Belagavi : ಬೆಳಗಾವಿ ವರದಿ ದಿನಪತ್ರಿಕೆ ಸುದ್ದಿಯ ಇಂಪ್ಯಾಕ್ಟ್

Belagavi News : ನರಳಾಡುತ್ತಿದ್ದ ಅಜ್ಜಿಗೆ ಆಸರೆಯಾದ ಬೆಳಗಾವಿ ವರದಿ ಪತ್ರಿಕೆ ಸುದ್ದಿ...  ಹೌದು ಬೆಳಗಾವಿ ನಗರದಲ್ಲಿ ಓರ್ವ ಅಜ್ಜಿ ಕುಷ್ಟ ರೋಗದಿಂದ ಬಳಲುತ್ತಿದ್ದರು, ನಡೆಯಲಾಗದೆ ರಸ್ತೆಬದಿಯಲ್ಲೇ ಕುಸಿದು ಬಿದ್ದಿದ್ದರು, ದಾರಿಹೋಕರು ಗಮನ ಹರಿಸದೆ ಮಾನವೀಯತೆ ಮರೆತು ಹಾಗೆ ನೋಡಿ ನೋಡಿ ಹೋಗುತ್ತಿದ್ದರು.

🌐 Kannada News :

ಬೆಳಗಾವಿ (Belagavi) : ನರಳಾಡುತ್ತಿದ್ದ ಅಜ್ಜಿಗೆ ಆಸರೆಯಾದ ಬೆಳಗಾವಿ ವರದಿ ಪತ್ರಿಕೆ ಸುದ್ದಿ …  ಹೌದು ಬೆಳಗಾವಿ ನಗರದಲ್ಲಿ ಓರ್ವ ಅಜ್ಜಿ ಕುಷ್ಟ ರೋಗದಿಂದ ಬಳಲುತ್ತಿದ್ದರು, ನಡೆಯಲಾಗದೆ ರಸ್ತೆಬದಿಯಲ್ಲೇ ಕುಸಿದು ಬಿದ್ದಿದ್ದರು, ದಾರಿಹೋಕರು ಗಮನ ಹರಿಸದೆ ಮಾನವೀಯತೆ ಮರೆತು ಹಾಗೆ ನೋಡಿ ನೋಡಿ ಹೋಗುತ್ತಿದ್ದರು.

ಆದರೆ ಬೆಳಗಾವಿ ವರದಿ ಪತ್ರಿಕೆ ಸಂಪಾದಕರ ಗಮನಕ್ಕೆ ಇದು ಬಂದ ಕೂಡಲೇ ಅಜ್ಜಿಯನ್ನು ವಿಚಾರಿಸಿ ನ್ಯೂಸ್ ಬೆಳಗಾಂ ಪೊರ್ಟಲ್ ನಲ್ಲಿ ಸುದ್ದಿ ಪ್ರಸಾರ ಮಾಡಿದಾಗ ಸುದ್ದಿ ನೋಡಿ ತಡವಾಗಿ  ಸ್ಪಂದಿಸಿದ ಮಹಾನಗರ ಪಾಲಿಕೆ ವೈದ್ಯಾಧಿಕಾರಿಗಳಾದ ಸಂಜವ ಡುಮ್ಮಗೋಳ ಜಿಲ್ಲಾ ಆಸ್ಪತ್ರೆಗೆ ಕರೆ ಮಾಡಿ ಅಜ್ಜಿಯನ್ನು ಕರೆದೊಯ್ದು ತಕ್ಷಣ ವೈದ್ಯಕೀಯ ಉಪಚಾರ ನೀಡುವಂತೆ ಸಲಹೆ ನೀಡಿದ್ದರು.

ಅಣ್ಣಾ ಸಾಹೇಬ್ ಪಾಟೀಲ್ ವೈದ್ಯಕೀಯ ಅಧೀಕ್ಷಕರು ಜಿಲ್ಲಾ ಆಸ್ಪತ್ರೆ ಬೆಳಗಾವಿ ಇವರು ಕೂಡ ಸ್ಪಂದಿಸಿ ಜಿಲ್ಲಾ ಆಸ್ಪತ್ರೆಯ ವೈದ್ಯರಿಗೆ ಆಕೆಗೆ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದರು..  ಸದ್ಯ ಅಜ್ಜಿಯನ್ನು ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಉಪಚಾರ ಮಾಡುತ್ತಿದ್ದಾರೆ.

ಅಂತೂ ಇಂತೂ ನರಳಾಡುತ್ತಿದ್ದ ದಾವಣಗೆರೆ ಮೂಲದ ಅಜ್ಜಿ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಶೀಘ್ರವೇ ಸ್ಪಂದಿಸಿ ಅಜ್ಜಿಯನ್ನ ಕರೆದೊಯ್ದು ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಬೆಳಗಾವಿ ವರದಿ ಕಡೆಯಿಂದ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಬಗ್ಗೆ ಸಂಪಾದಕ ಸತೀಶ್ ಬಿ ಜಿ ಮಾತನಾಡಿ ಅಸಾಯಕರಿಗೆ ಆಸರೆ ಆಗುವುದು ಅಷ್ಟು ಕಷ್ಟವೇ… ಅಲ್ಲಿ ಅಜ್ಜಿಯನ್ನು ಆ ಸ್ಥಿತಿಯಲ್ಲಿ ಕಂಡು ಅನೇಕರು ನಮಗೆ ಸಂಬಂಧವೇ ಇಲ್ಲದಂತೆ ಹೊರಟು ಹೋದರು ಆಗ ಮನಸ್ಸಿಗೆ ಸ್ವಲ್ಪ ಬೇಸರವಾಯಿತು ಎಂದರು.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today