Kannada News - Kannadigas Adda

Welcome To Kannada News - Kannadigas Adda

ಮೊದಲ ಹಂತದ ವಿದ್ಯುನ್ಮಾನ ಮತಯಂತ್ರಗಳ ರ್ಯಾಂಡಮೈಜೇಷನ್

Randomization of the first stage electronic voting machines

Kannadanews.today - ಕನ್ನಡಿಗಾಸ್ ಅಡ್ಡ

ಹಾಸನ ; ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ಸೂಚನೆಯಂತೆ ಲೋಕಸಭಾ ಚುನಾವಣೆಗೆ ಬಳಕೆಯಾಗುವ ವಿದ್ಯುನ್ಮಾನ ಮತಯಂತ್ರಗಳ ಹಾಗೂ ವಿ.ವಿ. ಪ್ಯಾಟ್‍ಗಳ ಮೊದಲ ಹಂತದ ರ್ಯಾಂಡಮೈಜೇಷನ್ ಪ್ರಕ್ರಿಯೆ ನಡೆಸಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರ ಅಧ್ಯಕ್ಷತೆಯಲ್ಲಿ ರ್ಯಾಂಡಮೈಜೇಷನ್ ಪ್ರಕ್ರಿಯೆ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಲಾಯಿತು. ಅವರ ಸಮ್ಮುಖದಲ್ಲಿ ಕಂಪ್ಯೂಟರ್ ಮೂಲಕ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್ ಹಾಗೂ ವಿ.ವಿ ಪ್ಯಾಟ್‍ಗಳ ವಿಧಾನಸಭಾ ಕ್ಷೇತ್ರವಾರು ಹಂಚಿಕೆ ನಿಗಧಿ ಪಡಿಸಲಾಯಿತು.

ನಿನ್ನೆ ನಡೆಸಲಾದ ಗಣಕೀಕೃತ ರ್ಯಾಂಡಮೈಜೇಷನ್ ಪ್ರಕ್ರಿಯೆ ಅನುಸಾರ ಇಂದು ಬೆಳಗ್ಗೆ 6 ಗಂಟೆಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್‍ಗಳನ್ನು ತೆಗೆದು ವಿಧಾನಸಭಾ ಕ್ಷೇತ್ರವಾರು ಮತಯಂತ್ರಗಳನ್ನು ಹಂಚಿಕೆ ಮಾಡಿ ರವಾನಿಸಲಾಯಿತು.

ಅಪರ ಜಿಲ್ಲಾಧಿಕಾರಿಗಳಾದ ಎಂ.ಎಲ್.ವೈಶಾಲಿ, ತಹಸೀಲ್ದಾರ್ ಶ್ರೀನಿವಾಸಯ್ಯ, ನೋಡಲ್ ಅಧಿಕಾರಿ ಕೃಷ್ಣ ಮೂರ್ತಿ, ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು.

ವಿಧಾನ ಸಭಾವಾರು ಹಂಚಿಕೆಯಾದ ಮತಯಂತ್ರಗಳನ್ನು ಆಯಾಯ ತಾಲ್ಲೂಕುಗಳಲ್ಲಿ ಸ್ಟ್ರಾಂಗ್ ರೂಮ್ (ಭದ್ರತಾ ಕೊಠಡಿ) ತೆರೆದು ಜೋಪಾನವಾಗಿರಿಸಲಾಗುವುದು. ಮಾ.31ರೊಳಗೆ ಚುನಾವಣಾ ವೀಕ್ಷಕರ ಉಪಸ್ಥಿತಿಯಲ್ಲಿ 2ನೇ ಹಂತದ ರ್ಯಾಂಡಮೈಜೇಷನ್ ನಡೆಸಲಾಗುವುದು.

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.