ಈ ಮಾರುಕಟ್ಟೆಯಲ್ಲಿ ಶರ್ಟ್ ನ ಬೆಲೆ ಕೇವಲ 20 ರೂ

You Know Where is The India's cheapest textile market

ಈ ಮಾರುಕಟ್ಟೆಯಲ್ಲಿ ಶರ್ಟ್ ನ ಬೆಲೆ ಕೇವಲ 20 ರೂ – You Know Where is The India’s cheapest textile market

ಈ ಮಾರುಕಟ್ಟೆಯಲ್ಲಿ ಶರ್ಟ್ ನ ಬೆಲೆ ಕೇವಲ 20 ರೂ

ಕನ್ನಡ ನ್ಯೂಸ್ ಟುಡೇ : ನಿಮ್ಮ ಜೀವನಶೈಲಿಯ ಎಲ್ಲಾ ಸುದ್ದಿಗಳನ್ನು ಪಡೆಯುವ ನಿಮ್ಮ ನೆಚ್ಚಿನ ಸುದ್ದಿತಾಣಕ್ಕೆ ಸ್ವಾಗತ. ಅಗ್ಗದ ಬಟ್ಟೆಗಳು ಎಂದರೆ ಯಾರ ಕಿವಿ ತಾನೇ ನೆಟ್ಟಗಾಗೋಲ್ಲ ಹೇಳಿ, ಇಂದು ನಾವು ನಿಮಗೆ ಅಂತಹ ಶಾಪಿಂಗ್ ಮತ್ತು ಬಟ್ಟೆಗಳನ್ನು ಬಹಳ ಅಗ್ಗದ ಬೆಲೆಗೆ ಪಡೆಯಬಹುದಾದ ಕೆಲವು ಮಾರುಕಟ್ಟೆಗಳ ಬಗ್ಗೆ ಹೇಳೋದಕ್ಕೆ ಹೊರಟಿದ್ದೀವಿ ಅದೂ ತುಂಬಾ ಉತ್ತಮ ಗುಣಮಟ್ಟ ಮತ್ತು ಬ್ರಾಂಡ್ ಎಂದು ತಿಳಿಯೋದು ಬೇಡ. ಆದರೆ ಪ್ರತಿನಿತ್ಯ ಲಕ್ಷಾಂತರ ರೂಗಳ ವಹಿವಾಟು ನಡೆಯುವ ಮಾರುಕಟ್ಟೆಗಳು ಅಗ್ಗದ ಬೆಲೆಗೆ ಮಾರಾಟ ಮಾಡುವ ಜಾಗಗಳು ಇಲ್ಲಿವೆ ನೋಡಿ.

ದೆಹಲಿ

ಅಗ್ಗದ ಬೆಲೆಗೆ,  ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಗೆ ಹೆಸರುವಾಸಿ ದೆಹಲಿ, 20 ರಿಂದ 100 ರೂ ಗಳಿಗೆ ಬ್ರಾಂಡೆಡ್ ಬಟ್ಟೆಗಳು  ಸೇರುತ್ತವೆ. ಶಾಕ್ ಆಗಬೇಡಿ ಅವೇನು ಹೊಸದಲ್ಲ, ಅದು ಕದಿಯಲ್ಪಟ್ಟ ಮಾಲು ಅಥವಾ ಇಲ್ಲದಿದ್ದರೆ ಅದು ಸೆಕೆಂಡ್ ಹ್ಯಾಂಡ್ ಆಗಿರುತ್ತದೆ.

ಇದಕ್ಕೆಂದೇ, ದೆಹಲಿಯಲ್ಲಿ ಕೊನಾಟ್ ಪ್ಲೇಸ್, ಮಜ್ನೂನ್ ತಿಲಾ, ರಘುಬೀರ್ ನಗರ, ಕರೋಲ್ ಬಾಗ್, ಇಂದ್ರಪುರಿ, ಲಾಲ್ ಕಿಲಾ, ಚಾಂದನಿ ಚೌಕ್ ಮುಂತಾದ ಮಾರುಕಟ್ಟೆಗಳಿವೆ, ಅಲ್ಲಿ ಕಡಿಮೆ ಬೆಲೆಯಲ್ಲಿ ಅಗ್ಗದ ಬಟ್ಟೆಗಳು ಮಾರಲ್ಪಡುತ್ತವೆ. ಇದು ಮಾತ್ರವಲ್ಲ, ಇಲ್ಲಿ ನೀವು ಕಿಲೋ ಲೆಕ್ಕದಲ್ಲಿ ಸಹ ಬಟ್ಟೆಗಳನ್ನು ಖರೀದಿಸಬಹುದಂತೆ

