ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಪೀಠದ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಚಾಲನೆ: ಸಚಿವ ಉಮೇಶ ಕತ್ತಿ

ಕೆನರಾ ಬ್ಯಾಂಕ್ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪೀಠವನ್ನು ಈಗಾಗಲೇ ಮಂಜೂರು ಮಾಡಲಾಗಿದೆ. ಕಟ್ಟಡವನ್ನು ಸದ್ಯದಲ್ಲೇ ನಿರ್ಮಾಣ ಮಾಡಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ ಕತ್ತಿ ಅವರು ತಿಳಿಸಿದರು.

🌐 Kannada News :

(Kannada News) : ಬೆಳಗಾವಿ : ಕೆನರಾ ಬ್ಯಾಂಕ್ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪೀಠವನ್ನು ಈಗಾಗಲೇ ಮಂಜೂರು ಮಾಡಲಾಗಿದೆ. ಕಟ್ಟಡವನ್ನು ಸದ್ಯದಲ್ಲೇ ನಿರ್ಮಾಣ ಮಾಡಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ ಕತ್ತಿ ಅವರು ತಿಳಿಸಿದರು.

ಗ್ರಾಹಕರ ವ್ಯಾಜ್ಯಗಳ ನ್ಯಾಯಾಲಯಕ್ಕೆ ಭೇಟಿ ನೀಡಿದ ಬಳಿಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಪೀಠದ ಕಟ್ಟಡ ನಿರ್ಮಾಣದ ಕುರಿತು ಜಿಲ್ಲಾ ವಕೀಲರ ಸಂಘದ ಸಭಾ ಭವನದಲ್ಲಿ ಶನಿವಾರ (ಫೆ.೬) ಅವರು ಮಾತನಾಡಿದರು.

ಕಟ್ಟಡವನ್ನು ನ್ಯಾಯಾಲಯ ಆವರಣದೊಳಗೆ ಆಯ್ಕೆ ಮಾಡಲಾಗುವುದು, ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಸದ್ಯದಲ್ಲೇ ಕಟ್ಟಡದ ಕಾಮಗಾರಿ ಚಾಲನೆ ಕೊಡಲಾಗುವುದು ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಪೀಠವನ್ನು ಸ್ಥಾಪಿಸುವ ಸಲುವಾಗಿ ನಿರ್ಧಾರ ಕೈಗೊಂಡಿದ್ದು, ಉತ್ತರ ಕರ್ನಾಟಕದ ಕಕ್ಷಿದಾರರ ಅನುಕೂಲಕ್ಕೆ ನ್ಯಾಯ ಒದಗಿಸಿದಂತಾಗಿದೆ.

ಆದರೆ ಹಲವಾರು ಬಾರಿ ಬೆಳಗಾವಿ ವಕೀಲರ ಸಂಘದಿಂದ ವಿನಂತಿಸಿದರು ಸಹಿತ ನ್ಯಾಯಾಲಯದ ಕಟ್ಟಡ ಸ್ಥಳ ನಿಗದಿ ಮತ್ತು ಪೀಠೋಪಕರಣಗಳ ವ್ಯವಸ್ಥೆ ಆಗಿರುವುದಿಲ್ಲ.

ಉತ್ತರ ಕರ್ನಾಟಕದ ಕಕ್ಷಿದಾರರ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲಾ ಗ್ರಾಹಕ ಆಯೋಗದ ಕಟ್ಟಡವನ್ನು ಆಯ್ಕೆಮಾಡಿ ತಕ್ಷಣದಲ್ಲಿ ಪ್ರಾರಂಭ ಮಾಡಬೇಕು ಮತ್ತು ಶಾಶ್ವತ ನ್ಯಾಯಾಲಯದ ಕಟ್ಟಡಕ್ಕೆ ತಗಲುವ ಅನುದಾನವನ್ನು ಮಂಜೂರು ಮಾಡಬೇಕೆಂದು ಜಿಲ್ಲಾ ವಕೀಲರು ವಿನಂತಿಸಿದರು.

ವಕೀಲರು ಯಾವುದೇ ಪ್ರತಿಭಟನೆ ನಡೆಸದೆ ಸಹಕಾರ ನೀಡಬೇಕು. ಹಳೆಯ ಕಟ್ಟಡಗಳನ್ನು ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡುವುದಾಗಿ ಸಚಿವರಾದ ಉಮೇಶ ಕತ್ತಿ ಭರವಸೆ ನೀಡಿದರು.

ಯಾವುದೇ ಸಮಸ್ಯೆ ಆಗದಂತೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಪೀಠದ ಕಚೇರಿ ತಾತ್ಕಾಲಿಕವಾಗಿ ಚಾಲನೆ ನೀಡಲಾಗುವುದು ಮತ್ತು ನಂತರ ಕಟ್ಟಡ ನಿರ್ಮಾಣ ಮಾಡುವುದಾಗಿ ಶಾಸಕರಾದ ಅನಿಲ ಬೆನಕೆ ವಕೀಲರಿಗೆ ತಿಳಿಸಿದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರ‍್ಸಿ ಪಾಟೀಲ, ವಕೀಲರಾದ ಶಿವಪುತ್ರ ಪಟಕಳ, ಪ್ರವೀಣ ಕೊಪ್ಪದ ಹಾಗೂ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

:

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.