Kannada News - Kannadigas Adda

Welcome To Kannada News - Kannadigas Adda

ಸಂತ್ರಸ್ತ ಮಗುವಿನ ಗುರುತು ಬಹಿರಂಗ ಪಡಿಸದಿರಿ

Do not disclose the victim's identity

Kannadanews.today - ಕನ್ನಡಿಗಾಸ್ ಅಡ್ಡ

ಹಾಸನ : ಲೈಂಗಿಕ ಅಪರಾಧಗಳಿಂದ ಸಂತ್ರಸ್ತವಾದ ಮಗುವಿನ ಗುರುತನ್ನು ಬಹಿರಂಗಪಡಿಸದಿರಿ ಎಂದು ಹಾಸನ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಸಿ ದೇವರಾಜೇಗೌಡರವರು ಮನವಿ ಮಾಡಿದ್ದಾರೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ಕಲಂ 23ರನ್ವಯ ಯಾವುದೇ ಮಾಧ್ಯಮಗಳು ಲೈಂಗಿಕ ಅಪರಾಧಗಳಿಂದ ಸಂತ್ರಸ್ತವಾದ ಮಗುವಿನ ಹೆಸರು, ವಿಳಾಸ, ಭಾವಚಿತ್ರ, ಕೌಂಟುಂಬಿಕ ವಿವರ, ಶಾಲೆ, ನೆರೆಹೊರೆ ಅಥವಾ ಮಗುವಿನ ಗುರುತನ್ನು ಬಹಿರಂಗಪಡಿಸುವ ಇನ್ಯಾವುದೇ ವಿವರಗಳನ್ನು ಬಹಿರಂಗಗೊಳಿಸುವುದನ್ನು ನಿಷೇಧಿಸಲಾಗಿದೆ.

ಆದರೆ ವಿಶೇಷ ನ್ಯಾಯಾಲಯ ಸೂಕ್ತ ಕಾರಣಗಳು ಇದ್ದಲ್ಲಿ ಬರಹದಲ್ಲಿ ದಾಖಲಿಸಿ, ಮಗುವಿನ ಹಿತಾದೃಷ್ಠಿಯಿಂದ ಮಾಹಿತಿಯನ್ನು ಬಹಿರಂಗಗೊಳಿಸುವುದಕ್ಕೆ ಅನುಮತಿ ನೀಡಬಹುದಾಗಿರುತ್ತದೆ.

ಇದನ್ನೂ ಓದಿ : ಚುನಾವಣಾ ಕರ್ತವ್ಯ ಲೋಪ ಸೇವೆಯಿಂದ ಅಮಾನತ್ತು

ಒಂದು ವೇಳೆ ಯಾರೇ ವ್ಯಕ್ತಿ ಅಥವಾ ಯಾವುದೇ ದೃಶ್ಯ, ಶ್ರವಣ ಅಥವಾ ಮುದ್ರಣ ಮಾಧ್ಯಮದ ವರದಿಗಾರರು ಈ ಮಾಹಿತಿಯನ್ನು ಪ್ರಕಟಿಸಿ ಕಾನೂನು ಉಲ್ಲಂಘಿಸಿದರೆ, ಅಂತವರಿಗೆ ಕನಿಷ್ಠ ಆರು ತಿಂಗಳಿನಿಂದ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡರಿಂದಲೂ ಶಿಕ್ಷಿಸಬಹುದಾಗಿದೆ.

ಲೈಂಗಿಕ ದೌರ್ಜನ್ಯಕ್ಕೊಳಗಾದ ಯಾವುದೇ ಮಗುವಿನ ಮಾಹಿತಿಯನ್ನು ಪ್ರಚುರಪಡಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮಗಳನ್ನು ಹಾಗೂ ಪ್ರಚುರಪಡಿಸದೇ ಇರಲು ಅನುಸರಿಸಬೇಕಾದ ಕ್ರಮಗಳನ್ನು ಕುರಿತು ಸೂಕ್ತ ನಿರ್ದೇಶನವನ್ನು ನೀಡುವಂತೆ ಸಲ್ಲಿಸಿದ ಸರ್ವೋಚ್ಛ ನ್ಯಾಯಾಲಯದ ಆದೇಶ ರಿಟ್ ಪೀಟೇಷನ್ ನಂ.565/2012 ರ ವಿಚಾರಣೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ಯಾವುದೇ ಕಾರಣಕ್ಕೂ ಸಂತ್ರಸ್ತ ಮಗುವಿನ ಮಾಹಿತಿಯನ್ನು ಬಹಿರಂಪಡಿಸುವುದನ್ನು ನಿಷೇಧಿಸಿದ್ದು, ಒಂದು ವೇಳೆ ಸಂತ್ರಸ್ತ ಮಗುವಿನ ಹಿತಾದೃಷ್ಠಿಯಿಂದ ಮಾತ್ರ ಜಿಲ್ಲಾ ಸತ್ರ ನ್ಯಾಯಾಧೀಶರ ಲಿಖಿತ ಅನುಮತಿಯ ಮೇರೆಗೆ ಮಾತ್ರ ಮಾಹಿತಿಯನ್ನು ಬಹಿರಂಗಪಡಿಸಬಹುದಾಗಿದೆ.

ಇದನ್ನೂ ಓದಿ : ಲೋಕಸಭಾ ಚುನಾವಣೆ : ವ್ಯವಸ್ಥಿತ ಸಿದ್ದತೆಗೆ ಜಿಲ್ಲಾಧಿಕಾರಿ ಸೂಚನೆ

ಇನ್ನುಳಿದಂತೆ ಯಾವುದೇ ಕಾರಣಕ್ಕೂ ಸಂತ್ರಸ್ತ ಮಗುವಿನ ಮಾಹಿತಿಯನ್ನು ಬಹಿರಂಗ ಪಡಿಸುವುದನ್ನು ನಿಷೇಧಿಸಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಸಿ. ದೇವರಾಜೇಗೌಡ ತಿಳಿಸಿದ್ದಾರೆ.

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.