ಮೈಸೂರು ಅರಮನೆ ಆವರಣದಲ್ಲಿ ಅಂತಿಮ ಹಂತದ ಯೋಗಾಭ್ಯಾಸ ತಾಲೀಮು
ಯೋಗಾಭ್ಯಾಸದ ಅಂತಿಮ ಹಂತದ ತಾಲೀಮು ನಿನ್ನೆ ಮೈಸೂರು ಅರಮನೆ ಆವರಣದಲ್ಲಿ ನಡೆಯಿತು.
ಮೈಸೂರು: ಅಂತರಾಷ್ಟ್ರೀಯ ಯೋಗ ದಿನವನ್ನು ನಾಳೆ (ಮಂಗಳವಾರ) ಆಚರಿಸಲು ನಿರ್ಧರಿಸಲಾಗಿದೆ. ಮೈಸೂರು ಅರಮನೆ ಆವರಣದಲ್ಲಿ ನಡೆಯುವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಇಂದು (ಸೋಮವಾರ) ಕರ್ನಾಟಕಕ್ಕೆ ಮೋದಿ ಆಗಮಿಸುತ್ತಿದ್ದಾರೆ.
ಪ್ರಧಾನಿ ಮೋದಿ ಜೊತೆಗೂಡಿ ಸುಮಾರು 15,000 ಜನರು ಯೋಗಾಭ್ಯಾಸ ಮಾಡುವ ನಿರೀಕ್ಷೆಯಿದೆ. ಮೈಸೂರಿನಲ್ಲಿ ಯೋಗ ದಿನಾಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಹೀಗಾಗಿ ಮೈಸೂರು ಸಂಭ್ರಮ ಜೋರಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ಭಾಗವಹಿಸಲಿರುವ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಮೈಸೂರು ರಾಜಮನೆತನಕ್ಕೆ ಸರ್ಕಾರ ಆಹ್ವಾನ ನೀಡಿದೆ. ಅದೇನೆಂದರೆ, ಮೈಸೂರು ಅರಮನೆಯಲ್ಲಿ ರಾಜಕುಮಾರ ಯಾದವ್ ಅವರ ಜೊತೆ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ರಾಮದಾಸ್ ಮತ್ತು ಎಲ್ ನಾಗೇಂದ್ರ ಭೇಟಿಯಾಗಿ ಸಾಂಪ್ರದಾಯಿಕವಾಗಿ ರಾಣಿ ಪ್ರಮೋದದೇವಿಯನ್ನು ಆಹ್ವಾನಿಸಿದರು.
ಈ ನಡುವೆ ನಿನ್ನೆ ಅಂತಿಮ ಯೋಗಾಭ್ಯಾಸ ತಾಲೀಮು ನಡೆಯಿತು. ಸುಮಾರು 6,000 ಜನರು ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಮೈಸೂರಿನಾದ್ಯಂತ ಭಾರೀ ಪೊಲೀಸ್ ಭದ್ರತೆ ಏರ್ಪಡಿಸಿರುವುದು ಗಮನಾರ್ಹ.
Final phase yoga practice rehearsal at Mysore Palace Complex
Follow Us on : Google News | Facebook | Twitter | YouTube