Yogi Adityanath, ದಲಿತರ ಮನೆಯಲ್ಲಿ ಯೋಗಿ ಆದಿತ್ಯನಾಥ್ ಊಟ ! ಯಾಕೆ ಗೊತ್ತಾ ?

UP CM Yogi Adityanath, ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸಚಿವರು, ಶಾಸಕರು ಕಣಕ್ಕಿಳಿಸಿದ್ದು, ಸಿಎಂ ಯೋಗಿ ಆದಿತ್ಯನಾಥ್ ಜನರ ಮನಗೆಲ್ಲಲು ಶತ ಪ್ರಯತ್ನ ನಡೆಸಿದ್ದಾರೆ.

UP CM Yogi Adityanath – ಲಖನೌ: ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸಚಿವರು, ಶಾಸಕರು ಕಣಕ್ಕಿಳಿಸಿದ್ದು, ಸಿಎಂ ಯೋಗಿ ಆದಿತ್ಯನಾಥ್ ಜನರ ಮನಗೆಲ್ಲಲು ಶತ ಪ್ರಯತ್ನ ನಡೆಸಿದ್ದಾರೆ. ಅವರು ಶುಕ್ರವಾರ ಗೋರಖ್‌ಪುರದ ದಲಿತರ ಮನೆಯಲ್ಲಿ ಊಟ ಮಾಡಿದರು. ಅಮೃತ್ ಲಾಲ್ ಭಾರ್ತಿ ನೀಡಿದ ಆತಿಥ್ಯವನ್ನು ಸಿಎಂ ಯೋಗಿ ಸ್ವೀಕರಿಸಿದರು.

ಇಂದು ಗೋರಖ್‌ಪುರದ ಜುಂಗಿಯಾದ ಅಮೃತ್ ಲಾಲ್ ಭಾರತೀಜಿಯವರ ಮನೆಯಲ್ಲಿ ಖಿಚಡಿ ಮತ್ತು ಪ್ರಸಾದ ಸ್ವೀಕರಿಸುವ ಸೌಭಾಗ್ಯ ನನ್ನದಾಯಿತು. ತುಂಬಾ ಧನ್ಯವಾದಗಳು ಭಾರತೀಜಿ!’ ಎಂದು ಆರು ಟ್ವಿಟರ್‌ನಲ್ಲಿ ಹೇಳಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಅವರು ಅಮೃತ್ ಲಾಲ್ ಭಾರ್ತಿ ಅವರೊಂದಿಗೆ ಊಟ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ನಂತರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಯೋಗಿ ಕಿಡಿಕಾರಿದರು. ಅಖಿಲೇಶ್ ಯಾದವ್ ಸರಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೇವಲ 18,000 ಮನೆಗಳನ್ನು ನೀಡಿದೆ ಎಂದು ಟೀಕಿಸಿದರು.

ಬಿಜೆಪಿ 45 ಲಕ್ಷ ಮನೆ ನೀಡಿದೆ ಎಂದರು. ವಂಶಪಾರಂಪರ್ಯ ರಾಜಕಾರಣದ ಹಿಡಿತದಲ್ಲಿರುವವರು ಸಮಾಜದ ಯಾವ ವರ್ಗಕ್ಕೂ ನ್ಯಾಯ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು. ಸಮಾಜವಾದಿ ಪಕ್ಷದ ಸರ್ಕಾರ ದಲಿತರು ಮತ್ತು ಬಡವರ ಹಕ್ಕುಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

 

Stay updated with us for all News in Kannada at Facebook | Twitter
Scroll Down To More News Today