ಜೂನಿಯರ್ ಮಾಡೆಲ್ ವರ್ಲ್ಡ್ ಫೈನಲ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪ್ರಶಸ್ತಿಯ ಗರಿ

Sia Vijai awarded in Junior model world Finals

ಸಿಯಾ ವಿಜಯ್” ( Sia Vijai ) ಜೂನಿಯರ್ ಮಾಡೆಲ್ ವರ್ಲ್ಡ್ ಫೈನಲ್ಸ್‌ನ ಪ್ರಶಸ್ತಿ ವಿಜೇತೆ. ಸಿಯಾ, ಭಾರತದ ಪಾಲಿಗೆ ಮತ್ತೊಂದು ಹೆಮ್ಮೆಯ ಪ್ರಶಸ್ತಿಯ ಗರಿಯನ್ನು ಸೇರಿಸಿದ್ದಾರೆ. ಹೌದು ಮೂಲತಃ ತಮಿಳುನಾಡಿನ 6 ವರ್ಷದ ಪುಟ್ಟ ಚತುರ ಬಾಲಕಿ ಸಿಯಾ ವಿಜಯ್, ಅವರು ಅಕ್ಟೋಬರ್ 14 ರಿಂದ ಅಕ್ಟೋಬರ್ 18 ರವರೆಗೆ ದುಬೈನಲ್ಲಿ ನಡೆದ ಕಲೆ, ಪ್ರತಿಭೆ ಮತ್ತು ಫ್ಯಾಷನ್ ಸ್ಪರ್ಧೆಯ ಮಕ್ಕಳ ಸ್ಪರ್ಧೆಯಲ್ಲಿ ಭಾರತದಿಂದ ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಸ್ಪರ್ದಿಸಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿದ್ದಾರೆ.

ಮೂಲತಃ ತಮಿಳುನಾಡಿನ ದಂಪತಿಗಳಾದ ಶ್ರೇಯ ಸುಮಿ ( Shreyaa Sumi ) ಮತ್ತು ವಿಜಯ್ ( Vijai ) ದಂಪತಿಗಳ ಅಚ್ಚುಮೆಚ್ಚಿನ ಮಗಳೇ ಸಿಯಾ ವಿಜಯ್. ಮಗಳ ಸಾಧನೆ ಸೇರಿದಂತೆ, ಆಕೆಯ ಎಲ್ಲಾ ಬೆನ್ನೆಲುಬಾಗಿ ನಿಂತಿರುವ ಅವರು ಮಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.Brand Ambassador of Junior Model International from India

ಸಿಯಾ ವಿಜಯ್, ಪ್ರಶಸ್ತಿ ಜೊತೆಗೆ ಜೂನಿಯರ್ ಮಾಡೆಲ್ ಇಂಟರ್ನ್ಯಾಷನಲ್ನ ಉಪ-ಶೀರ್ಷಿಕೆ ಬಟರ್ಫ್ಲೈ ಬಿರುದನ್ನೂ ಸಹ ತನ್ನದಾಗಿಸಿಕೊಂಡಿದ್ದಾಳೆ. ಆಕೆ ತನ್ನದೇ ವಯಸ್ಸಿನ 15 ದೇಶಗಳ ಮಕ್ಕಳೊಂದಿಗೆ ಸ್ಪರ್ಧಿಸಿದ್ದಳು. ಇನ್ನು ಸ್ಪರ್ಧೆಯಲ್ಲಿ ಸರಿ ಸುಮಾರು 25 ದೇಶಗಳಿಂದ 4 ರಿಂದ 17 ವರ್ಷದ ವಯಸ್ಸಿನ ಒಟ್ಟಾರೆ 60 ಸ್ಪರ್ಧಿಗಳು ಭಾಗವಹಿಸಿದ್ದರು, ಇನ್ನು ಕಾರ್ಯಕ್ರಮವನ್ನು ಕೇರಳದ “ ಫ್ಯಾಶನ್ ರನ್ವೇ ಇಂಟರ್ನ್ಯಾಷನಲ್ “ ನ ಜೂನಿಯರ್ ಮಾಡೆಲ್ ಇಂಟರ್ನ್ಯಾಷನಲ್ -ಫೌಂಡರ್, ನಿರ್ದೇಶಕ ಮತ್ತು ಸಿಇಒ ಶ್ರೀ ಅರುಣ್ ರತ್ನ ಆಯೋಜಿಸಿದ್ದರು.

ಕೇರಳದ ಕ್ಯಾಲಿಕಟ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜೂನಿಯರ್ ಮಾಡೆಲ್ ವರ್ಲ್ಡ್ ಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ “ಸಿಯಾ ” ಏಪ್ರಿಲ್ 29 ರಂದು ಸ್ಪರ್ಧೆಯಲ್ಲಿ 2 ನೇ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದ ನಂತರ. ವಿಶ್ವ ಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾದಳು.

