟು 5 ಪ್ರಕರಣ ದಾಖಲಾಗಿದೆ. ಆರೋಗ್ಯ ಇಲಾಖೆಯಿಂದ ಒಂದು ದೂರು ದಾಖಲಾಗಿದ್ದು, ಇನ್ನುಳಿದ ನಾಲ್ಕು ಪ್ರಕರಣಗಳು ಪೊಲೀಸರು ದಾಖಲಿಸಿದ್ದಾರೆ. ಗಲಾಟೆ ಸಂಬಂಧ ಓರ್ವ ಮಹಿಳೆಯನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರಿನಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ತಿಳಿಸಿದ್ದಾರೆ.

ಪಾದರಾಯನಪುರ ಗಲಾಟೆಗೆ ಲೇಡಿ ಡಾನ್ ಕುಮ್ಮಕ್ಕು

ಗಲಾಟೆಯಲ್ಲಿ ಓರ್ವ ಮಹಿಳೆಯೇ ಮುಖ್ಯ ರೂವಾರಿ ಎಂಬ ಶಂಕೆ ವ್ಯಕ್ತವಾಗಿದೆ. ಬಂಧಿತ ಮಹಿಳೆ ಪರೋಜಾ ಎಂದು ತಿಳಿದುಬಂದಿದೆ. ವೃತ್ತಿಯಲ್ಲಿ ಈಕೆ ಗಾಂಜಾ ಮಾರಟ ಮಾಡುತ್ತಿದ್ದಳು ಎಂಬ ಮಾಹಿತಿ ಹೊರಬಿದ್ದೆದೆ. ಘಟನೆ ನಡೆಯುತ್ತಿದ್ದ ಸ್ಥಳದಲ್ಲಿ ಈಕೆ ಯುವಕರಿಗೆ ಮಾರ್ಗದರ್ಶನ ನೀಡುತ್ತಾ ಕುಮ್ಮಕ್ಕು ನೀಡಿದ್ದಾಳೆ.

ಗಲಾಟೆಗೆ ಯುವಕರನ್ನು ಪ್ರಚೋದಿಸಿ, ಸ್ಥಳಕ್ಕೆ ಯುವಕರು ಸೇರುವಂತೆ ಈಕೆಯೇ ಮಾಡಿದ್ದಳು ಎಂಬ ಎಂಬ ಮಾಹಿತಿ ಸಿಕ್ಕಿದೆ. ಸದ್ಯ ಫರೋಜಾ ಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಹಾಗೂ ಆಕೆ ನೀಡಿದ ಮಾಹಿತಿ ಆಧರಿಸಿ ಜೆ.ಜೆ.ನಗರ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಯುಟಿ ಖಾದರ್ ಮಾತನಾಡಿ ಆರೋಗ್ಯ ಕಾರ್ಯಕರ್ತರ ಮೇಲಿನ ದಾಳಿಯನ್ನು ಖಂಡಿಸುತ್ತೇನೆ ಮತ್ತು ಅವರ ವಿರುದ್ಧ ಕಠಿಣ ಕ್ರಮವನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile