ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅರಣ್ಯದಲ್ಲಿ 4 ಕಡೆ ಕಾಡ್ಗಿಚ್ಚು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅರಣ್ಯದಲ್ಲಿ 4 ಕಡೆ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಇದರಿಂದ 20 ಎಕರೆ ಮರ, ಗಿಡ, ಬಳ್ಳಿಗಳು ಸುಟ್ಟು ನಾಶವಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅರಣ್ಯದಲ್ಲಿ 4 ಕಡೆ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಇದರಿಂದ 20 ಎಕರೆ ಮರ, ಗಿಡ, ಬಳ್ಳಿಗಳು ಸುಟ್ಟು ನಾಶವಾಗಿವೆ.

ಬಂಟ್ವಾಳ ಅರಣ್ಯದಲ್ಲಿ ಕಾಡ್ಗಿಚ್ಚು

ಕರ್ನಾಟಕದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲಿನ ಬೇಗೆ ಸುಡುತ್ತಿದೆ. ಇದರಿಂದ ರಾಜ್ಯದಲ್ಲಿ ಕಾಡ್ಗಿಚ್ಚು ಮರುಕಳಿಸುವ ಘಟನೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅರಣ್ಯ ಪ್ರದೇಶದಲ್ಲಿಯೂ ಕಾಡ್ಗಿಚ್ಚು ಕಾಣಿಸಿಕೊಂಡಿದೆ.

ಬಂಟ್ವಾಳ ಅರಣ್ಯದಲ್ಲಿ 4 ಕಡೆ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಕಾಡ್ಗಿಚ್ಚು ಕಾಣಿಸಿಕೊಂಡು ಮರ, ಗಿಡ ಸುಟ್ಟು ಭಸ್ಮವಾಗಿವೆ. ಈ ಬಗ್ಗೆ ಆ ಭಾಗದ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅರಣ್ಯದಲ್ಲಿ 4 ಕಡೆ ಕಾಡ್ಗಿಚ್ಚು - Kannada News

ಇದರಿಂದ ಅಗ್ನಿಶಾಮಕ ದಳದೊಂದಿಗೆ ಅರಣ್ಯ ಇಲಾಖೆ ನೀರು ಚಿಮುಕಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಬಂಟ್ವಾಳದಲ್ಲಿ ಒಂದೇ ಅಗ್ನಿಶಾಮಕ ವಾಹನ ಇದ್ದ ಕಾರಣ ಮಂಗಳೂರಿನಿಂದ ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ಕರೆಸಿ 4 ಕಡೆ ಕಾಡ್ಗಿಚ್ಚು ನಂದಿಸಲಾಯಿತು. ಆದರೆ, 4 ಕಡೆ 20 ಎಕರೆ ಮರ, ಗಿಡ, ಬಳ್ಳಿಗಳು ಸುಟ್ಟು ನಾಶವಾಗಿವೆ.

ಯಾವುದೇ ಕಾಡು ಪ್ರಾಣಿಗಳು ಬಲಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಬಿಸಿಲಿನ ತಾಪದಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

Forest fire at 4 places in Dakshina Kannada Bantwala

Follow us On

FaceBook Google News

Advertisement

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅರಣ್ಯದಲ್ಲಿ 4 ಕಡೆ ಕಾಡ್ಗಿಚ್ಚು - Kannada News

Forest fire at 4 places in Dakshina Kannada Bantwala

Read More News Today