ಗಾನ ಶಾರದೆ, ಗಾನ ಕೋಗಿಲೆ ಎಸ್.ಜಾನಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್

Popular play back singer S. Janaki discharged from Mysuru hospital

ಗಾನ ಶಾರದೆ, ಗಾನ ಕೋಗಿಲೆ ಎಸ್.ಜಾನಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್ – Popular play back singer S. Janaki discharged from Mysuru hospital

ಗಾನ ಶಾರದೆ, ಗಾನ ಕೋಗಿಲೆ ಎಸ್ ಜಾನಕಿ ಆಸ್ಪತ್ರೆಗೆ ದಾಖಲು

ಹೆಸರಾಂತ ಹಿನ್ನಲೆ ಗಾಯಕಿ, ಗಾನಕೋಗಿಲೆ, ಗಾನ ಶಾರದೆ ಎಸ್ ಜಾನಕಿ ಅನಾರೋಗ್ಯದ ಕಾರಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಂಬಂಧಿಕರ ಮನೆಗೆ ಭೇಟಿ ನೀಡಿದ್ದ ವೇಳೆ ಸೊಂಟ ಮುರಿತದಿಂದಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇಂದು ಡಿಸ್ಚಾರ್ಜ್ ಆಗಿದ್ದಾರೆ.

ಮೈಸೂರಿನ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದ ಎಸ್ ಜಾನಕಿಯವರು ಕಾಲು ಜಾರಿ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಈ ಹಿನ್ನೆಲೆ ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕ್ಸಿತೆ ಪಡೆದು ಗುಣಮುಖರಾಗಿದ್ದಾರೆ. ಇನ್ನು ಜಾನಕಿಯವರನ್ನು ಪರೀಕ್ಷೆ ನಡೆಸಿದ ವೈದ್ಯರು ಸೊಂಟದ ಭಾಗದಲ್ಲಿ ಫ್ರಾಕ್ಚರ್ ಆಗಿರುವುದನ್ನು ದೃಢಪಡಿಸಿದ್ದರು. ತಕ್ಷಣ ಡಾ.ನಿತಿನ್ ಅವರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದೀಗ ಅವರು ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಟ್ರಾಜ್ ಆಗಿದ್ದಾರೆ.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ ಜಾನಕಿ, ಕನ್ನಡ ಮಕ್ಕಳ ಕೃಪೆಯಿಂದ ನಾನು ಚೆನ್ನಾಗಿದ್ದೇನೆ. ಇಡೀ ಕನ್ನಡ ಮಕ್ಕಳು ನನ್ನ ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ಅವರ ಪ್ರೀತಿಯಿಂದ ಚೆನ್ನಾಗಿಯೇ ಇರುತ್ತೇನೆ. ನಾನು ಸ್ನೇಹಿತರ ಮನೆಗೆ ಬಂದಿದ್ದೆ. ಅಲ್ಲಿ ಬಾಗಿಲ ಹೊಸಿಲು ದಾಟುವಾಗ ಜಾರಿ ಬಿದ್ದಿದ್ದೆ. ತುಂಬಾ ನೋವಾಯ್ತು ಆಗ. ನಂತರ ಆಸ್ಪತ್ರೆಗೆ ಕರೆದುಕೊಂಡು ಆಪರೇಷನ್ ಮಾಡಿದ್ದಾರೆ. ಇಲ್ಲಿ ಅದೇನೋ ಬದಲಾಯಿಸಿದ್ದಾರೆ. ಹಳೆದು ಮುರಿದುಹೋಯ್ತು ಎಂದು ನಡೆದ ಶಸ್ತ್ರಚಿಕಿತ್ಸೆ ಬಗ್ಗೆ ಸ್ವತಃ ಅವರೇ ವಿಶ್ಲೇಷಿಸಿದರು.

ನನಗೆ ಮೈಸೂರಿನ ಜೊತೆ ಜನ್ಮಂತರದ ಋಣ ಇದೆ. ಅದಕ್ಕೆ ಈ ಊರೆಂದರೇ ನನಗೆ ಇಷ್ಟ. ಡಿಸ್ಚಾರ್ಜ್ ಆಗಿ ಮೈಸೂರಿನಲ್ಲಿಯೇ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುತ್ತೇನೆ ಎಂದು ತಿಳಿಸಿದರು

ಎಸ್ ಜಾನಕಿ ಅವರಿಗೆ ಈಗ ಸುಮಾರು 81 ವರ್ಷ ವಯಸ್ಸಾಗಿದ್ದು, ಸುಮಾರು 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಜೊತೆಗೆ ನಾಲ್ಕು ಬಾರಿ ತಮ್ಮ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇವರು 1952ರಲ್ಲಿ ಅಂದಿನ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರಿಂದ ಆಯೋಜಿಸಲ್ಪಟ್ಟಿದ್ದ ಸಂಗೀತ ಸಂಜೆಯಲ್ಲಿ ಪಿ.ಬಿ. ಶ್ರೀನಿವಾಸ್ ಅವರ ಜೊತೆ ಹಾಡಿದ್ದಾರೆ.//// Read Latest Kannada News Live Today in kannadanews.today

Web Title : Popular play back singer S. Janaki discharged from Mysuru hospital