ಎಪಿಎಲ್ ಅಪೋಲೊದಿಂದ ಆಕರ್ಷಕ ಶೈಲಿ ಸಿಗ್ನೇಚರ್ ಪೈಪ್ ಬಿಡುಗಡೆ

APL Apollo Releases Awesome Style Signature Pipe

( Kannada News Today ) :

ಭಾರತದ ಅಗ್ರಗಣ್ಯ ಸ್ಟೀಲ್ ಪೈಪ್ ಉತ್ಪಾದಕ ಕಂಪನಿಯಾಗಿರುವ ಎಪಿಎಲ್ ಅಪೋಲೊ ಟ್ಯೂಬ್ಸ್ ಲಿಮಿಟೆಡ್ (ಎಪಿಎಲ್ ಅಪೋಲೊ) ಅಪೋಲೊ ಸಿಗ್ನೇಚರ್ ಹೆಸರಿನಲ್ಲಿ ವೈವಿಧ್ಯಮಯ ಶ್ರೇಣಿಯ ಆಕರ್ಷಕ ವಿನ್ಯಾಸದ ಪೈಪ್‍ಗಳನ್ನು ಬಿಡುಗಡೆ ಮಾಡಿದೆ.

ಇದು ನಮ್ಮ ಅಬೋಡ್‍ನ ನೋಟ ಹಾಗೂ ಅನುಭೂತಿಯನ್ನು ಹೆಚ್ಚಿಸಲಿದೆ. ದೇಶದಲ್ಲಿ ಆಂತರಿಕ ವಿನ್ಯಾಸಕ್ಕೆ ಬೇಡಿಕೆ ತ್ವರಿತಗಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಎಪಿಎಲ್ ಅಪೋಲೊ ಆಕರ್ಷಕ ವಿನ್ಯಾಸಭರಿತ ಪೈಪ್‍ಗಳ ಸಂಗ್ರಹವನ್ನು ಬಿಡುಗಡೆ ಮಾಡಿದೆ.

ಈ ಉತ್ಪನ್ನಗಳು ಸೌಂದರ್ಯಾತ್ಮಕವಾಗಿ ಕೂಡಾ ಇತರ ಪೈಪ್‍ಗಳಿಗಿಂತ ಶ್ರೇಷ್ಠವಾಗಿದ್ದು, ನಮ್ಮ ಕಟ್ಟಡಗಳಿಗೆ ವಿಶೇಷ ಮೆರುಗನ್ನು ನೀಡಲಿವೆ. ಅಪೋಲೊ ಸಿಗ್ನೇಚರ್ ಪೈಪ್‍ಗಳನ್ನು ಮೇಲ್ಚಾವಣಿಯಲ್ಲಿ, ಪೀಠೋಕರಣಗಳಲ್ಲಿ, ಸ್ತಂಭಗಳು ಮತ್ತು ಆಂತರಿಕ ವಿನ್ಯಾಸದಲ್ಲಿ ಬಳಸಬಹುದಾಗಿದೆ.

ಅಪೋಲೊ ಸಿಗ್ನೇಚರ್ ಬಿಡುಗಡೆಯನ್ನು ಘೋಷಿಸಿ ಮಾತನಾಡಿದ ಎಪಿಎಲ್ ಅಪೋಲೊದ ಸಿಎಂಡಿ ಸಂಜೀವ್ ಗುಪ್ತಾ, “ಬಾಳಿಕೆ, ಬಲ ಮತ್ತು ಸೌಂದರ್ಯಾತ್ಮಕ ಅಂಶಗಳಿಂದಾಗಿ ಅಪೋಲೊ ಸಿಗ್ನೇಚರ್ ಪೈಪ್‍ಗಳು ನಮ್ಮ ಉತ್ಪನ್ನಗಳ ಪೈಕಿ ವ್ಯಾಪಕ ಚರ್ಚೆಯಾಗುತ್ತಿರುವ ಉತ್ಪನ್ನವಾಗಿದೆ.

ಗುಣಮಟ್ಟದ ಪ್ರಜ್ಞೆ ಇರುವ ವರ್ಗದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಇದು ಪಡೆದಿದೆ. ಮರದ ಬದಲಾಗಿ ಹೆಚ್ಚು ಉತ್ತಮವಾದ ಉಕ್ಕಿನ ಉತ್ಪನ್ನವನ್ನು ಪರಿಚಯಿಸುವ ಮೂಲಕ ನಾವು ಪರಿಸರಕ್ಕೂ ಗಣನೀಯವಾದ ಕೊಡುಗೆ ನೀಡುತ್ತಿದ್ದೇವೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.