ಕರ್ನಾಟಕದಲ್ಲಿ ಕೊರೊನಾ 4ನೇ ಅಲೆ ಆತಂಕ, ಮಾಸ್ಕ್ ಕಡ್ಡಾಯ !
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದೆ. ಕೊರೊನಾ 4 ನೇ ಅಲೆಯ ಆತಂಕ ಶುರುವಾಗಿದೆ
ಬೆಂಗಳೂರು (Bengaluru): ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ (Corona Cases) ಮತ್ತೆ ಏರಿಕೆಯಾಗುತ್ತಿದೆ. ಕೊರೊನಾ 4 ನೇ ಅಲೆಯ (4th Wave) ಆತಂಕ ಶುರುವಾಗಿದೆ, ಕೊರೊನಾವೈರಸ್ ಸೋಂಕುಗಳ (Covid Cases) ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ತಜ್ಞರೊಂದಿಗೆ ಸಭೆ ನಡೆಸುತ್ತಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಮಾಸ್ಕ್ ಕಡ್ಡಾಯ ಗೊಳಿಸುವ ಬಗ್ಗೆ ತಾಂತ್ರಿಕ ಸಲಹಾ ಮಂಡಳಿಯ ಸಭೆಯಲ್ಲಿ ಕೆಲವು ತಜ್ಞರು ಸಲಹೆ ನೀಡಿದ್ದಾರೆ.
ಜನರಿಗೆ ಮಾಸ್ಕ್ ಅನ್ನು ಕಡ್ಡಾಯ ಮತ್ತು ಕರೋನಾ ಮಾರ್ಗಸೂಚಿಯನ್ನು ಮರು ಜಾರಿಗೊಳಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಇನ್ನು ಜೀನೋಮಿಕ್ ಸೀಕ್ವೆನ್ಸ್, ಟೆಸ್ಟಿಂಗ್ ಹೆಚ್ಚಿಸಬೇಕು. ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಲಹೆ ಕೊಟ್ಟಿದ್ದಾರೆ.
ಕಳೆದ ವಾರದಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಸಾವಿರ ಗಡಿ ದಾಟಿದೆ. ಹೊಸ ಕೋವಿಡ್ ತಳಿ ಕಾಣಿಸಿಕೊಂಡರೆ ಆತಂಕ ಪಡುವ ಅಗತ್ಯವಿಲ್ಲ, ಮುಂದಿನ 2-3 ವಾರಗಳು ನಿರ್ಣಾಯಕ ಮತ್ತು ಕೋವಿಡ್ ನಿಯಮಗಳ ಕಡ್ಡಾಯ ಅನುಸರಣೆ ಮಾಡಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.
Follow Us on : Google News | Facebook | Twitter | YouTube