Kannada News - Kannadigas Adda

Welcome To Kannada News - Kannadigas Adda

ಹಳೆಯ ದ್ವೇಷಕ್ಕೆ ಬಿ.ಜೆ.ಪಿ ಮುಖಂಡನ ಕೊಲೆ, ಪ್ರಕರಣ ಭೇದಿಸಿದ ಪೊಲೀಸರು

Balachandra's Death is Not natural, it was murder

Kannadanews.today - ಕನ್ನಡಿಗಾಸ್ ಅಡ್ಡ

ಮಡಿಕೇರಿ ತಾಲೂಕು ತಾಳತ್ತಮನೆ ಸಮೀಪ ಮಾ.19 ರಂದು ನಡೆದ ಅಪಘಾತದಲ್ಲಿ ಮೃತಪಟ್ಟ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಅವರದ್ದು ಸಹಜ ಸಾವಲ್ಲ. ಹಳೆಯ ದ್ವೇಷದಿಂದ ಕಾರಿಗೆ ಲಾರಿ ಡಿಕ್ಕಿ ಹೊಡೆಸಿ ಕೊಲೆ ಮಾಡಲಾಗಿದೆ ಎಂದು ಕೇವಲ 10 ದಿನಗಳಲ್ಲಿ ಪೊಲೀಸರು ಪ್ರಕರಣ ಬಯಲಿಗೆಳೆದಿದ್ದಾರೆ.

ಈ ಮೂಲಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು ಎನ್ನಲಾದ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಪಾಜೆಯ ನಿವಾಸಿ ಬಾಲಚಂದ್ರ ಕಳಗಿ(42) ಅವರ ಸಾವಿಗೆ ತಿರುವು ಸಿಕ್ಕಿದೆ, ಅದು ಕೊಲೆ ಎಂಬುದು ಸಾಬೀತಾಗಿದೆ. ಲಾರಿಯಿಂದ ಡಿಕ್ಕಿ ಹೊಡೆಸಿ, ಕೊಲೆ ಮಾಡಿ, ಅದನ್ನು ಅಪಘಾತ ಎಂದು ಬಿಂಬಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು, ಸಂಪತ್ ಕುಮಾರ್ (34), ಲಾರಿ ಚಾಲಕ ಜಯನ್(34), ಹರಿ ಪ್ರಸಾದ್ (36) ಎಂಬುವರನ್ನು ಬಂಧಿಸಿದ್ದಾರೆ.

ಬಾಲಚಂದ್ರ ಕಳಗಿ ತಮ್ಮ ಮಾರುತಿ ಓಮ್ನಿ ವ್ಯಾನ್ (ಕೆಎ.12-ಎನ್-4085)ನಲ್ಲಿ ಸಂಪಾಜೆಗೆ ತೆರಳುತ್ತಿದ್ದಾಗ, ಲಾರಿ, ಮಾರುತಿ ವ್ಯಾನ್‍ಗೆ ಡಿಕ್ಕಿಯಾಗಿ ಕಳಗಿ ಮೃತಪಟ್ಟಿದ್ದರು. ಪ್ರಾರಂಭದಲ್ಲಿ ಇದೊಂದು ಅಪಘಾತ ಪ್ರಕರಣ ಎನ್ನಲಾಗಿತ್ತು.

ಆದರೆ ಮೃತರ ಚಿಕ್ಕಪ್ಪ ಜಯರಾಮ್ ಕಳಗಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ವೈನ್, ಮರಳು ಮಾಫಿಯಾ, ರಿಕ್ರಿಯೇಶನ್ ಕ್ಲಬ್ ಮಾಡಲು ಬಿಡದಕ್ಕೆ ಈ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.////

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.