Kannada News - Kannadigas Adda

Welcome To Kannada News - Kannadigas Adda

ಚುನಾವಣಾ ಕರ್ತವ್ಯ ಲೋಪ ಸೇವೆಯಿಂದ ಅಮಾನತ್ತು

Election duty dismissal-suspended by service

Kannadanews.today - ಕನ್ನಡಿಗಾಸ್ ಅಡ್ಡ

ಹಾಸನ : ಲೋಕಸಭಾ ಚುನಾವಣೆ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾದ ಅಕ್ರಂ ಪಾಷ ಅವರು ಮೂವರನ್ನು ಅಮಾನತ್ತುಗೊಳಿಸಿದ್ದು ಉಳಿದ ಇಬ್ಬರ ವಿರುದ್ದ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎ.ಎನ್. ಪ್ರಕಾಶ್ ಗೌಡ ಅವರಿಗೆ ಶಿಫಾರಸ್ಸಯ ಮಾಡಿದ್ದಾರೆ.

ಅರಕಲಗೂಡು ವಿಧಾನ ಸಭಾ ಕ್ಷೇತ್ರ ಹಿಪ್ಪಲಿ ಚೆಕ್ ಪೋಸ್ಟ್ ತೆರೆಯಲಾಗಿದ್ದು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಐವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಬಸವಾಪಟ್ಟಣ ಹೆಚ್.ಎಂ.ಎಸ್, ಸರ್ಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕರಾದ ದೀಪು ಎಸ್.ವೈ, ಬನ್ನೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ಸುನೀಲ್ ಕುಮಾರ್ ಹಾಗೂ ಆಲದಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ಯೋಗೇಶ್, ಅರಕಲಗೂಡು ಪೊಲೀಸ್ ಠಾಣೆ ಮುಖ್ಯ ಪೇದೆ ಕೃಷ್ಣ ಹಾಗೂ ಗೃಹ ರಕ್ಷಕದಳದ ಸ್ವಾಮಿಗೌಡ ಅವರುಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ರಾತ್ರಿ ವೇಳೆ ಚೆಕ್ ಪೋಸ್ಟ್ ನಲ್ಲಿ ಹಣ ಮಧ್ಯ, ಸರಕು ಸಾಮಾಗ್ರಿಗಳ ಅಕ್ರಮ ಸಾಗಾಟ ತಪಾಸಣೆ ನಡೆಸಿ ಪತ್ತೆ ಹಚ್ಚ;ಲು ಇವರುಗಳಿಗೆ ಜವಾಬ್ದಾರಿಯನ್ನು ನೀಯೋಜಿಸಲಾಗಿತ್ತು.

ಆದರೆ ಮಾ.19 ರಂದು ರಾತ್ರಿ ಸುಮಾರು 11.25 ಗಂಟೆ ಸಮಯದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಅರಕಲಗೂಡು ತಹಶೀಲ್ದಾರರು ಸಂಬಂಧಿಸಿದಂತೆ ಚೆಕ್ ಪೋಸ್ಟ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗದಿರುವುದು ಕಂಡುಬಂದಿರುತ್ತದೆ. ಆದರಿಂದ ಚುನಾವಣಾ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಪ್ರಜಾ ಪ್ರಾತಿನಿಧಿ ಕಾಯ್ದೆ-1951ರ ಕಲಂ 134ಡಿ ಕರ್ತವ್ಯ ಲೋಪ ಎಂದು ಪರಿಗಣಿಸಿ ಉಪನ್ಯಾಸಕರಾದ ದೀಪು ಎಸ್.ವೈ, ಕಾರ್ಯದರ್ಶಿಗಳಾದ ಸುನೀಲ್ ಕುಮಾರ್, ಯೋಗೇಶ್ ಅವರನ್ನು ಅಮಾನತ್ತು ಆದೇಶವನ್ನು ಹೊರಡಿಸಿದ್ದಾರೆ.

ಇದೇ ರೀತಿ ಅರಕಲಗೂಡು ಪೊಲೀಸ್ ಠಾಣೆಯ ಮುಖ್ಯ ಪೇದೆ ಕೃಷ್ಣ ಮತ್ತು ಗೃಹ ರಕ್ಷಕ ದಳದ ಸ್ವಾಮಿಗೌಡ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಶಿಫಾರಸ್ಸು ಮಾಡಿ ಜಿಲ್ಲಾಧಿಕಾರಿ ಹಾಗೂ ಇಲ್ಲಾ ಚುನಾವಣಾಧಿಕಾರಿ ಅವರು ಪತ್ರ ರವಾನಿಸಿದ್ದಾರೆ.

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.