Welcome To Kannada News Today

Viral News: ನಾಯಿಮರಿಯನ್ನು ಅಪಹರಿಸಿದ ಮಂಗ, ಮೂರು ದಿನಗಳ ನಂತರ ಬಿಡುಗಡೆ

monkey took the little puppy on the tree: ಮಂಗ ನಾಯಿಮರಿಯನ್ನು ಎತ್ತಿಕೊಂಡು ಮರ ಹತ್ತಿತು. ಅದು ಮೂರು ದಿನಗಳ ಕಾಲ ನಾಯಿಮರಿಯನ್ನು ಹಿಡಿದುಕೊಂಡೆ ಸುತ್ತುತ್ತಿತ್ತು, ಅಂತಿಮವಾಗಿ ಕೋತಿ ಮೂರನೇ ದಿನಕ್ಕೆ ಬಿಡುಗಡೆ ಮಾಡಿತು.

🌐 Kannada News :

monkey took the little puppy on the tree: ನಾಯಿಮರಿಯನ್ನು ಅಪಹರಿಸಿದ ಮಂಗವೊಂದು, ಮೂರು ದಿನಗಳ ನಂತರ ಬಿಡುಗಡೆ ಮಾಡಿದ ಘಟನೆಯ ವಿಡಿಯೋ ವೈರಲ್ ಆಗಿದೆ.

ಪ್ರಾಣಿಗಳ ತಮಾಷೆಯ ವೀಡಿಯೊಗಳು ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಇತ್ತೀಚೆಗೆ, ಒಂದು ಕೋತಿಯ ಇಂತಹ ವಿಡಿಯೋ ವೈರಲ್ ಆಗಿದ್ದು, ಒಂದೆಡೆ ಜನರು ಈ ಮಂಗದ ಚೇಷ್ಟೆಗೆ ಕಷ್ಟಪಡಬೇಕಾಯಿತು.

ಈ ಮಂಗ ನಾಯಿಮರಿಯನ್ನು ಎತ್ತಿಕೊಂಡು ಮರ ಹತ್ತಿತು. ಅದು ಮೂರು ದಿನಗಳ ಕಾಲ ನಾಯಿಮರಿಯನ್ನು ಹಿಡಿದುಕೊಂಡೆ ಸುತ್ತುತ್ತಿತ್ತು, ಅಂತಿಮವಾಗಿ ಕೋತಿ ಮೂರನೇ ದಿನಕ್ಕೆ ಬಿಡುಗಡೆ ಮಾಡಿತು.

ಈ ವೀಡಿಯೊ ಕಾಡಿನ ಅಂಚಿನಲ್ಲಿರುವ ಹಳ್ಳಿಯದ್ದಾಗಿದೆ. ವರದಿಗಳ ಪ್ರಕಾರ, ಇದು ಮಲೇಷಿಯಾದ ಒಂದು ಹಳ್ಳಿಯ ಪ್ರದೇಶದ್ದು. ಈ ನಾಯಿಮರಿಯ ಹೆಸರು ಸಾರು ಮತ್ತು ಒಂದು ದಿನ ಇದ್ದಕ್ಕಿದ್ದಂತೆ ಒಂದು ಕೋತಿ ಎಲ್ಲಿಂದಲೋ ಬಂದು ಆ ಮುಗ್ಧ ನಾಯಿಮರಿಯನ್ನು ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿತ್ತು.

ಜನರು ತಡೆಯುವಷ್ಟರಲ್ಲಿ ಮರವೇರಿ ಕೂತಿತ್ತು, ನಾಯಿಮರಿ ಬಹಳ ಚಿಕ್ಕದು, ಅದಕ್ಕಿನ್ನೂ ಕೇವಲ ಎರಡು ವಾರಗಳಷ್ಟು ಮಾತ್ರ ವಯಸ್ಸಾಗಿತ್ತು, ಕೋತಿಯ ಚೇಷ್ಟೆಗೆ ನಾಯಿಮರಿ ಕಿರುಚಲು ಆರಂಭಿಸಿತು.

ಇದರ ನಂತರ ಸ್ಥಳೀಯ ಜನರು ಮಂಗನ ಬೆನ್ನಟ್ಟಲು ಆರಂಭಿಸಿದರು ಆದರೆ ಆ ಕೋತಿ ನಾಯಿಮರಿಯನ್ನು ಬಿಡಲೇ ಇಲ್ಲ. ಈ ಸಮಯದಲ್ಲಿ ಕೋತಿ ಮರದ ಎಲೆಗಳನ್ನು ತಿನ್ನುತ್ತ, ಒಂದೆಡೆ ನಾಯಿಯನ್ನು ಹಿಡಿದುಕೊಂಡು ಕೂತಿದ್ದಾಗ, ಪಾಪ ನಾಯಿಮರಿ ಅಳುತ್ತಲೇ ಇತ್ತು.

ಜನರು ಸಹ ನಾಯಿಮರಿಯನ್ನು ಮೂರು ದಿನಗಳ ಕಾಲ ಆ ಕೋತಿಯಿಂದ ರಕ್ಷಿಸಲು ಪ್ರಯತ್ನಿಸಿದರು, ಆದರೆ ಯಶಸ್ವಿಯಾಗಲಿಲ್ಲ.

ಅಂತಿಮವಾಗಿ ಮೂರನೆಯ ದಿನ ಜನರು ಕೋತಿಯಿಂದ ಸಾರು (ನಾಯಿಮರಿ) ಅನ್ನು ರಕ್ಷಿಸಿದರು. ಇದರ ನಂತರ ನಾಯಿಮರಿಯನ್ನು ಮರಳಿ ತಂದು ಸ್ವಲ್ಪ ಆಹಾರ ನೀಡಲಾಯಿತು. ಈ ಘಟನೆಯ ವಿಡಿಯೋವೈರಲ್ ಆಗಿದೆ. ವಿಡಿಯೋವನ್ನು ಇಲ್ಲಿ ನೋಡಿ

Scroll Down To More News Today