Kannada News - Kannadigas Adda

Welcome To Kannada News - Kannadigas Adda

ಶಾಕಿಂಗ್, ಯುವಕನ ಪಾಕೆಟ್ ನಲ್ಲೆ ಸ್ಪೋಟಗೊಂಡ “oppo” ಮೊಬೈಲ್

Shocking, "oppo" mobile exploded in a young man's pocket

Kannadanews.today - ಕನ್ನಡಿಗಾಸ್ ಅಡ್ಡ

ಶಾಕಿಂಗ್, ಯುವಕನ ಪಾಕೆಟ್ ನಲ್ಲೆ ಸ್ಪೋಟಗೊಂಡ “oppo” ಮೊಬೈಲ್

ಏನೆಲ್ಲಾ ಸುದ್ದಿ ಕೇಳಿದ್ದೀವಿ, ನೋಡಿದ್ದೀವಿ. ಆದರೆ ಈಗ ನಾನು ಹೇಳಲು ಹೊರಟಿರೋದು ನಾವು ನೀವೆಲ್ಲಾ ಬೆಚ್ಚಿ ಬಿಳೋ ಸುದ್ದಿ. ಹೌದು, ಚಾರ್ಜ್ ಗೆ ಹಾಕೋವಾಗ, ಮೊಬೈಲ್ ನಲ್ಲಿ ಗೇಮ್ ಆಡೋವಾಗ ಮೊಬೈಲ್ ಸಿಡಿದಿರೋ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಆದ್ರೆ ಹೈದರಾಬಾದ್ ನಲ್ಲಿ ನಡೆದ ವಿಚಿತ್ರ ಘಟನೆಯಲ್ಲಿ ಯುವಕನ ಜೇಬಿನಲ್ಲೇ ಮೊಬೈಲ್ ಸ್ಪೋಟಗೊಂಡಿದೆ.

ಆತ ಮೊನ್ನೆ ಮೊನ್ನೆಯಷ್ಟೇ ಹೊಚ್ಚ ಹೊಸ ಮೊಬೈಲ್ ಖರೀದಿಸಿದ್ದ , ಅದೇ ಮೊಬೈಲ್ ಇಂದ ಈಗ ಈ ದುರಂತ ನಡೆದಿದೆ. ಹೈದರಾಬಾದ್ ನಲ್ಲಿ ಈ ಘಟನೆ ನಡೆದಿದ್ದು ಸದ್ಯ ಘಟನೆಯಿಂದ (ಎಂ.ಡಿ.ಇಮ್ರಾನ್) ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆದ ಆ ಯುವಕ ಆಸ್ಪತ್ರೆ ಸೇರಿದ್ದಾನೆ.

ವರದಿಯ ಪ್ರಕಾರ, ಇಮ್ರಾನ್ ತನ್ನ ಬೈಕ್ ನಲ್ಲಿ ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ಮೊಬೈಲ್ ಸ್ಪೋಟಗೊಂಡು ಆತ ನಡುರಸ್ತೆಯಲ್ಲಿಯೇ ಬಿದ್ದಿದ್ದಾನೆ..ಪೊಲೀಸ್ ಮೂಲಗಳು ನೀಡಿರೋ ಮಾಹಿತಿಯಂತೆ , ಆತ ಇತ್ತೀಚೆಗೆ ‘ಒಪೊ’ ಬ್ರ್ಯಾಂಡ್ನ ಸ್ಮಾರ್ಟ್ಫೋನ್ ಖರೀದಿಸಿದ್ದಾನೆ ಮತ್ತು ಅದು ಸ್ಫೋಟ ಗೊಂಡು ಆತನ ಎಡ ತೊಡೆ ಸಂಪೂರ್ಣ ಗಾಯಗೊಂಡಿದೆ, ಅಲ್ಲದೆ ಸ್ಪೋಟದ ರಭಸಕ್ಕೆ ಆತ ಬೈಕ್ ನಿಂದ ಕೆಳಗೆ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.ಸಧ್ಯ ಮೊಬೈಲ್ ಸಾಧನದಲ್ಲಿ ದೋಷವಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು ಪರಿಶೀಲನೆಗೆ ಓಪೋ ಸಂಸ್ಥೆಗೆ ತಿಳಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ..

Web Title : ಶಾಕಿಂಗ್, ಯುವಕನ ಪಾಕೆಟ್ ನಲ್ಲೆ ಸ್ಪೋಟಗೊಂಡ “oppo” ಮೊಬೈಲ್ – Shocking, “oppo” mobile exploded in a young man’s pocket

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.