Welcome To Kannada News Today

ಬೆಂಗಳೂರಿನಲ್ಲಿ ಹೆಚ್ಚಾದ ಕೊರೊನಾ ಸೋಂಕಿತರ ಸಂಖ್ಯೆ

ಬೆಂಗಳೂರಿನಲ್ಲಿ ಹೆಚ್ಚಾದ ಕೊರೊನಾ ಸೋಂಕಿತರ ಸಂಖ್ಯೆ, ಒಂದೇ ಮನೆಯಲ್ಲಿ ಮೂವರು ಸೋಂಕಿತರು ಪತ್ತೆಯಾದರೆ ಮನೆ ಸೀಲ್ ಡೌನ್; ಬಿಬಿಎಂಪಿ ನಿರ್ಧಾರ

🌐 Kannada News :

ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಒಂದು ವೇಳೆ ಒಂದೇ ಮನೆಯಲ್ಲಿ ಮೂವರು ಸೋಂಕಿತರು ಪತ್ತೆಯಾದರೆ ಮನೆಯನ್ನು ಸೀಲ್ ಡೌನ್ ಮಾಡುವುದಾಗಿ ಬಿಬಿಎಂಪಿ ಹೊಸ ನಿರ್ಧಾರ ಕೈಗೊಂಡಿದೆ.

ಹೌದು, ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಈ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್, ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ, ಹೀಗಾಗಿ ಸೀಲ್ ಡೌನ್ ಅಸ್ತ್ರ ಪ್ರಯೋಗ ಮಾಡಲಾಗುವುದು ಎಂದಿದ್ದಾರೆ.

ಮೂವರು ಸೋಂಕಿತರು ಒಂದೇ ಮನೆಯಲ್ಲಿ ಪತ್ತೆಯಾದರೆ ಅಂತಹ ಮನೆಗಳನ್ನು ಸೀಲ್ ಡೌನ್ ಮಾಡುತ್ತೇವೆ ಎಂಬುದಾಗಿ ತಿಳಿಸಿದ್ದಾರೆ.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.