ಕರ್ನಾಟಕ ಸರ್ಕಾರ ಸುಗಮ ವಹಿವಾಟು ಸುಧಾರಣೆಯಡಿ ವಲಯ ಆಧರಿತ ದೃಷ್ಟಿಕೋನ ಅಳವಡಿಸಿಕೊಳ್ಳುವುದು ಅಗತ್ಯ: ಪಹ್ಲೆ ಇಂಡಿಯಾ ಫೌಂಡೇಷನ್

Karnataka govt should adopt sector-based approach to ease of doing business reforms: Pahle India Foundation

ದೇಶದ ಅಗ್ರಗಣ್ಯ ನೀತಿ ನಿರೂಪಣಾ ಸಂಸ್ಥೆಯಾದ ಪೆಹ್ಲೆ ಇಂಡಿಯಾ ಫೌಂಡೇಷನ್ ಇಂದು ಅಬಕಾರಿ ವಿಭಾಗದ ಸಹಾಯಕ ಆಯುಕ್ತ ವೆಂಕಟ್ ಸಾಯಿ ಮತ್ತು ಪಹ್ಲೆ ಇಂಡಿಯಾ ಫೌಂಡೇಷನ್‍ನ ಸಂಶೋಧನಾ ವಿಭಾಗದ ಮುಖ್ಯಸ್ಥೆ ನಿರುಪಮಾ ಸೌಂದರ್ಯರಾಜನ್ ಸೇರಿದಂತೆ ಉನ್ನತ ಮಟ್ಟದ ಹಲವು ಅಧಿಕಾರಿಗಳ ಜತೆ ಅಧ್ಯಯನ ವರದಿ ಹಂಚಿಕೊಂಡಿದೆ. ಸರ್ಕಾರವು ವಿವಿಧ ಕೈಗಾರಿಕಾ ವಲಯಗಳ ನಡುವೆ ಅಂತರ್ ಸಂಪರ್ಕನ್ನು ಸಾಧಿಸಬೇಕು ಮತ್ತು ವಹಿವಾಟು ನಡೆಸಲು ಸುಗಮ ವ್ಯವಸ್ಥೆಯನ್ನು ರಾಜ್ಯದಲ್ಲಿ ಕಲ್ಪಿಸಿಕೊಡಬೇಕು ಎಂದು ಶಿಫಾರಸ್ಸು ಮಾಡಿದೆ.

ಬೆಂಗಳೂರಿನಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮ ಪ್ರತಿನಿಧಿಗಳ ನಡುವೆ ನಡೆದ ಗುಪ್ತ ಸಭೆಯಲ್ಲಿ ಈ ವರದಿಯನ್ನು ಸಲ್ಲಿಸಲಾಗಿದ್ದು, ಕರ್ನಾಟಕ ಸರ್ಕಾರವು ಕೆಲ ನಿರ್ದಿಷ್ಟ ಸುಧಾರಣೆಗಳನ್ನು ತರುವಂತೆ ಆಗ್ರಹಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಅಬಕಾರಿ ನಿಯಮಾವಳಿಗಳಲ್ಲಿ ಸುಧಾರಣೆ ತಂದು ಸುಗಮ ವಹಿವಾಟು ನಡೆಸುವ ವಾತಾವರಣವನ್ನು ಸೃಷ್ಟಿಸಲು ಸಲಹೆ ಮಾಡಲಾಗಿದೆ.

ವಿಶ್ವಬ್ಯಾಂಕ್‍ನ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಇಂಡೆಕ್ಸ್‍ನಲ್ಲಿ ಬೆಂಗಳೂರು ನಗರಕ್ಕೆ ಭಾರತದ ನಾಲ್ಕನೇ ಅತ್ಯುತ್ತಮ ನಗರ ಎಂದು ರ್ಯಾಂಕಿಂಗ್ ನೀಡಿರುವ ಬೆನ್ನಲ್ಲೇ ಈ ವರದಿ ಸಲ್ಲಿಕೆಯಾಗಿದೆ.

ಸುಗಮ ವಹಿವಾಟಿಗೆ ಸಮಗ್ರ ಮೌಲ್ಯ ಸರಣಿ ದೃಷ್ಟಿಕೋನ: ಸಕ್ಕರೆ, ಆಲ್ಕೋ ಪೇಯ ಮತ್ತು ಪ್ರವಾಸೋದ್ಯಮ” ಎಂಬ ಶೀರ್ಷಿಕೆಯ ಪಿಐಎಫ್ ವರದಿಯು ಕರ್ನಾಟಕದ ಮೂರು ಪ್ರಮುಖ ಅಂತರ್ ಸಂಪರ್ಕದ ಉದ್ದಿಮೆಗಳಾದ ಸಕ್ಕರೆ, ಆಲ್ಕೋ ಪೇಯ ಮತ್ತು ಪ್ರವಾಸೋದ್ಯಮ ವಲಯದ ಬಗ್ಗೆ ಪ್ರಮುಖವಾದ ನೀತಿ ಶಿಫಾರಸ್ಸುಗಳನ್ನು ಮಾಡಿದೆ. ಈ ಉದ್ಯಮಗಳು ಪ್ರಮುಖವಾದ ಮುಮ್ಮುಖ ಮತ್ತು ಹಿಮ್ಮುಖ ಸಂಪರ್ಕವನ್ನು ಹೊಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಕ್ಕರೆ ಉದ್ಯಮವು ಆಲ್ಕೋಹಾಲ್ ಪೇಯಕ್ಕೆ ಸಾಧನ ಪೂರೈಕೆ ವಲಯವಾಗಿದ್ದರೆ, ಪ್ರವಾಸೋದ್ಯಮ ಸಾಧನ ಸ್ವೀಕರಿಸುವ ವಲಯವಾಗಿದೆ ಎಂದು ವರದಿಯಲ್ಲಿ ಪ್ರತಿಪಾದಿಸಲಾಗಿದೆ.

ಆಲ್ಕೋ ಪೇಯ ಉದ್ಯಮವು ಕರ್ನಾಟಕದ ಅಬಕಾರಿ ಸಂಗ್ರಹಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತದೆ. ಬಜೆಟ್ ಅಂದಾಜಿನ ಪ್ರಕಾರ ಆಲ್ಕೋಹಾಲ್ ಪೇಯ ಉದ್ಯಮದಿಂದ ಕರ್ನಾಟಕ ಸರ್ಕಾರಕ್ಕೆ 2018-19ರಲ್ಲಿ ಹರಿದು ಬಂದ ಆದಾಯ ಸುಮಾರು 1.4 ಲಕ್ಷ ಕೋಟಿ ರೂಪಾಯಿಗಳು. ಆದಾಗ್ಯೂ ರಾಜ್ಯದಲ್ಲಿ ಆಲ್ಕೋಹಾಲ್ ಉತ್ಪಾದನೆ ಮತ್ತು ಸಾಗಾಟಕ್ಕೆ ಸಂಬಂಧಿಸಿದ ಸುಮಾರು 44 ಪ್ರಕ್ರಿಯೆಗಳು ಹಾಗೂ ಅನುಮೋದನೆಗಳು ಬಾಕಿ ಇವೆ ಎಂದು ವಿವರಿಸಲಾಗಿದೆ.

Web Title : Karnataka govt should adopt sector-based approach to ease of doing business reforms: Pahle India Foundation