ಅಂಗನವಾಡಿ ಸಹಾಯಕಿಯ ಕೈಚಳಕ, ಹಾಲುಗಲ್ಲದ ಮಕ್ಕಳಿಗಿಲ್ಲ ಬೇಳೆ-ಬೆಲ್ಲ

Anganwadi does not provide nutritious food to children

ಗದಗ : ಲಾಕ್‌ಡೌನ್ ಕಾರಣಕ್ಕೆ ಅಂಗನವಾಡಿ ಮುಚ್ಚಿ ಅಕ್ಕ ಅಂದರೆ ಅವರು ಮಕ್ಕಳಿಗೆ ಕೊಡಬೇಕಾದ ಪೌಷ್ಟಿಕ ಆಹಾರಕ್ಕೂ ಕತ್ತರಿ ಹಾಕಿಬಿಟ್ಟಿದ್ದಾರೆ. ನಗರದ ದಾಸರಗಲ್ಲಿಯ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕೊಡಬೇಕಾದ ಆಹಾರ ಸಾಮಗ್ರಿಗಳನ್ನು ಕಳೆದ ಎರಡು ತಿಂಗಳಿಂದ ಅಂಗನವಾಡಿ ಸಹಾಯಕಿ ವಿತರಣೆ ಮಾಡಿಲ್ಲ.

ಹೀಗಾಗಿ ಅಂಗನವಾಡಿ ಸಹಾಯಕಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ವಿತರಣೆ ಮಾಡಬೇಕಿದ್ದ ಹಾಲಿನ ಪುಡಿ, ಬೆಲ್ಲ, ಬೇಳೆ, ಅಕ್ಕಿ ಇನ್ನಿತರ ಪೌಷ್ಟಿಕ ಆಹಾರ ಸಾಮಗ್ರಿಗಳು ಅಂಗನವಾಡಿ ಕೇಂದ್ರದಲ್ಲಿ ಕೊಳೆಯುತ್ತಿವೆ. ಜೊತೆಗೆ ಗರ್ಭಿಣಿಯರು, ಚಿಕ್ಕ ಮಕ್ಕಳಿಗೆ ವಿತರಣೆ ಮಾಡಬೇಕಿದ್ದ ಪೌಷ್ಟಿಕ ಆಹಾರ ಸಾಮಗ್ರಿ ಹಾಳಾಗಿ ಹೋಗುತ್ತಿವೆ.

ಈ ರೀತಿ ವಿತರಣೆ ಮಾಡದೇ ಬೇರೆಯವರಿಗೆ ಕಳ್ಳ ಮಾರ್ಗದಲ್ಲಿ ಆಹಾರ ಸಾಮಗ್ರಿಗಳನ್ನು ಮಾರಾಟ ಮಾಡಿಕೊಂಡು ತಮ್ಮ ಜೇಬು ತುಂಬಿಸಿಕೊಳ್ಳುತ್ತಾರೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ.

ಅಂಗನವಾಡಿ ಸಹಾಯಕಿಯ ಕೈಚಳಕ, ಹಾಲುಗಲ್ಲದ ಮಕ್ಕಳಿಗಿಲ್ಲ ಬೇಳೆ-ಬೆಲ್ಲ - Kannada News

Follow us On

FaceBook Google News