ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರುಣ, ಆಟವಾಡುತ್ತಿದ್ದ 7 ವರ್ಷದ ಬಾಲಕ ಬಾವಿಗೆ ಬಿದ್ದು ಸಾವು

ನಾಯಿಯೊಂದಿಗೆ ಆಟವಾಡುತ್ತಿದ್ದ 7 ವರ್ಷದ ಬಾಲಕ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಧಾರುಣ ಘಟನೆ ನಡೆದಿದೆ

ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada) ಧಾರುಣ ಘಟನೆ ನಡೆದಿದೆ, ನಾಗಭೂಷಣ ಎಂಬ 7 ವರ್ಷದ ಬಾಲಕ ತನ್ನ ಮನೆಯ ಸಮೀಪದ ಜಮೀನಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಪಕ್ಕದ ಬಾವಿಗೆ ಬಿದ್ದಿದ್ದಾನೆ (falling into a well). ಆಗ ಬಾಲಕ ಎಷ್ಟೇ ಕಿರುಚಿದರೂ ಆ ಪ್ರದೇಶದಲ್ಲಿ ಯಾರೂ ಇಲ್ಲದ ಕಾರಣ ಬಾಲಕನ ಕಿರುಚಾಟ ಯಾರಿಗೂ ಕೇಳಿಸಲಿಲ್ಲ. ಸ್ವಲ್ಪದರಲ್ಲೇ ಬಾಲಕ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಇದೇ ವೇಳೆ ಆಟವಾಡಲು ತೆರಳಿದ್ದ ಬಾಲಕ ಬಹಳ ಹೊತ್ತಾದರೂ ಮನೆಗೆ ಬಾರದೆ ಇದ್ದುದರಿಂದ ಗಾಬರಿಗೊಂಡ ಪೋಷಕರು ಅಕ್ಕಪಕ್ಕದಲ್ಲಿ ಹುಡುಕಾಡಿದ್ದಾರೆ. ಆದರೆ ಬಾಲಕ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಆಗಲೇ ಬಾಲಕ ಬಾವಿಗೆ ಬಿದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಪೊಲೀಸರು (Police) ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮತ್ತು ಬಾವಿಗೆ ಇಳಿದು ಸಹ ಹುಡುಕಿದರು. ನಂತರ ಬಾಲಕನನ್ನು ಬಾವಿಯಿಂದ ಶವವಾಗಿ ಹೊರತೆಗೆಯಲಾಯಿತು. ನಂತರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರುಣ, ಆಟವಾಡುತ್ತಿದ್ದ 7 ವರ್ಷದ ಬಾಲಕ ಬಾವಿಗೆ ಬಿದ್ದು ಸಾವು - Kannada News

A 7-year-old boy died after falling into a well while playing with a dog

Follow us On

FaceBook Google News

Advertisement

ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರುಣ, ಆಟವಾಡುತ್ತಿದ್ದ 7 ವರ್ಷದ ಬಾಲಕ ಬಾವಿಗೆ ಬಿದ್ದು ಸಾವು - Kannada News

A 7-year-old boy died after falling into a well while playing with a dog - Kannada News Today

Read More News Today