ವಧುವಿಗೆ ಕೊರೊನ ಪಾಸಿಟಿವ್: ಪಿಪಿಇ ಕಿಟ್‌ ಧರಿಸಿ ವಿವಾಹ

ರಾಜಸ್ಥಾನದ ಶಾಬಾದ್ ಜಿಲ್ಲೆಯಲ್ಲಿ ವಧು-ವರರು, ಪುರೋಹಿತರು ಮತ್ತು ಅತಿಥಿಗಳು ಸೇರಿ ವೈಯಕ್ತಿಕ ರಕ್ಷಣಾ ಉಡುಪುಗಳನ್ನು (ಪಿಪಿಇ ಕಿಟ್) ಧರಿಸಿ ವಿವಾಹ ಕಾರ್ಯ ಪೂರ್ಣಗೊಳಿಸಿದ ಘಟನೆ ನಡೆದಿದೆ - Kannada News

(Kannada News) : ಜೈಪುರ (ರಾಜಸ್ಥಾನ): ರಾಜಸ್ಥಾನದ ಶಾಬಾದ್ ಜಿಲ್ಲೆಯಲ್ಲಿ ವಧು-ವರರು, ಪುರೋಹಿತರು ಮತ್ತು ಅತಿಥಿಗಳು ಸೇರಿ ವೈಯಕ್ತಿಕ ರಕ್ಷಣಾ ಉಡುಪುಗಳನ್ನು (ಪಿಪಿಇ ಕಿಟ್) ಧರಿಸಿ ವಿವಾಹ ಕಾರ್ಯ ಪೂರ್ಣಗೊಳಿಸಿದ ಘಟನೆ ನಡೆದಿದೆ.

ಶಾಬಾದ್ ಜಿಲ್ಲೆಯ ಯುವತಿಗೆ ಮದುವೆಯ ದಿನಾಂಕ ಗೊತ್ತಾಗಿತ್ತು. ದುರಾದೃಷ್ಟ ಮದುವೆಯ ದಿನದಂದು ವಧುಗೆ ಕೊರೊನಾ ಸೋಂಕು ತಗುಲಿರುವುದು ಪರೀಕ್ಷೆಗಳಿಂದ ತಿಳಿದುಬಂತು.

ಹೌದು.. ವಧುಗೆ ಕೊರೊನಾ ಪಾಸಿಟಿವ್ ಇದೆ ಎಂದು ತಿಳಿದುಬಂದಿದೆ. ಆದರೆ ಮದುವೆಯನ್ನು ಮೊದಲೇ ವ್ಯವಸ್ಥೆ ಮಾಡಿದ್ದರಿಂದ ವಧು-ವರರ ಕುಟುಂಬ ವಿವಾಹ ಸಮಾರಂಭವನ್ನು ಮುಂದುವರಿಸಲು ನಿರ್ಧರಿಸಿತು.

ಈ ಹಿನ್ನೆಲೆ ಪುರೋಹಿತರು, ವಧು-ವರ ಸೇರಿದಂತೆ ವಿವಾಹಕ್ಕೆ ಬಂದಿದ್ದ ಅತಿಥಿಗಳು ಸಹ ಪಿಪಿಇ ಕಿಟ್‌ಗಳನ್ನು ಧರಿಸಿ ವಿವಾಹ ಕಾರ್ಯದಲ್ಲಿ ಪಾಲ್ಗೊಂಡರು.

ವರನು ಕೈಗವಸು ಮತ್ತು ಪೇಟದೊಂದಿಗೆ ಪಿಪಿಇ ಕಿಟ್ ಧರಿಸಿದ್ದ. ವಧು ಪಿಪಿಇ ಕಿಟ್ ಜೊತೆಗೆ ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಿ ವಿವಾಹ ಸಮಾರಂಭದಲ್ಲಿ ಭಾಗವಹಿಸಿದರು.

ಅತಿಥಿಗಳು ಪಿಪಿಇ ಕಿಟ್‌ಗಳ ನಡುವಿನ ಮದುವೆಯನ್ನು ಕೊರೊನಾ ವಿವಾಹ ಎಂದು ಬಣ್ಣಿಸಿದರು. ಆದರೆ ಕಿಟ್‌ಗಳನ್ನು ಧರಿಸಿ ವಿವಾಹ ಭೋಜನ ಹೇಗೆ ಮಾಡಿರಬಹದು ?

Web Title : Rajasthan couple ties knot in PPE kits after bride tests Covid-19 positive
Website : Kannada News Today । Category : India News in Kannada