ಶಾಲಾ ದಾಖಲಾತಿ, ಶುಲ್ಕ ವಸೂಲಿ ಮಾಡುವಂತಿಲ್ಲ, ಶಿಕ್ಷಕರ ರಜೆ ವಿಸ್ತರಣೆ, ಸಚಿವ ಸುರೇಶ ಕುಮಾರ್

No school enrollment and fees at this time says Minister Suresh Kumar

ಬೆಂಗಳೂರು : ದೇಶಕ್ಕೆ ಹೆಮ್ಮಾರಿಯಂತೆ ಬಂದೊದಗಿರುವ ಮಹಾಮಾರಿ ಕೋರಾನಾ ವೈರಸ್ ನಿಂದ ಜನಜೀವನವೇ ಅಸ್ತವ್ಯಸ್ತವಾಗಿದೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಯಾವುದೇ ಶಾಲಾ ಆಡಳಿತ ಮಂಡಳಿ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸುವುದಾಗಲಿ, ಅಥವಾ ಶುಲ್ಕ ವಸೂಲಾತಿ ಮಾಡಿದರೆ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಅವರು ಫೇಸ್ಬುಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದು, ಎಚ್ಚರಿಸಿದ್ದಾರೆ, ಹಾಗೂ ಈ ಹಿಂದೆ ಶಿಕ್ಷಕರಿಗೆ ನೀಡಿದ್ದ ರಜೆಯನ್ನು ಏಪ್ರಿಲ್ ೧೧ ರವರೆಗೆ, ವಿಸ್ತರಿಸಿದ್ದಾರೆ. ಜೊತೆಗೆ ಶಿಕ್ಷಕರಿಗೆ ನೀಡಲಾಗಿದ್ದ ವರ್ಕ್ ಫ್ರಮ್ ಹೋಮ್ ಕೆಲಸಗಳನ್ನು ಏಪ್ರಿಲ್ ೧೧ ರೊಳಗೆ ಮುಗಿಸಲು ತಿಳಿಸಿದ್ದಾರೆ.

ಅದಾಗಲೇ ೨೦೨೦-೨೦೨೧ ರ ಸಾಲಿನ ವಿದ್ಯಾರ್ಥಿಗಳ ದಾಖಲಾತಿಯನ್ನು ಮುಂದೂಡಲು ಇಲಾಖೆ ತಿಳಿಸಿದೆ, ಹಾಗೂ ಮುಂದಿನ ಆದೇಶದವರೆಗೆ ಇದನ್ನು ಫಾಲಿಸಲು ಸೂಚಿಸಿದೆ. ಈ ನಡುವೆ ಕೆಲ ಶಾಲೆಗಳು ಪೋಷಕರಿಗೆ ಶುಲ್ಕ ಪಾವತಿಗೆ ತಿಳಿಸಿರುವುದು ಹಾಗೂ ಎಸ್ ಎಂ ಎಸ್ ಕಳುಹಿಸುತ್ತಿರುವುದು, ಈ ತುರ್ತು ಪರಿಸ್ಥಿತಿಯಲ್ಲಿ ಅಪರಾಧ ಎಂದಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲೂ ಶುಲ್ಕಕ್ಕಾಗಿ ಒತ್ತಾಯ ಮಾಡುವಂತಿಲ್ಲ ಹಾಗೂ ಸಮಯ ನಿಗದಿ ಪಡಿಸುವಂತಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಮುಂದಿನ ಆದೇಶದವರೆಗೆ ಯಾವುದೇ ಪ್ರಕ್ರಿಯೆ ಮಾಡಬಾರದು ಎಂದು ತಿಳಿಸಿದ್ದಾರೆ.

Web Title : No school enrollment and fees at this time says Minister Suresh Kumar
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | TwitterYouTube ಅನುಸರಿಸಿ.