ಗೂಗಲ್ ಸರ್ಚ್ ನಲ್ಲಿ ನಿಮ್ಮ ಫೋಟೋ ಬರ್ಬೇಕಾ ? ಇಲ್ಲಿದೆ ಐಡಿಯಾ

Do you want to get your photo in Google Search? Here's the idea

ಗೂಗಲ್ ನಲ್ಲಿ ನಾವು ಏನೇ, ಹುಡುಕಿದರೂ ತೋರಿಸುತ್ತಲ್ಲಾ ? ಯಾರು ಇಲ್ಲಿ ಈ ಫೋಟೋಗಳು ಅಪ್ಲೋಡ್ ಮಾಡೋದು, ಇವೆಲ್ಲಾ ಎಲ್ಲಿಂದ ಬರುತ್ತೆ, ನಿಮ್ಮ ಪ್ರೀತಿಯ ಹೀರೊ, ಹೀರೋಯಿನ್ ಫೋಟೋಗಳು ಗೂಗಲ್ ನಲ್ಲಿ ಹೇಗೆ ಬರುತ್ತವೆ. ನಿಮಗೆ ಗೊತ್ತಿಲ್ಲ ಅಂದರೆ ಓದಿ, ನಿಮ್ಮ ಫೋಟೋಗಳು ಕೂಡ ಗೂಗಲ್ ನಲ್ಲಿ ಬರೋ ಟಿಪ್ಸ್ ನಾವು ನೀಡ್ತೀವಿ..

ಫೇಸ್ ಬುಕ್ ಪ್ರೊಫೈಲ್ ಫೋಟೋ ಮತ್ತು ಗೂಗಲ್ ಫೋಟೋ,

ಸಾಮಾನ್ಯವಾಗಿ ನಮ್ಮೆಲ್ಲರಿಗೂ ಫೇಸ್ ಬುಕ್ ಖಾತೆ ಇದ್ದೆ ಇರುತ್ತದೆ, ಖಾತೆ ಇದ್ದ ಮೇಲೆ ನಮ್ಮದೊಂದು ಸಖತ್ ಆಗಿರೋ ಫೋಟೋ ಕೂಡ ಪ್ರೊಫೈಲ್ ಫೋಟೋ ಆಗಿ ಅಪ್ಲೋಡ್ ಮಾಡಿರ್ತಿವಿ, ಈ ಫೋಟೋಗಳೇ ಗೂಗಲ್ ಸರ್ಚ್ ನಲ್ಲಿ ನಮಗೆ ಕಾಣಸಿಗುವುದು, ಸಾಮಾನ್ಯವಾಗಿ ವೆಬ್ ಸೈಟ್ ಗಳ ಫೋಟೋಗಳು ಸಹ ಗೂಗಲ್ ನಲ್ಲಿ ಕಾಣಸಿಗುತ್ತವೆ.

ಆದರೆ ನಮ್ಮೆಲ್ಲರ ಬಳಿ ವೆಬ್ ಸೈಟ್ ಇರುವುದಿಲ್ಲವಲ್ಲ, ಅದಕ್ಕೆ ನಿಮ್ಮ ಫೇಸ್ ಬುಕ್ ನಲ್ಲಿ ಫೋಟೋ ಅಪ್ಲೋಡ್ ಮಾಡಿ, ಹೇಗೆ ಅದನ್ನು ಗೂಗಲ್ ಸರ್ಚ್ ನಲ್ಲಿ ಕಾಣಬಹುದು ಎಂಬ ಸಲಹೆ ನೀಡ್ತಾ ಇದ್ದೇವೆ.

ಗೂಗಲ್ ಸರ್ಚ್ ನಲ್ಲಿ ನಿಮ್ಮ ಫೋಟೋ ಬರ್ಬೇಕಾ ? ಇಲ್ಲಿದೆ ಐಡಿಯಾ - Kannada News

ಫೇಸ್ ಬುಕ್ ಫೋಟೋ ಹೆಸರು ಬದಲಿಸಿ…

ನಾವು ಫೋಟೋ ಅಪ್ಲೋಡ್ ಮಾಡಬೇಕಾದರೆ, ಫೋಟೋಗಳಿಗೆ ಸರಿಯಾದ ಹೆಸರು ನೀಡಬೇಕು, ಉದಾಹರಣೆಗೆ ಫೋಟೋ ಹೆಸರು , photo1.jpg, ಇದ್ದಾಗ ಉಪಯೋಗವಿಲ್ಲ, ಉದಾಹರಣೆಗೆ ನಿಮ್ಮಹೆಸರು ರಾಜು ಅಂತ ಅಂದುಕೊಳ್ಳಿ, ನಿಮ್ಮ ಫೋಟೋಗೆ ತಕ್ಕ ಹೆಸರು ನೀಡಲು raju-Mysuru.jpg ಎಂದು ನೀಡಿದರೆ ಮುಗೀತು, ಕೇವಲ ಎರಡೇ ದಿನದಲ್ಲಿ ನಿಮ್ಮ ಫೋಟೋ ಗೂಗಲ್ ನಲ್ಲಿ ಕಾಣಸಿಗುತ್ತದೆ.

ಅಷ್ಟೇ ಅಲ್ಲ ನಿಮ್ಮ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ನೀವು ಇದೆ ರೀತಿಯ ಸೂಕ್ತ ಹೆಸರುಗಳನ್ನೂ ನೀಡಿದಾಗ ನಿಮ್ಮೆಲ್ಲಾ ಫೋಟೋಗಳು ಗೂಗಲ್ ನಲ್ಲಿ ಕಾಣಸಿಗುತ್ತವೆ. ಆಗಾದರೆ ಇಂದೇ ಪ್ರಯತ್ನಿಸಿ ನೋಡಿ . . .

Follow us On

FaceBook Google News

Read More News Today