ಸೆಕ್ಸ್ ಸ್ಟೋರಿಗಳ ಹಿಂದೆ ಬಿದ್ದ ನ್ಯೂಸ್ ಸೈಟ್ ಗಳು
News sites that have fallen behind sex stories.
[story-lines]
ನಾನಷ್ಟೇ , ಹೇಳ ಬೇಕು ಅನ್ನೋದನ್ನ, ನೇರವಾಗಿ ನಿಮ್ಮ ಮುಂದೆ ಹೇಳಿದಾಗಲೇ ಸ್ವಲ್ಪ ಸಮಾಧಾನ. ಇತ್ತೀಚೆಗಿನ ಬೆಳವಣಿಗೆ ನೋಡಿದ್ರೆ ಭಯ ಆಗುತ್ತೆ, ಕೆಲವು ನ್ಯೂಸ್ ಪೋರ್ಟಲ್ ಗಳು ಸೆಕ್ಸ್ ಸ್ಟೋರಿಗಳನ್ನೇ ಬಂಡವಾಳವನ್ನಾಗಿ ಮಾಡಿಕೊಂಡು, ಓದುಗರನ್ನ ಹಿಡಿದಿಟ್ಟುಕೊಳ್ಳಲು ಮುಂದಾಗಿವೆ.
ಅಷ್ಟೇಕೆ, ಇದಕ್ಕೆ ದೊಡ್ಡ ದೊಡ್ಡ ನ್ಯೂಸ್ ಸೈಟ್ ಗಳೇನೂ ಹೊರತಾಗಿಲ್ಲ, ಅಕಸ್ಮಾತ್ ಯಾವುದೋ ರೇಪ್ ಸುದ್ದಿ ಸಿಕ್ಕಿ ಬಿಡ್ತು ಅಂದು ಕೊಳ್ಳಿ, ಇವರೇ ಪಕ್ಕದಲ್ಲಿ ನಿಂತು ಮಾಡಿಸಿರೋ ತರಹ ವಿವರಿಸಿ ಹೇಳೋಕೆ ಶುರು ಮಾಡ್ತಾರೆ.
ಯಾಕೆ, ಬರೆಯೋದಕ್ಕೆ ಬೇರೆ ವಿಚಾರಗಳೇ ಇಲ್ವಾ ? ಸರಿ ರೇಪ್ ಸುದ್ದಿ , ಸೆಕ್ಸ್ ಗೆ ಸಂಬಂಧಿತ ಸುದ್ದಿಯೇ ಆದರೂ ಹೇಳುವ ರೀತಿ ಇದೆ. ಅದು ಬಿಟ್ಟು ಓದುಗರನ್ನೇ ಉದ್ರೇಕಗೊಳ್ಳುವಂತೆ ಬಿಡಿಸಿ ಬಿಡಿಸಿ ಹೇಳೋದ್ರಿಂದ ಇವರಿಗೇನು ಪ್ರಯೋಜನ.
ಇಂತಹ ಕೆಲವು ನ್ಯೂಸ್ ತಾಣಗಳಿಂದ ಉತ್ತಮ ಬರಹಗಳಿಗೆ ಬೆಲೆ ಇಲ್ಲದಂತಾಗಿದೆ, ಮಹಿಳಾ ಓದುಗರು ಯಾವುದೇ ಲಿಂಕ್ ಕ್ಲಿಕ್ ಮಾಡೋದಕ್ಕೂ ಹೆದುರುವ ಸ್ಥಿತಿ ನಿರ್ಮಾಣವಾಗಿದೆ.
ಅಲ್ಲಿ ಇಲಿ ಹೋಗಿದ್ರೆ , ಹುಲಿನೇ ಹೋಯ್ತು ಅಂತ ಬಿಂಬಿಸೋದ್ರಿಂದ ನಮ್ಮ ಓದುಗರ ಸಂಖ್ಯೆ ಏನೂ ಹೆಚ್ಚಾಗೋಲ್ಲ. ಇರೋದನ್ನ ಹೇಳೋದ್ರಿಂದ ಓದುಗರೇನು ಕಡಿಮೆ ಆಗೋಲ್ಲ. ನಿಜಕ್ಕೂ ನೀವು ಸೆಕ್ಸ್ ಗೆ ಸಂಬಂಧಿತ ಲೇಖನಗಳನ್ನೇ ಬರೆಯೋದಾದ್ರೆ ” ನ್ಯೂಸ್ ” ಎಂಬ ಹೆಸರು ಬಳಸದೆ, xxx ಎಂದು ಬಳಸಿ ಪುಣ್ಯ ಕಟ್ಕೊಂಡ್ರೆ ಒಳ್ಳೆಯದು.
“ಇಲ್ಲಿ ಯಾರನ್ನೂ ನೋಯಿಸುವ, ಉದ್ದೇಶ ನಮ್ಮದಲ್ಲ, ಇರುವ ವಾಸ್ತವ್ಯ ಹೇಳಿದ್ರಿಂದ ನಿಮಗೆ ನೋವಾಗಿದ್ರೆ ನಾವೇನು ಮಾಡಲು ಸಾಧ್ಯವಿಲ್ಲ..
Web Title : ಸೆಕ್ಸ್ ಸ್ಟೋರಿಗಳ ಹಿಂದೆ ಬಿದ್ದ ನ್ಯೂಸ್ ಸೈಟ್ ಗಳು – News sites that have fallen behind sex stories
Follow us On
Google News |