ಕಾಲುವೆಯಲ್ಲಿ ಏಳು ಭ್ರೂಣಗಳು !
ಅಕ್ರಮ ಗರ್ಭಪಾತ ಕಾನೂನು ರೀತ್ಯಾ ಅಪರಾಧ. ಇದು ಗೊತ್ತಿದ್ದರೂ ಕೆಲ ವೈದ್ಯರು ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ.
ಬೆಳಗಾವಿ (Belagavi): ಅಕ್ರಮ ಗರ್ಭಪಾತ ಕಾನೂನು ರೀತ್ಯಾ ಅಪರಾಧ. ಇದು ಗೊತ್ತಿದ್ದರೂ ಕೆಲ ವೈದ್ಯರು ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮೂಡಲಗಿ ಪಟ್ಟಣದ ಸೇತುವೆ ಕೆಳಗಿರುವ ಹಳ್ಳದಲ್ಲಿ ಏಳು ಭ್ರೂಣಗಳು ಪತ್ತೆಯಾಗಿವೆ.
ಐದು ಬಾಟಲಿಗಳಲ್ಲಿ ಭ್ರೂಣಗಳನ್ನು ಎಸೆದಿರುವುದನ್ನು ಸ್ಥಳೀಯರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗರ್ಭಪಾತದ ಬಗ್ಗೆ ಜಿಲ್ಲಾ ವೈದ್ಯಕೀಯ ಇಲಾಖೆ ತನಿಖೆಗೆ ಆದೇಶಿಸಿದೆ.
ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಕೋಣಿ ಅವರು ಲಿಂಗ ನಿರ್ಣಯದ ನಂತರ ಗರ್ಭಪಾತ ಮಾಡಿರಬಹುದು ಎಂದು ಶಂಕಿಸಿದ್ದಾರೆ. ಭ್ರೂಣಗಳು ಐದರಿಂದ 7 ತಿಂಗಳ ವಯಸ್ಸಿನವು ಎಂದು ಹೇಳಲಾಗುತ್ತದೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಶುಕ್ರವಾರ ಏಳು ಭ್ರೂಣಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಶನಿವಾರ ಮಾಹಿತಿ ಪಡೆದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಅವರಿಗೆ ಕರೆ ಮಾಡಿದ ಸಚಿವರು, ಈ ಘಟನೆಗೆ ಕಾರಣವೇನು? ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಪಡೆದರು. ಇದು ಗಂಭೀರವಾದ ಪ್ರಕರಣ. ಯಾರೇ ತಪ್ಪಿತಸ್ಥರಿದ್ದರೂ, ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಯಾರ ಒತ್ತಡಕ್ಕೂ ಮಣಿಯಬಾರದು ಎಂದು ಸೂಚಿಸಿದರು.
7 Fetus Found In Drainage In Karnataka Belagavi
Follow us On
Google News |