ಕರಾಮುವಿ ಪ್ರವೇಶಾತಿ ದಿನಾಂಕ ವಿಸ್ತರಣೆ

ಕರಾಮುವಿಯಲ್ಲಿ ಪ್ರವೇಶಾತಿಗೆ ದಂಡ ಶುಲ್ಕವಿಲ್ಲದೆ ಡಿಸೆಂಬರ್ 15 ಕೊನೆ ದಿನ

Online News Today Team

ಮೈಸೂರಿನ ಕರಾಮುವಿಯು ಪ್ರಸಕ್ತ 2021-22ನೇ (ಜುಲೈ ಆವೃತ್ತಿ) ಶೈಕ್ಷಣಿಕ ಸಾಲಿನ ಪ್ರಥಮ ವರ್ಷಕ್ಕೆ ಸ್ನಾತಕ/ಸ್ನಾತಕೋತ್ತರ ಕೋರ್ಸ್ ಗಳಾದ ಬಿ.ಎ/ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ., ಬಿ.ಎಸ್ಸಿ., ಬಿ.ಎಸ್ಸಿ.(ಐ.ಟಿ)., ಎಂ.ಎ/ಎಂ.ಸಿ.ಜೆ., ಎಂ.ಕಾಂ., ಬಿ.ಎಲ್.ಐ.ಎಸ್ಸಿ., ಎಂ.ಎಲ್.ಐ.ಎಸ್ಸಿ., ಎಂ.ಎಸ್ಸಿ. ಎಂ.ಬಿ.ಎ., ಪಿ.ಜಿ. ಡಿಪ್ಲೋಮಾ ಪ್ರೋಗ್ರಾಮ್ಸ್., ಡಿಪ್ಲೋಮಾ ಪ್ರೋಗ್ರಾಮ್ಸ್., ಸರ್ಟಿಫಿಕೇಟ್ ಪ್ರೋಗ್ರಾಮ್ಸ್ಗಳಿಗೆ ದಂಡ ಶುಲ್ಕವಿಲ್ಲದೆ 15/12/2021 ರ ವರೆಗೆ ಪ್ರವೇಶಾತಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ರಜಾ ದಿನಗಳಾದ ಎರಡನೇ ಹಾಗೂ ನಾಲ್ಕನೇ ಶನಿವಾರ ಮತ್ತು ಭಾನುವಾರಗಳಂದು ಕಛೇರಿ ತೆರೆಯುವ ಮೂಲಕ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗುತ್ತದೆ.

ಕರಾಮುವಿಯ ಅಧಿಕೃತ ವೆಬ್‌ಸೈಟ್ www.ksoumysuru.ac.in ನಲ್ಲಿ KSOU Admission Portal ಮೂಲಕ ಈ ಮೇಲ್ಕಂಡ ಪದವಿಗಳಿಗೆ ಅನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಅನ್‌ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಲು ಪ್ರಾದೇಶಿಕ ನಿರ್ದೇಶಕರಾದ ಡಾ. ಲೋಕೇಶ. ಆರ್ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- ಪ್ರಾದೇಶಿಕ ನಿರ್ದೇಶಕರು, ಕ.ರಾ.ಮು.ವಿ ಮಹಿಳಾ ಪ್ರಾದೇಶಿಕ ಕೇಂದ್ರ, ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು, 4ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-03. ಕಛೇರಿ ದೂರವಾಣಿ ಸಂಖ್ಯೆ:- 080 23448811, 9844506629, 9620395584, 7760848564.

Follow Us on : Google News | Facebook | Twitter | YouTube