ಶಿವಮೊಗ್ಗದಲ್ಲಿ ಯಮನೇ ಬರಬೇಕಾಯಿತು ಜಾಗೃತಿ ಮೂಡಿಸಲು… !

CORONA AWARENESS BY DRAMA IN SHIMOGA

ಶಿವಮೊಗ್ಗ : ಕೊರೋನ ವೈರಸ್ ಕುರಿತು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಎಷ್ಟು ಮನವಿ ಮಾಡಿಕೊಂಡರೂ ಮನೆಯಿಂದ ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಇಡಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಕೊರೋನ ವೈರಸ್ ಬಂದರೆ ಯಮ ಮತ್ತು ಕಿಂಕರರು ಮುಲಾಜಿಲ್ಲದೆ ಯಮಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ ಎಂಬ ಸಂದೇಶವುಳ್ಳ ಕಿರು ನಾಟಕದ ಪ್ರದರ್ಶನವನ್ನ ಏರ್ಪಡಿಸಲಾಗಿತ್ತು.

ಸಮನ್ವಯ ಸಂಸ್ಥೆ, ಕಲಾಂತರಂಗದ ಸಹಾಯದಿಂದ ಈ ನಾಟಕವನ್ನ ಬಸ್ ನಿಲ್ದಾಣದ ಮುಂದೆ ಪ್ರದರ್ಶಿಸಲಾಯಿತು. ಯಮ ಹಾಗು ಕಿಂಕರರು ಬಂದು ದ್ವಿಚಕ್ರ ವಾಹನ ಸವಾರರೀರ್ವರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲವೆಂದು ಪಾಶ ಹಾಕಿಕೊಂಡು ಯಮಲೋಕಕ್ಕೆ ಕರೆದುಕೊಂಡು ದೃಶ್ಯವನ್ನ ಪ್ರದರ್ಶಿಸಲಾಯಿತು. ಕೊರೋನ ಜಾಗೃತಿ ಮೂಡಿಸಲು ದ್ವಿಚಕ್ರ ವಾಹನ ಸವಾರರಿಗೆ ಸಾಲಿನಲ್ಲಿ ನಿಲ್ಲಿಸಿ ಈ ಜಾಗೃತಿ ನಾಟಕದ ಪ್ರದರ್ಶನ ಮಾಡಲಾಯಿತು.

ಯಮನ ಪಾತ್ರದಲ್ಲಿ ಸುಮುಖ, ಕಿಂಕರನ ಪಾತ್ರದಲ್ಲಿ ಶ್ರೀವತ್ಸ ಹಾಗು ಮಂಜುನಾಥ್ ಕಾಣಿಸಿಕೊಂಡಿದ್ದರು. ಇವರೆಲ್ಲರು ಕಲಾಂತರಂಗದ ಕಲಾವಿದರು ಆಗಿದ್ದಾರೆ. ಈ ಕುರಿತು ಮಾತನಾಡಿದ ಸಮನ್ವಯ ಕಾಶಿ ಇಂತಹ ಲಾಕ್ ಡೌನ್ ಶಿವಮೊಗ್ಗಕ್ಕೆ ಹೊಸದೇನು ಅಲ್ಲ. ನಮ್ಮ ಅಜ್ಜಿಯವರು  ಈ ಹಿಂದೆ ಪ್ಲೇಗ್ ಬಂದಾಗ ಲಾಕ್ ಡೌನ್ ಆಗಿತ್ತು. ರಸ್ತೆಯ ಮೇಲೆ ಓಡಾಡಲು ಬಿಡುತ್ತಿರಲಿಲ್ಲ ಎಂದು ನೆನಪಿಸಿಕೊಳ್ಳುತ್ತಿರುತ್ತಾರೆ.

ಶಿವಮೊಗ್ಗದಲ್ಲಿ ಯಮನೇ ಬರಬೇಕಾಯಿತು ಜಾಗೃತಿ ಮೂಡಿಸಲು... ! - Kannada News

ಕೊರೋನ ವೈರಸ್ ನ್ನ ಸಾಮಾಜಿಕ ಅಂತರ ಹಾಗು ಇತರೆ ನಿಯಮಗಳನ್ನ ಪಾಲಿಸುವ ಮೂಲಕ ತಡೆಗಟ್ಟಬಹುದಾಗಿದೆ. ಸಾರ್ವಜನಿಕರ ಜಾಗೃತಿ ಮತ್ತು ತಾಳ್ಮೆ ಇದಕ್ಕೆ ಬಹಳ ಮುಖ್ಯ. ಈ ಜಾಗೃತಿ ಮೂಡಿಸುವ ಸಲುವಾಗಿ ಯಮ ಕಿಂಕರರ ಕಿರುನಾಟಕ ಪ್ರದರ್ಶಿಸಲಾಯಿತು.

Follow us On

FaceBook Google News

Read More News Today