Welcome To Kannada News Today

Viral News: ತನ್ನ ಹುಟ್ಟುಹಬ್ಬದ ಸಮಯದಲ್ಲಿ, ಈ ರೀತಿ ಮಾಡಿ ವ್ಯಕ್ತಿ ಜೀವವನ್ನೇ ಕಳೆದುಕೊಂಡ

Man Death during his Birthday celebration: ಬ್ರೆಜಿಲ್‌ನ ಒಂದು ನಗರದಿಂದ ಒಂದು ಆಶ್ಚರ್ಯಕರ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಒಬ್ಬ ವ್ಯಕ್ತಿ ತನ್ನ ಹುಟ್ಟುಹಬ್ಬದ ಪಾರ್ಟಿಯಲ್ಲಿದ್ದಾಗ ಸಾವನ್ನಪ್ಪಿದ್ದಾನೆ.

🌐 Kannada News :

Man Death during his Birthday celebration: ಬ್ರೆಜಿಲ್‌ನ ಒಂದು ನಗರದಿಂದ ಒಂದು ಆಶ್ಚರ್ಯಕರ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಒಬ್ಬ ವ್ಯಕ್ತಿ ತನ್ನ ಹುಟ್ಟುಹಬ್ಬದ ಪಾರ್ಟಿಯಲ್ಲಿದ್ದಾಗ ಸಾವನ್ನಪ್ಪಿದ್ದಾನೆ.

ಹುಟ್ಟುಹಬ್ಬದ ಆಚರಣೆ ಸಮಯದಲ್ಲಿ, ಆಪ್ತ ಸ್ನೇಹಿತರು ಮತ್ತು ಸಂಬಂಧಿಕರು ಜಮಾಯಿಸಿದ್ದರು. ಅವರ ಹುಟ್ಟುಹಬ್ಬದಂದು ಎಲ್ಲರೂ ಆತನನ್ನು ಅಭಿನಂದಿಸುತ್ತಿದ್ದರು ಮತ್ತು ಕೆಲವರು ಅವರ ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸುವ ಮೂಲಕ ಆಚರಿಸುತ್ತಿದ್ದರು. ನಂತರ ಎಲ್ಲರ ಕಣ್ಣೆದುರು ಒಂದು ಘಟನೆ ನಡೆದು ಆ ವ್ಯಕ್ತಿ ಸಾವನ್ನಪ್ಪಿದ.

ಆಗಿದ್ದೇನೆ ?

ಇದು ಬ್ರೆಜಿಲ್‌ನ ಪ್ರಕರಣ. ಫಾಕ್ಸ್ ಫೈವ್ ನ್ಯೂಸ್‌ನ ವರದಿಯ ಪ್ರಕಾರ, ಆ ವ್ಯಕ್ತಿಯ ಹೆಸರು ಗಿಲ್ಸನ್ ಮತ್ತು ಅವನು ತನ್ನ ಹುಟ್ಟುಹಬ್ಬಕ್ಕೆ ಸ್ನೇಹಿತರನ್ನು ಸ್ವಾಗತಿಸಿದ್ದ. ಅವನ ಬಹುತೇಕೆ ಸ್ನೇಹಿತರೆಲ್ಲರೂ ಅಲ್ಲಿದ್ದರು. ಆತ ತುಂಬಾ ಕರುಣಾಳು ಮತ್ತು ಸ್ನೇಹಿತರಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದ್ದನೆಂದು ಹೇಳಲಾಗಿದೆ. ಆತ ಪಾರ್ಟಿಗೆ ಒಂದು ದೊಡ್ಡ ಡ್ರಮ್ ಬಿಯರ್ ಆರ್ಡರ್ ಮಾಡಿದ್ದ.

ತನ್ನ ಹುಟ್ಟುಹಬ್ಬದ ಸಮಯದಲ್ಲಿ, ಈ ರೀತಿ ಮಾಡಿ ವ್ಯಕ್ತಿ ಜೀವವನ್ನೇ ಕಳೆದುಕೊಂಡ
ತನ್ನ ಹುಟ್ಟುಹಬ್ಬದ ಸಮಯದಲ್ಲಿ, ಈ ರೀತಿ ಮಾಡಿ ವ್ಯಕ್ತಿ ಜೀವವನ್ನೇ ಕಳೆದುಕೊಂಡ

ಈ ಮಧ್ಯೆ, ಯಾರೋ ಒಬ್ಬಾತ ಬಂದು, ಒಂದು ದೊಡ್ಡ ಡ್ರಮ್ ಬಿಯರ್ ಬಂದಿದ್ದು ಅದನ್ನು ತೆರೆಯಲು ಆಗುತ್ತಿಲ್ಲ ಎಂದು ಹೇಳಿದ. ಇದಾದ ನಂತರ ಖುದ್ದು ಆತನೇ ತನ್ನ ಕೆಲವು ಸ್ನೇಹಿತರೊಂದಿಗೆ ಅದನ್ನು ತೆರೆಯಲು ನಿರ್ಧರಿಸಿದನು.

ವ್ಯಕ್ತಿಯು ಆ ದೊಡ್ಡ ಡ್ರಮ್ ಅನ್ನು ತೆರೆಯಲು ಪ್ರಯತ್ನಿಸುತ್ತಿದ್ದಾಗ, ಅದರ ಒಂದು ಭಾಗವು ಈ ವ್ಯಕ್ತಿಯ ತಲೆಗೆ ವೇಗವಾಗಿ ಹೊಡೆದಿದ್ದು, ಅವನು ಅಲ್ಲೇ ಬಿದ್ದು ಮೂರ್ಛೆ ಹೋದನು.

ವ್ಯಕ್ತಿಯು ಮೂರ್ಛೆ ಹೋದ ತಕ್ಷಣ, ಜನರು ಏನಾಯಿತು ಎಂದು ಅರ್ಥಮಾಡಿಕೊಳ್ಳುವಷ್ಟರಲ್ಲಿ, ಅವನು ಆಗಲೇ ಸತ್ತಿದ್ದನು. ಇದು ಹೇಗೆ ಸಂಭವಿಸಿತು ಎಂದು ಜನರಿಗೆ ಅರ್ಥವಾಗಲಿಲ್ಲ.

ಮರಣ ಹೊಂದಿದ ವ್ಯಕ್ತಿಗೆ ಕ್ಯಾನ್ಸರ್ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರ ಹೊರತಾಗಿಯೂ, ಅವನು ತನ್ನ ಜೀವನವನ್ನು ಬಹಳ ಅದ್ದೂರಿಯಾಗಿ ನಡೆಸುತ್ತಿದ್ದನು ಮತ್ತು ತನ್ನ ಎಲ್ಲ ಸ್ನೇಹಿತರನ್ನು ತುಂಬಾ ಪ್ರೀತಿಸುತ್ತಿದ್ದನು. ಆ ವ್ಯಕ್ತಿ ತನ್ನ ಪತ್ನಿ ಮತ್ತು ಮಗನನ್ನು ಕೂಡ ಅಗಲಿದ್ದಾರೆ. ಸದ್ಯ ಈ ಅಪಘಾತದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Scroll Down To More News Today