ಬೆಂಗಳೂರಿನಲ್ಲಿ 10 ಮಂದಿ ದಕ್ಷಿಣ ಆಫ್ರಿಕನ್ನರು ನಾಪತ್ತೆ !
ನವೆಂಬರ್ 12ರಿಂದ 22ರ ನಡುವೆ ಬೆಂಗಳೂರಿಗೆ ಬಂದಿದ್ದ 10 ಮಂದಿ ದಕ್ಷಿಣ ಆಫ್ರಿಕಾದವರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗೆ ಕರ್ನಾಟಕ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಬೆಂಗಳೂರು: ಭಾರತದಲ್ಲೇ ಪ್ರಥಮ ಬಾರಿಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಓಮಿಕ್ರಾನ್ ವ್ಯತ್ಯಯ ಪ್ರಕರಣಗಳು ದಾಖಲಾಗಿವೆ. ಇಬ್ಬರಲ್ಲಿ ಒಬ್ಬರಿಗೆ 66 ವರ್ಷ ಮತ್ತು ಇನ್ನೊಬ್ಬರಿಗೆ 46 ವರ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ನವೆಂಬರ್ 12ರಿಂದ 22ರ ನಡುವೆ ಬೆಂಗಳೂರಿಗೆ ಬಂದಿದ್ದ 10 ಮಂದಿ ದಕ್ಷಿಣ ಆಫ್ರಿಕಾದವರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗೆ ಕರ್ನಾಟಕ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೊಬೈಲ್ ನಂಬರ್ ನೀಡಿದ್ದರೂ ಅವು ಕೆಲಸ ಮಾಡುತ್ತಿಲ್ಲ. ಕರೆ ಮಾಡಿ ನೋಡಿದರೆ ಸ್ವಿಚ್ಆಫ್ ಎಂದು ಬರುತ್ತಿದೆ ಎನ್ನಲಾಗಿದೆ. ಇದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತಷ್ಟು ಕಂಗಾಲಾಗಿದ್ದಾರೆ. ಇವರ ಪತ್ತೆಗೆ ಆರೋಗ್ಯಾಧಿಕಾರಿಗಳು ಪೊಲೀಸರ ಸಹಾಯ ಪಡೆಯುತ್ತಿದ್ದಾರೆ. ನವೆಂಬರ್ 22 ರಿಂದ ಅಧಿಕಾರಿಗಳು ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಓಮಿಕ್ರಾನ್ ರೂಪಾಂತರವು ಪ್ರಚಲಿತದಲ್ಲಿರುವ ದೇಶಗಳ ಪ್ರಯಾಣಿಕರ ಮೇಲೆ ಕರೋನಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
Follow Us on : Google News | Facebook | Twitter | YouTube