ತನ್ನ ವಯಸ್ಸಿನ ವಿಭಾಗದಲ್ಲಿ ಸ್ಪರ್ಧಿಸಿದ ಚೆನ್ನೈನ ಏಕೈಕ ಹುಡುಗಿ ಸಿಯಾ. ಸ್ಪರ್ಧೆಯಲ್ಲಿ ಸಂದರ್ಶನ, ಪರಿಚಯ, ಪ್ರತಿಭೆ ಸುತ್ತಿನಲ್ಲಿ ಮತ್ತು ರಾಷ್ಟ್ರೀಯ ವೇಷಭೂಷಣ ಮತ್ತು ವಿವಿಧ ಅನೇಕ ಸುತ್ತಿನಲ್ಲಿ ಎಲ್ಲಾ ಹಂತಗಳಲ್ಲಿ ಸ್ಪರ್ಧಿಸಿದ ಸಿಯಾ, ಭಾರತದ ಶೀರ್ಷಿಕೆ ಬ್ರಾಂಡ್ ರಾಯಭಾರಿಯಾಗಿ ಪ್ರಶಸ್ತಿ ಪಡೆದುಕೊಂಡಿದ್ದಾಳೆ.Junior model international 2019

ರಾಷ್ಟ್ರೀಯ ವೇಷಭೂಷಣ ಸುತ್ತಿನಲ್ಲಿ, ಆಕೆ ನಮ್ಮ ದೇಶದ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ವೈವಿಧ್ಯತೆಯಲ್ಲಿ ಏಕತೆಯಿಂದ ಪ್ರೇರಿತವಾದ ಸಾಂಪ್ರದಾಯಿಕ ಉಡುಪನ್ನು ಧರಿಸಿದ್ದರು. ಅವರ ವೇಷಭೂಷಣವು ವಿಶ್ವಪ್ರಸಿದ್ಧ ವಿಭಿನ್ನ ಭಾರತೀಯ ನೃತ್ಯ ಶೈಲಿಗಳು ಮತ್ತು ಶಾಸ್ತ್ರೀಯ ಸಂಗೀತ ವಾದ್ಯಗಳನ್ನು ಬಿಂಬಿಸಿದವು. ಪರಿಚಯ ಮತ್ತು ಸಂದರ್ಶನ ಸುತ್ತುಗಳಲ್ಲಿ ತನ್ನ ಸಂವಹನ ಕೌಶಲ್ಯದಿಂದ ಆಕೆ ತೀರ್ಪುಗಾರರನ್ನೇ ಬೆರಗುಗೊಳಿಸಿದಳು..

ಟ್ಯಾಲೆಂಟ್ ಸುತ್ತಿನಲ್ಲಿ, ಅರೆ ಶಾಸ್ತ್ರೀಯ, ಜಾನಪದ ಮತ್ತು ಪಾಶ್ಚಾತ್ಯ ನೃತ್ಯಗಳ ಚಾತುರ್ಯತೆಯನ್ನು ಪ್ರದರ್ಶಿಸಿದಳು. ಸದ್ಯ ಸಿಯಾ ಚೆನ್ನೈನಲ್ಲಿ ಪ್ರಸಿದ್ಧ ನೃತ್ಯ ಸಂಯೋಜಕರಿಂದ ತರಬೇತಿ ಪಡೆಯುತ್ತಿದ್ದಾಳೆ. ಅವರು ವಿಶ್ವ ವೇದಿಕೆಯಲ್ಲಿ ರೋಮಾಂಚಕ ಸಂಸ್ಕೃತಿ ಮತ್ತು ಸಂಪ್ರದಾಯ ಮತ್ತು ದೇಶದ ಅಪಾರ ಶ್ರೀಮಂತ ಪರಂಪರೆಯನ್ನು ಮುಂದಿಟ್ಟಿದ್ದರಿಂದ ಅವರು ಭಾರತದ ಪ್ರತಿಯೊಬ್ಬರೂ ಹೆಮ್ಮೆಪಡುವಂತೆ ಮಾಡಿದ್ದಾರೆ.

ಸದ್ಯ ” ಸಿಯಾ ವಿಜಯ್ ”  ತಮಿಳು ಚಲನಚಿತ್ರದಲ್ಲಿ ಮುಖ್ಯ ಬಾಲ ಕಲಾವಿದೆಯಾಗಿ ಪಾದಾರ್ಪಣೆ ಮಾಡಿದ್ದಾರೆ. ಸದ್ಯ ಮೂವಿ ಶೂಟಿಂಗ್ ನಡೆಯುತ್ತಿದೆ. ಶೀಘ್ರದಲ್ಲೇ ಅವರು ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.. ಈ ಮೂಲಕ ಅವಳ ಸಾಧನೆಯನ್ನು ಶ್ಲಾಘಿಸುತ್ತಾ, ಅವರ ಉಜ್ವಲ ಭವಿಷ್ಯ ಮತ್ತು ಕನಸು ನೆರವೇರಲಿ ಎಂದು ಆರೈಸೋಣ………


English Summary

Fashionista Sia Vijai adds another feather to the cap by getting laurels in Junior model world Finals. Sia Vijai , 6 years old Girl  from Tamilnadu got awarded the prestigious title as Brand Ambassador of Junior Model International from India,  It is a children pageant for art, talent and fashion competition held in Dubai from Oct 14th to Oct 18th
she also, won sub-title Butterfly of Junior model international  She competed with children from 15 other countries, in her age group.
She made India proud as she put forth the vibrant culture and tradition and immensely rich heritage of the country on the world stage. She debut in Tamil movie in Kollywood as main lead child artist. soon she will be seen in big screen cinema.
Contact For News and Advertisement : 8971989474 
Scroll Down To More News Today