ಸಂತಸದ ಸುದ್ದಿ: ಕರ್ನಾಟಕದಲ್ಲಿ ಕೇವಲ 2576 ಕೊರೊನಾ ಸೋಂಕಿತರು ಪತ್ತೆ

ಕರ್ನಾಟಕದಲ್ಲಿ ಇಂದು ಕೇವಲ 2576 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ರಾಜ್ಯದ ಜನತೆ ಕೊಂಚ ನಿರಾಳರಾಗಿದ್ದಾರೆ.

( Kannada News Today ) : ಕರ್ನಾಟಕದಲ್ಲಿ ಇಂದು ಕೇವಲ 2576 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ರಾಜ್ಯದ ಜನತೆ ಕೊಂಚ ನಿರಾಳರಾಗಿದ್ದಾರೆ.

ಇಷ್ಟು ದಿನ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ಇಡೀ ದೇಶದ ಜನತೆಯನ್ನೇ ಸೋಂಕು ಆತಂಕಕ್ಕೆ ತಳ್ಳಿತ್ತು, ಇದೀಗ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಕರ್ನಾಟಕದಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ.

ಇಂದು ಆಸ್ಪತ್ರೆಯಿಂದ 8334 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ 773595 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 29 ಮಂದಿ ಕಳೆದ ಒಂದು ದಿನದಲ್ಲಿ ಮೃತಪಟ್ಟಿದ್ದಾರೆ. ಇದುವರೆಗೆ 11221 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 829640 ಕೊರೊನಾ ಸೋಂಕಿತರಿದ್ದಾರೆ. 44805 ಸಕ್ರಿಯ ಪ್ರಕರಣಗಳಿವೆ. 931 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಗಲಕೋಟೆ 04, ಬಳ್ಳಾರಿ 60, ಬೆಳಗಾವಿ 29, ಬೆಂಗಳೂರು ಗ್ರಾಮಾಂತರ 36, ಬೆಂಗಳೂರು ನಗರ 1439, ಬೀದರ್ 04, ಚಾಮರಾಜನಗರ 19, ಚಿಕ್ಕಬಳ್ಳಾಪುರ58, ಚಿಕ್ಕಮಗಳೂರು 46, ಚಿತ್ರದುರ್ಗ 44, ದಕ್ಷಿಣ ಕನ್ನಡ 51, ದಾವಣಗೆರೆ 32, ಧಾರವಾಡ 18, ಗದಗ07 , ಹಾಸನ 87, ಹಾವೇರಿ 06, ಕಲಬುರಗಿ 31, ಕೊಡಗು 03,, ಕೋಲಾರ 16, ಕೊಪ್ಪಳ 28, ಮಂಡ್ಯ 92, ಮೈಸೂರು 100, ರಾಯಚೂರು 34, ರಾಮನಗರ 20, ಶಿವಮೊಗ್ಗ 44, ತುಮಕೂರು 123, ಉಡುಪಿ 31, ಉತ್ತರ ಕನ್ನಡ 44, ವಿಜಯಪುರ 46, ಯಾದಗಿರಿಯಲ್ಲಿ 24 ಪ್ರಕರಣಗಳು ಪತ್ತೆಯಾಗಿವೆ.