Welcome To Kannada News Today

ಪ್ರೀತಿಸಿ ಕೈಕೊಟ್ಟ ಯುವಕ, ಮನನೊಂದು ಪ್ರಾಣಬಿಟ್ಟ ಯುವತಿ

Young woman Commits suicide after Lover refused to marry

🌐 Kannada News :

ಕನ್ನಡ ನ್ಯೂಸ್ ಟುಡೇ – India News 

ಅನಂತಪುರಂ : ಪ್ರೀತಿಸಿ, ನಂಭಿಸಿ ಯುವತಿಯಲ್ಲಿ ಹಲವು ಆಸೆ ಹುಟ್ಟಿಸಿ ಕೊನೆಗೆ ಮದುವೆಯಾಗಲು ನಿರಾಕರಿಸಿದ್ದಕ್ಕೆ, ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ನೆರೆಯ ರಾಜ್ಯ ಹೈದರಾಬಾದ್ ನಲ್ಲಿ ನಡೆದಿದೆ.. ಪೊಲೀಸ್ ವರದಿಯ ಪ್ರಕಾರ … ಕಾಮಾಕ್ಷಿ (30) ಎಂಬ ಯುವತಿಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಆಕೆ ಆರ್‌ಡಿಟಿ ಫೀಲ್ಡ್ ಆಫೀಸ್‌ನಲ್ಲಿ ಅಂಗವಿಕಲ ಕೇಂದ್ರದಲ್ಲಿ (ಮಾನಸಿಕ ವಿಕಲಾಂಗ ಕೇಂದ್ರ) ಟೀಚರ್ ಕಮ್ ಫಿಸಿಯೋಥೆರಪಿ ವರ್ಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸಮೀಪದ ನಾರಾಯಣಪುರದಲ್ಲಿ ಪಂಚಾಯತ್ ಕಾರ್ಯದರ್ಶಿಯಾಗಿ ಕೆಲಸ ಮಾಡುವ ರಾಜೇಶ್ ಅವರೊಂದಿಗಿನ ಸ್ನೇಹ ಕ್ರಮೇಣ ಪ್ರೇಮ ಸಂಬಂಧವಾಯಿತು. ಆತ ಆಕೆಗೆ ಮದುವೆಯಾಗುವುದಾಗಿಯೂ ಭರವಸೆ ನೀಡಿದ್ದನು.

ಬುಧವಾರ ಬೆಳಿಗ್ಗೆ, ಕಾಮಾಕ್ಷಿ ಅವನ ಬಳಿ ವಿವಾಹದ ಪ್ರಸ್ತಾಪವನ್ನು ಮಾಡಿದ್ದಾಳೆ . ಇಷ್ಟು ದಿವಸ ಪ್ರೀತಿಯ ಹೆಸರಿನಲ್ಲಿ ನಟಿಸುತ್ತಾ ಬಂದಿದ್ದ ನೀಚ ರಾಜೇಶ್ ಮದುವೆಗೆ ಸಮ್ಮತಿಸಲಿಲ್ಲ. ಕಾಮಾಕ್ಷಿ ಅವನ ಮಾತಿನಿಂದ ತೀವ್ರವಾಗಿ ಮನನೊಂದಿದ್ದಳು.

ಇದೆ ಜಿಗುಪ್ಸೆಯಿಂದ ಆಕೆ ತನ್ನ ಮಲಗುವ ಕೋಣೆಯಲ್ಲಿದ್ದ ಫ್ಯಾನ್ ಗೆ ನೈಲಾನ್ ತಂತಿಯಿಂದ ನೇಣಿಗೆ ಶರಣಾಗಿದ್ದಾಳೆ. ಹಾಗೂ ಆಕೆಯ ಸಾವಿಗೆ ಕಾರಣವಾದ ವಿಷಯಗಳ ಬಗ್ಗೆ ಕಾಮಾಕ್ಷಿ ವಿವರವಾದ ಪತ್ರ ಬರೆದಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ ಮತ್ತು ಆರೋಪಿ ರಾಜೇಶ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. /////


 

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile