ಗದಗ; ಅಗ್ನಿಪಥ ಯೋಜನೆಯ ಆಕಾಂಕ್ಷಿಗಳಿಗಾಗಿ ಉಚಿತ ತರಬೇತಿ ಕಾರ್ಯಗಾರ

ಅಗ್ನಿಪಥ ಯೋಜನೆಯ ಆಕಾಂಕ್ಷಿಗಳಿಗಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಗರದಲ್ಲಿ ಉಚಿತವಾಗಿ ತರಬೇತಿ ಕಾರ್ಯಗಾರ

ಭಾರತ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಅಗ್ನಿಪಥ (Agnipath). ಅಗ್ನಿವೀರರಾಗಿ (Agniveers) ಆಯ್ಕೆ ಬಯಸುವ ನಗರ ಮತ್ತು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಸೂಕ್ತ ತರಬೇತಿಯ ಕೊರತೆಯಿಂದ ಆಯ್ಕೆಯಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಕಾರ್ಯಾಗಾರ ನಡೆಸಲಾಗುತ್ತಿದೆ.

ಇದನ್ನೂ ಓದಿ : Bigg Boss Sonu Gowda; ಆ ವಿಡಿಯೋ ಬಗ್ಗೆ ಮಾತನಾಡಿದ ಸೋನು ಗೌಡ

Agnipath Training in Gadagಮಾಜಿ ಸೈನಿಕರ ಸಹಕಾರ ಸಹಯೋಗದೊಂದಿಗೆ ಬಿಜೆಪಿ ಮುಖಂಡ ಸೋಮೇಶ ಉಪನಾಳ (BJP leader Somesh Upanal) ನೇತೃತ್ವದಲ್ಲಿ ಮಾಜಿ ಸೈನಿಕರುಗಳಾದ ಎಂ ಎಫ್ ಹಾವೇರಿಮಠ, ಚನ್ನಬಸಪ್ಪ ಹುಡೇದ್, ಈರಣ್ಣಾ ಅಣ್ಣಿಗೇರಿ, ಅಶೋಕ್ ಪ್ಯಾಟಿ, ಬಸವರಾಜ್ ಸುರಣಗಿ ಮುಂತಾದವರು ಸೇರಿ ಸುಮಾರು ನೂರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಗರದಲ್ಲಿ ಉಚಿತವಾಗಿ ತರಬೇತಿ ಕಾರ್ಯಗಾರವನ್ನು (free training workshop) ನಡೆಸಲಾಗುತ್ತಿದೆ.

ಗದಗ; ಅಗ್ನಿಪಥ ಯೋಜನೆಯ ಆಕಾಂಕ್ಷಿಗಳಿಗಾಗಿ ಉಚಿತ ತರಬೇತಿ ಕಾರ್ಯಗಾರ - Kannada News

ಈ ಉಚಿತ ಕಾರ್ಯಾಗಾರವನ್ನು ಆಗಸ್ಟ್ 01 ರಿಂದ 31ರವರೆಗೆ ಹಮ್ಮಿಕೊಳ್ಳಲಾಗಿದೆ. ಅಭ್ಯರ್ಥಿಗಳು ಅತೀವ ಆಸಕ್ತಿಯಿಂದ ತರಬೇತಿಯಲ್ಲಿ ಪಾಲ್ಗೊಂಡು ದೈಹಿಕ ಪರಿಶ್ರಮದಲ್ಲಿ ನಿರತರಾಗಿ ಆಯ್ಕೆಯಾಗುವ ಭರವಸೆಯನ್ನು ಹೊಂದಿದ್ದಾರೆ.

ಗದಗ; ಅಗ್ನಿಪಥ ಯೋಜನೆಯ ಆಕಾಂಕ್ಷಿಗಳಿಗಾಗಿ ಉಚಿತ ತರಬೇತಿ ಕಾರ್ಯಗಾರ

Follow us On

FaceBook Google News