ಸದಸ್ಯರಿಗೆ ಸುವರ್ಣಸೌಧಕ್ಕೆ ಪ್ರವೇಶ ನಿರಾಕರಣೆ : ಹಕ್ಕುಚ್ಯುತಿ ಬಾಧ್ಯತಾ ಸಮಿತಿಗೆ ರವಾನೆ

ವಿಧಾನಮಂಡಲದ ಸದಸ್ಯರು ಟ್ರ್ಯಾಕ್ಟರ್ ಮೂಲಕ ಸುವರ್ಣಸೌಧಕ್ಕೆ ಪ್ರವೇಶಿಸಲು ಗುರುವಾರ ಯತ್ನಿಸಿದ ಸಂದರ್ಭದಲ್ಲಿ ಪ್ರವೇಶದ್ವಾರದ ಬಳಿ ಪೊಲೀಸ್ ಅಧಿಕಾರಿಗಳು ನಿರಾಕರಿಸುವುದಕ್ಕೆ ಸಂಬಂಧಿಸಿದಂತೆ...

Online News Today Team

ಬೆಳಗಾವಿ ಸುವರ್ಣಸೌಧ, ಡಿ.17 : ವಿಧಾನಮಂಡಲದ ಸದಸ್ಯರು ಟ್ರ್ಯಾಕ್ಟರ್ ಮೂಲಕ ಸುವರ್ಣಸೌಧಕ್ಕೆ ಪ್ರವೇಶಿಸಲು ಗುರುವಾರ ಯತ್ನಿಸಿದ ಸಂದರ್ಭದಲ್ಲಿ ಪ್ರವೇಶದ್ವಾರದ ಬಳಿ ಪೊಲೀಸ್ ಅಧಿಕಾರಿಗಳು ನಿರಾಕರಿಸುವುದಕ್ಕೆ ಸಂಬಂಧಿಸಿದಂತೆ ಸದಸ್ಯರ ಒತ್ತಾಯದ ಹಿನ್ನೆಲೆಯಲ್ಲಿ ವಿಧಾನಪರಿಷತ್‍ನಲ್ಲಿ ಶುಕ್ರವಾರ ಹಕ್ಕುಚ್ಯುತಿ ಬಾಧ್ಯತಾ ಸಮಿತಿಗೆ ವಹಿಸಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಆದೇಶಿಸಿದರು.

ಈ ಅಧಿವೇಶನ ಮುಗಿದ ಮೊದಲ ಸಮಿತಿ ಸಭೆಯಲ್ಲಿಯೇ ಇದನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಈ ವಿಷಯ ಪ್ರಸ್ತಾಪಿಸಿದ ವಿರೋಧಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ಟ್ರ್ಯಾಕ್ಟರ್ ಮೂಲಕ ಶಾಸಕರು ಒಳಗಡೆ ಬರುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಗೇಟ್ ಲಾಕ್ ಮಾಡಿ ಮೂರು ಗಂಟೆ ಹೊರಗಡೆಯೇ ನಿಲ್ಲಿಸಿದ್ದರು;ಸದನಕ್ಕೆ ಹೋಗುತ್ತೇವೆ ಬಿಡಿ ಎಂದರೂ ಬಿಡಲಿಲ್ಲ; ಈ ಮೂಲಕ ನಮ್ಮ ಹಕ್ಕುಗಳಿಗೆ ಮತ್ತು ಸಭಾಪತಿಗಳು ಹೇಳಿದರೂ ಕೇಳದೇ ಅಗೌರವಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ವಿರೋಧಪಕ್ಷದ ಶಾಸಕರು ಒತ್ತಾಯಿಸಿದರು.

Follow Us on : Google News | Facebook | Twitter | YouTube