ಇಲ್ಲಿ ಬಟ್ಟೆಗಳು ಮತ್ತು ಶರ್ಟ್ ಕೇವಲ 20 ರುಪಾಯಿಗೆ ಸಿಗುತ್ತವಂತೆ. ಇವುಗಳಲ್ಲಿ ಕೆಲವು ಕದ್ದ ಬಟ್ಟೆಗಳಾದರೆ, ಕೆಲವು ಕಂಪನಿಯಿಂದ ರಿಜೆಕ್ಟ್ ಮಾಡಿದಂತಹ ಬಟ್ಟೆಗಳು. ಇಂತಹ ಬಟ್ಟೆಗಳನ್ನು ವಿದೇಶ ಹೊರತುಪಡಿಸಿ ಭಾರತದಾದ್ಯಂತ ಆಮದು ಮಾಡಿಕೊಳ್ಳಲಾಗುತ್ತದಂತೆ. ದೆಹಲಿಯ ಬೀದಿಗಳಲ್ಲಿ ಸಂಜೆಯಾದರೆ ಮಾರುಕಟ್ಟೆ ನಡೆಯುತ್ತದೆ.

ಮುಂಬೈ 

ಮುಂಬೈನಲ್ಲಿ, ಸಹ ಇಂತಹದ್ದೇ ಮಾರುಕಟ್ಟೆ ಇದ್ದು, ಇದು ಸುಮಾರು 150 ವರ್ಷಗಳಷ್ಟು ಹಳೆಯ ಮಾರುಕಟ್ಟೆ ಎಂದು ಹೇಳಲಾಗುತ್ತದೆ. ಮಾರುಕಟ್ಟೆಯಲ್ಲಿ, ಜೀನ್ಸ್, ಶರ್ಟ್, ಸೇರಿದಂತೆ ಹಲವು ಬಟ್ಟೆಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತವೆ.ಇಲ್ಲಿ ಅವುಗಳ ಬೆಲೆ ₹ 50 ರಿಂದ ಪ್ರಾರಂಭವಾಗುತ್ತದೆ. ಇದನ್ನು ಮುಂಬೈನ ಕಳ್ಳ ಮಾರುಕಟ್ಟೆ ಎನ್ನಲಾಗುತ್ತದೆ.

ಜೈಪುರ

ಜೈಪುರದಲ್ಲಿ, ಸಹ ಒಂದು ಮಾರುಕಟ್ಟೆ ಇದೆ, ಅಲ್ಲಿ ನೀವು ಪ್ರತಿ ಭಾನುವಾರ ಈ ಮಾರುಕಟ್ಟೆಯನ್ನು ಕಾಣಬಹುದು, ಇಲ್ಲಿಯೂ ಸಹ ತುಂಬಾ ಅಗ್ಗದ ಬೆಲೆಯಲ್ಲಿ ಬಟ್ಟೆಗಳು ಮಾರಾಟಗೊಳ್ಳುತ್ತವೆ.. ಇಲ್ಲಿಯ ಪ್ರಾರಂಭ ಬೆಲೆ ₹ 20 ರೂ ಯಿಂದ ಪ್ರಾರಂಭವಾಗುತ್ತದೆ, ಈ ಸೆಕೆಂಡ್ ಹ್ಯಾಂಡ್ ಬಟ್ಟೆ ಮಾರುಕಟ್ಟೆಯಲ್ಲಿ,  ಜೀನ್ಸ್ ಶರ್ಟ್, ಡ್ರೆಸ್, ಸೂಟ್ ಸಲ್ವಾರ್, ಜಾಕೆಟ್ ಸೇರಿದಂತೆ ಹಲವು ವೆರೈಟಿ ಬಟ್ಟೆಗಳು ಸಿಗುತ್ತವೆ. ಜೈಪುರದ ಈ ಮಾರುಕಟ್ಟೆಯನ್ನು ಹಿಟ್ವಾಡಾ ಮಾರುಕಟ್ಟೆ ಎಂದು ಕರೆಯುತ್ತಾರೆ.

ಈ ರೀತಿಯ ಬದುಕು ಕಟ್ಟಿಕೊಂಡಿರುವ ಮಾರಾಟಗಾರರು, ಸಾವಿರಾರು ಗಟ್ಟಲೆ ಸಂಪಾದನೆ ಮಾಡುತ್ತಾರೆ, ಇಲ್ಲಿಗೆ ಬಟ್ಟೆ ಸಪ್ಲೈ ಮಾಡೋ ಮಧ್ಯವರ್ತಿಯಿಂದ ಹಿಡಿದು, ಮಾರಾಟಗಾರ, ಅದರ ಹಿಂದಿರುವ ಕಳ್ಳ, ಎಲ್ಲಿ ಕದಿಯುತ್ತಾರೆ, ಎಲ್ಲಿಂದ ತರುತ್ತಾರೆ, ಎಲ್ಲವೂ ನಿಗೂಢ……

Web Title : You Know Where is The India’s cheapest textile market