ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭೂಕಂಪ
ಕರ್ನಾಟಕದ ಹಲವೆಡೆ ಮಂಗಳವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ.
ಬೆಂಗಳೂರು (Benglaluru): ಕರ್ನಾಟಕದ ಹಲವೆಡೆ ಮಂಗಳವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೆಳಗ್ಗೆ 7.45ರ ಸುಮಾರಿಗೆ ಭೂಮಿ ಕಂಪಿಸಿದೆ. ಮೂರರಿಂದ ಏಳು ಸೆಕೆಂಡುಗಳವರೆಗೆ ಕಂಪನಗಳನ್ನು ದಾಖಲಿಸಲಾಗಿದೆ. ಜನ ಗಾಬರಿಯಾಗಿ, ಮನೆಗಳಿಂದ ಓಡಿಹೋದರು. ಕಳೆದ ಮೂರು ದಿನಗಳಲ್ಲಿ ಇದು ಮೂರನೇ ಕಂಪನವಾಗಿದೆ. ಸುಳ್ಯದಲ್ಲಿ ಎರಡನೇ ಕಂಪನ ದಾಖಲಾಗಿದೆ. ಭಾರೀ ಸದ್ದು ಮಾಡುವುದರೊಂದಿಗೆ ಭೂಕಂಪ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಂಪನದ ಸಮಯದಲ್ಲಿ, ಪೀಠೋಪಕರಣಗಳು, ಚಾವಣಿ ಮತ್ತು ಮೇಲಿನ ಶೀಟ್ಗಳು ಮತ್ತು ಮನೆಯಲ್ಲಿದ್ದ ವಸ್ತುಗಳು ಅಲುಗಾಡಿದೆ ಎಂದು ಹೇಳಲಾಗಿದೆ. ಮೂರು ದಿನಗಳ ಹಿಂದೆ ಸುಳ್ಯದಲ್ಲಿ ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ ಮಂಗಳವಾರ ಈ ಪ್ರದೇಶದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ. ಬೆಂಗಳೂರಿನಿಂದ 238 ಕಿ.ಮೀ ದೂರದಲ್ಲಿ 5 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಕೆಎಸ್ಡಿಎಂಎ) ಭೂಕಂಪಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
Earthquake In Several Districts Of Karnataka
Follow Us on : Google News | Facebook | Twitter | YouTube