ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ, ಸ್ಥಳೀಯರಿಗೆ ಎಚ್ಚರಿಕೆ
ಮಹಾರಾಷ್ಟ್ರ ಘಟ್ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ
ಚಿಕ್ಕೋಡಿ : ಮಹಾರಾಷ್ಟ್ರ ಘಟ್ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಕೃಷ್ಣಾ ನದಿ ಅಪಾಯ ಮಟ್ಟ ಮೀರಿ ಹರಿಯುವತ್ತಿರುವ ಹಿನ್ನೆಲೆ ಕುಡಚಿ- ಉಗಾರ್ ಬ್ರಿಜ್ಡ್ ಮುಳುಗಡೆ ಹಂತಕ್ಕೆ ತಲುಪಿದೆ
ಬ್ರಿಡ್ಜ್ ಮುಳುಗಡೆಗೆ ಇನ್ನು 2 ಅಡಿ ಮಾತ್ರ ಬಾಕಿ ಇದ್ದು ಕೃಷ್ಣಾ ನದಿ ಅಕ್ಕ ಪಕ್ಕದ ಜನೆತೆಗೆ ಜಾಗೃತಿ ವಹಿಸುವಂತೆ ಸ್ಥಳೀಯ ತಾಲೂಕಾಡಳಿತ ಎಚ್ಚರಿಕೆ ನೀಡಿದೆ, ಕೊಯ್ನ್ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನೆಲೆ ಕೃಷ್ಣಾ ನದಿ ಒಳ ಹರಿವಿನ ಪ್ರಮಾಣ ವೇಗದಲ್ಲಿದೆ.
ಆದ್ದರಿಂದ ಸಮೀಪದ ಜನರು ಜಾಗ್ರತೆ ವಹಿಸಲು ಅಧಿಕಾರಿಗಳು ಸೂಚಿಸಿದ್ದಾರೆ, ಇನ್ನು ರಾಜ್ಯದ ಹಲವೆಡೆ ಮಳೆಯ ಆರ್ಭಟ ಮುಂದುವರೆದಿದ್ದು ಹಲವಾರು ಪ್ರದೇಶಗಳು ಮುಳುಗಡೆಯಾಗಿವೆ. ಅಂತೆಯೇ ಕೆಲವೆಡೆ ವರುಣರಾಯ ನಿಲುಗಡೆಯಿಂದ ಪರಿಸ್ಥಿತಿ ಯಥಾಸ್ಥಿತಿಗೆ ಮರುಳಿದೆ.
A huge amount of water was released into the Krishna river
ವರದಿ – ಬಸವರಾಜ್ ಎಸ್ ಖೇಮಲಾಪುರ, ಬೆಳಗಾವಿ.
Follow us On
Google News |
Advertisement