Welcome To Kannada News Today

ಮದ್ಯದಂಗಡಿಗಳು ಓಪನ್, 1 ಗಂಟೆ ಮಾತ್ರ ಮದ್ಯ ಕೊಳ್ಳಲು ಅನುಮತಿ, ನಕಲಿ ಆದೇಶ ರೂವಾರಿ ಬಂಧನ

youth arrested for forging excise department GO about liquor shops

🌐 Kannada News :

ಹೈದರಾಬಾದ್ : ತೆಲಂಗಾಣ ಅಬಕಾರಿ ಇಲಾಖೆ ಆದೇಶ ನೀಡಿದಂತೆ ನಕಲಿ ಆದೇಶ ಪ್ರತಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಯುವಕನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ

ಸನ್ನಿ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಲಾಕ್ ಡೌನ್ ನ ಈ ಸಂದರ್ಭದಲ್ಲಿ ಮಜಾ ಪಡೆಯಲು ಮಾರ್ಚ್ 29 ರಿಂದ ಒಂದು ಗಂಟೆವರೆಗೆ ವೈನ್ ಅಂಗಡಿಗಳು ತೆರೆದಿರುತ್ತವೆ ಎಂದು ತಿಳಿಸಿ ತೆಲಂಗಾಣ ಅಬಕಾರಿ ಇಲಾಖೆ ಆದೇಶಿಸಿದಂತೆ ನಕಲಿ ಆದೇಶ ಪತ್ರ ತಯಾರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದ.

ಆತ ಅಬಕಾರಿ ಇಲಾಖೆಯು ವೈನ್ ಮಾರಾಟವನ್ನು ಪ್ರಾರಂಭಿಸಿದೆ ಎಂದು ನಕಲಿ ಪತ್ರ ರಚಿಸಿದ್ದರು. ಸಧ್ಯ ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಈಗ ಆತನನ್ನು ಜೈಲಿಗೆ ಆಟ್ಟಿದ್ದಾರೆ. ಈ ವೇಳೆ, ನಕಲಿ ಸುದ್ದಿಗಳನ್ನು ಪ್ರಸಾರ ಮಾಡುವವರಿಗೆ ಇದು ಒಂದು ಎಚ್ಚರಿಕೆ ”ಎಂದು ನಗರ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಹೇಳಿದ್ದಾರೆ.

Fake excise department GO
Fake excise department GO

ವದಂತಿ ಶೀಘ್ರದಲ್ಲೇ ವೈರಲ್ ಆಯಿತು ಮತ್ತು ಮದ್ಯದಂಗಡಿಗಳು ಅಬಕಾರಿ ಇಲಾಖೆಯ ನಕಲಿ ಪ್ರತಿ ವೈರಲ್ ಆಗಿತ್ತು.. ಅಬಕಾರಿ ಇಲಾಖೆ ನಂತರ ಆದೇಶ ನಕಲಿ ಎಂದು ಸ್ಪಷ್ಟೀಕರಣವನ್ನು ನೀಡಿತು ಮತ್ತು ವದಂತಿಗಳನ್ನು ನಂಬಬೇಡಿ ಎಂದು ಜನರಿಗೆ ಮಾಹಿತಿ ನೀಡಿತ್ತು.

ಎಲ್ಲಾ ಮದ್ಯ ಅಂಗಡಿಗಳು ಮತ್ತು ಬಾರ್‌ಗಳು ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಏಪ್ರಿಲ್ 15 ರವರೆಗೆ ಮುಚ್ಚಲ್ಪಡುತ್ತವೆ ಎಂದು ಇಲಾಖೆ ಹೇಳಿಕೆ ನೀಡಿದೆ

ಅಧಿಕಾರಿಗಳು ಈ ಅಪರಾಧದ ಬಗ್ಗೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆಯ ಸಮಯದಲ್ಲಿ, ನಕಲಿ ಆದೇಶ ಪ್ರತಿ ಹಬ್ಬಿದ್ದ ಐಪಿ ವಿಳಾಸವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಮಂಗಳವಾರ ಉಪ್ಪಲ್ ನಿವಾಸಿ ಸನ್ನಿ ಎಂಬಾತನನ್ನು ಬಂಧಿಸಿದ್ದಾರೆ.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.