ಸಿದ್ದರಾಮಯ್ಯ ಜ್ಯೋತಿಷಿಯೇ?: ಭೈರತಿ ಬಸವರಾಜ್‌

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಮಾನದಂಡವಿಟ್ಟುಕೊಂಡು ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಸಿದ್ದರಾಮಯ್ಯ ಜ್ಯೋತಿಷಿಯೇ ಎಂದು ವ್ಯಂಗ್ಯ ಮಾಡಿದರು.

ಸಂಪುಟ ಪುನರ್ ರಚನೆ ಕುರಿತು ಪ್ರಸ್ತಾಪಿಸಿದ ಅವರು ಮುಂದಿನ ಸಂಪುಟ ಪುನರ್ ರಚನೆ ವೇಳೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದರು.

ಸಿದ್ದರಾಮಯ್ಯ ಜ್ಯೋತಿಷಿಯೇ?: ಭೈರತಿ ಬಸವರಾಜ್‌

(Kannada News) : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಮಾನದಂಡವಿಟ್ಟುಕೊಂಡು ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಸಿದ್ದರಾಮಯ್ಯ ಜ್ಯೋತಿಷಿಯೇ ಎಂದು ವ್ಯಂಗ್ಯ ಮಾಡಿದರು.Kannada News Today News Live Alerts - News Now On Google

ತಿಂಥಣಿ ಬ್ರಿಡ್ಜ್ ನಲ್ಲಿ ಹಾಲುಮತ ಉತ್ಸವದಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗದಲ್ಲಿ ಜಿಲ್ಲೆಯ ಕುಷ್ಟಗಿ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಬದಲಾವಣೆಯ ಮಾತೇ ಇಲ್ಲ, ಮುಂದಿನ 2ವರ್ಷ 4ತಿಂಗಳು ಕಾಲ ಬಿಎಸ್ ವೈ ಅವರೇ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಾರೆ, ಮಾಧ್ಯಮದವರು ಅವರನ್ನೇ ವಿವರವಾಗಿ ಕೇಳಬೇಕಿದೆ ಎಂದರು.

ಸಂಪುಟ ಪುನರ್ ರಚನೆ ಕುರಿತು ಪ್ರಸ್ತಾಪಿಸಿದ ಅವರು ಮುಂದಿನ ಸಂಪುಟ ಪುನರ್ ರಚನೆ ವೇಳೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದರು.

ಸಿದ್ದರಾಮಯ್ಯ
ಸಿದ್ದರಾಮಯ್ಯ

ನಮ್ಮ ಜತೆಗೆ ಬಂದಿರುವ ಎಲ್ಲರಿಗೂ ಸಚಿವ ಸ್ಥಾನಕ್ಕೆ ಪರಿಗಣಿಸುವ ವಿಶ್ವಾಸವಿದೆ ಈ ಬಗ್ಗೆ ನಾವು ಕೂಡ ಮನವಿ ಮಾಡಿದ್ದು ಇದಕ್ಕೆ ಸಿಎಂ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ನಗರಾಭಿವೃದ್ಧಿಯಲ್ಲಿ ಅಮೂಲಾಗ್ರವಾಗಿ ಬದಲಾವಣೆ ತರಲು ಬದ್ಧನಾಗಿರುವೆ ಎಂದ ಅವರು, ಪ್ರತಿ ಜಿಲ್ಲೆಗೂ ಪ್ರವಾಸ ಮಾಡಿದ್ದೇನೆ.

ಯಾವುದೇ ಕಾರಣಕ್ಕೂ ನಗರಾಭಿವೃದ್ಧಿ ಖಾತೆ ಬದಲಿಸುವುದಿಲ್ಲ. ನಗರಾಭಿವೃದ್ಧಿ ಇಲಾಖೆಯ ಸಾಧಕಬಾಧಕಗಳ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಜ್ಯೋತಿಷಿಯೇ?: ಭೈರತಿ ಬಸವರಾಜ್‌
ಸಿದ್ದರಾಮಯ್ಯ ಜ್ಯೋತಿಷಿಯೇ?: ಭೈರತಿ ಬಸವರಾಜ್‌

ಕುರುಬರ ಸಮಾಜಕ್ಕೆ ಎಸ್ಟಿ ಮೀಸಲಾತಿಯ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವುದು ಸಿಎಂ ಹಾಗೂ ಹಿರಿಯ ನಾಯಕರ ವಿವೇಚನೆಗೆ ಬಿಟ್ಟಿದೆ ಎಂದರು.

ಈ ವೇಳೆ ಮಾಜಿ ಶಾಸಕ ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಕೆ. ಶರಣಪ್ಪ, ಬಿಜೆಪಿ ಅಧ್ಯಕ್ಷ ಬಸವರಾಜ್ ಹಳ್ಳೂರು ಇದ್ದರು.

Web Title : byrathi basavaraj statement about siddaramaiah
ಸಿದ್ದರಾಮಯ್ಯ ಜ್ಯೋತಿಷಿಯೇ?: ಭೈರತಿ ಬಸವರಾಜ್‌

Scroll Down To More News Today