ಜಗಜ್ಯೋತಿ ಬಸವಣ್ಣನ ಸ್ಮರಣೆ, ಗ್ರಾಮೀಣ ಭಾಗಗಳಲ್ಲಿ ಬಸವ ಜಯಂತಿ ಆಚರಣೆ ಹಬ್ಬ

Grand festival of Basava Jayanti in rural areas

ಜಗಜ್ಯೋತಿ ಬಸವಣ್ಣನ ಸ್ಮರಣೆ, ಗ್ರಾಮೀಣ ಭಾಗಗಳಲ್ಲಿ ಬಸವ ಜಯಂತಿ ಆಚರಣೆ ಹಬ್ಬ.

ಬಾಗಲಕೋಟೆ: ಶರಣರು ನಡೆದಾಡಿದ ಬಿಡು ಬಾಗಲಕೋಟ್ ಅವರು ಮಂಗಳವಾರ ಬಸವ ಜಯಂತಿಯನ್ನು ಹಬ್ಬದ ಸಡಗರ ಸಂಭ್ರಮದಲ್ಲಿ ಆಚರಿಸಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ‘ಬಸವನ ಹಬ್ಬ’ವಾದರೆ ನಗರ ಪ್ರದೇಶಗಳಲ್ಲಿ ಬಸವ ಜಯಂತಿ ಎನಿಸಿದೆ.

ಜಿಲ್ಲೆಯ ವೀರಶೈವ-ಲಿಂಗಾಯತ ಸಂಘ ಸಂಸ್ಥೆಗಳು ಈ ದಿಸೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ಹಲವು ದಿನಗಳ ಹಿಂದೆಯೇ ಸಿದ್ಧಗೊಳಿಸಿವೆ. ಎಲ್ಲ ಮಠಗಳಲ್ಲಿಯೂ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ವಚನ ಪಠಣ, ಸ್ವಾಮೀಜಿ ಅವರಿಂದ ಆಶೀರ್ವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

“ಕಾಯಕವೇ ಕೈಲಾಸ” ಎಂಬಂತೆ ಕಾಯಕದಲ್ಲಿ ದೇವರನ್ನು ಕಾಣುವ ಕಾಯಕ ಯೋಗಿ ಬಸವೇಶ್ವರರ ಸಮಸಮಾಜದ ಆಶಯಗಳನ್ನು ನೆನಪು ಮಾಡಿಕೊಳ್ಳಲಾಗುತ್ತದೆ. ನಗರದಲ್ಲಿ ವೀರಶೈವ-ಲಿಂಗಾಯತ ಸಂಘನೆಗಳು ಬಸವೇಶ್ವರ, ರೇಣುಕಾಚಾರ್ಯ ಹಾಗೂ ಸಿದ್ಧರಾಮೇಶ್ವರರ ಜಯಂತಿಯನ್ನು ಒಗ್ಗೂಡಿ ಆಚರಿಸುತ್ತಿವೆ.

ಜಗಜ್ಯೋತಿ ಬಸವಣ್ಣನ ಸ್ಮರಣೆ, ಗ್ರಾಮೀಣ ಭಾಗಗಳಲ್ಲಿ ಬಸವ ಜಯಂತಿ ಆಚರಣೆ ಹಬ್ಬ - Kannada News

ರೇಣುಕಾಚಾರ್ಯ, ಬಸವಣ್ಣ, ಸಿದ್ದರಾಮೇಶ್ವರರಿಗೆ ಕೋಡಿ ಬಸವೇಶ್ವರ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ ನಡೆಯಲಿದೆ. ನಂತರ ಬಸವೇಶ್ವರ ಕಾಲೇಜ ವೃತ್ತದಿಂದ ಮೆರವಣಿಗೆ ಆರಂಭವಾಗಲಿದೆ. ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೋಡಿ ಬಸವೇಶ್ವರ ದೇವಸ್ಥಾನದ ಬಳಿ ಮೆರವಣಿಗೆ ಕೊನೆಗೊಳ್ಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಮಾಜದ ಅಧಿಕಾರಿಗಳನ್ನು ಈ ವೇಳೆ ಗೌರವಿಸಲಾಗುತ್ತದೆ.

ವೀರಶೈವ ಸಮಾಜದ ಮಹಿಳಾ ಸಂಘಗಳು, ಅಕ್ಕನ ಬಳಗ, ಕದಳಿ ಮಹಿಳಾ ವೇದಿಕೆ ಹೀಗೆ ವಿವಿಧ ಸಂಘ ಸಂಸ್ಥೆಗಳಿಂದ ವಚನ ಗಾಯನ ನಡೆಯಲಿದೆ. ಸಮ ಸಮಾಜದ ಆಶಯಗಳನ್ನು ಹೊಂದಿರುವ ವಿವಿಧ ಸಂಘಟನೆಗಳೂ ಬಸವೇಶ್ವರರನ್ನು ಸ್ಮರಿಸಲಿವೆ.

ಗ್ರಾಮೀಣ ಭಾಗಗಳಲ್ಲಿ ಬಸವೇಶ್ವರರನ್ನು ನೆನೆಯುತ್ತಲೇ ಕೃಷಿ ಕಾಯಕಕ್ಕೆ ರೈತರಿಗೆ ಹೆಗಲು ಕೊಡುವ ಎತ್ತುಗಳನ್ನೂ ಪೂಜಿಸಲಾಗುತ್ತದೆ. ಬಸವನ ಪೂಜೆಯ ಸಂಭ್ರಮ ಹಳ್ಳಿಗಳಲ್ಲಿ ಮನೆ ಮಾಡುತ್ತದೆ. ಬೆಳಿಗ್ಗೆಯೇ ಎತ್ತುಗಳ ಮೈ ತೊಳೆದು ಪೂಜಿಸಿ, ಬೆಲ್ಲವನ್ನು ತಿನ್ನಿಸುವರು. ಸರ್ಕಾರಿ ಕಚೇರಿಗಳಲ್ಲಿಯೂ ಬಸವೇಶ್ವರರ ಜಯಂತಿ ಆಚರಣೆ ನಡೆಯಲಿದೆ.////

Get Today Kannada News Headlines on kannadanews.today

Follow us On

FaceBook Google News